Highest Grossing Movies of 2023 : 2023 ರಲ್ಲಿ ಭಾರತೀಯ ಚಲನಚಿತ್ರೋದ್ಯಮವು ಹಲವಾರು ಬ್ಲಾಕ್‌ಬಸ್ಟರ್ ಹಿಟ್‌ಗಳಿಗೆ ಸಾಕ್ಷಿಯಾಯಿತು. ಜವಾನ್‌ನಿಂದ ಜೈಲರ್‌ವರೆಗೆ 2023 ರಲ್ಲಿ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಭಾರತೀಯ ಚಲನಚಿತ್ರಗಳ ಪಟ್ಟಿ ಇಲ್ಲಿದೆ... 


COMMERCIAL BREAK
SCROLL TO CONTINUE READING

ಜವಾನ್ : ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜವಾನ್ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡಿದೆ. ಅಟ್ಲೀ ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ ಒಟ್ಟು 1160 ಕೋಟಿ ರೂ. ಕಲೆಕ್ಷನ್‌ ಮಾಡಿದೆ. 


ಪಠಾಣ್ : ಶಾರುಖ್ ಖಾನ್ ನಟನೆಯ ಪಠಾಣ್‌ ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ಮುರಿಯಿತು. ವಿಶ್ವದಾದ್ಯಂತ ಚಿತ್ರದ ಒಟ್ಟು ಕಲೆಕ್ಷನ್ 1055 ಕೋಟಿ ರೂ. ಆಗಿದೆ. 


ಅನಿಮಲ್‌ : ರಣಬೀರ್ ಕಪೂರ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್‌ ಸಿನಿಮಾ ಸಹ ಬಾಕ್ಸ್‌ ಆಫಿಸ್‌ನಲ್ಲಿ ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ ಇದು 717.46 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.


ಇದನ್ನೂ ಓದಿ: Ramya : ಮೋಹಕ ತಾರೆ ರಮ್ಯಾ ಎಲ್ಲಿಯವರೆಗೆ ಓದಿದ್ದಾರೆ ಗೊತ್ತೇ! 


ಗದರ್ 2 : ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅವರ ಗದರ್ 2 ಗಲ್ಲಾಪೆಟ್ಟಿಗೆಯಲ್ಲಿ ಇತಿಹಾಸವನ್ನು ಸೃಷ್ಟಿಸಿತು. ಜಾಗತಿಕವಾಗಿ 691.08 ಕೋಟಿ ರೂಪಾಯಿ ಗಳಿಸಿದೆ.


ಜೈಲರ್ : ರಜನಿಕಾಂತ್ ಅವರ ಜೈಲರ್‌ ಚಿತ್ರವು ಆಗಸ್ಟ್ 10 ರಂದು ವಿಶ್ವಾದ್ಯಂತ ತೆರೆಗೆ ಬಂದಿತು. ಒಂದು ತಿಂಗಳಿಗೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿತು. ಇದು ವಿಶ್ವಾದ್ಯಂತ ₹650 ಕೋಟಿಗೂ ಹೆಚ್ಚು ಗಳಿಸಿತು.


ಲಯನ್‌ : ವಿಜಯ್ ಅವರ ಲಯನ್‌ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 605.25 ಕೋಟಿ ರೂಪಾಯಿಗಳ ಗಡಿಯನ್ನು ಯಶಸ್ವಿಯಾಗಿ ದಾಟಿದೆ.


ಟೈಗರ್ 3‌ : ಮನೀಶ್ ಶರ್ಮಾ ನಿರ್ದೇಶನದ, ಸಲ್ಮಾನ್ ಖಾನ್ ನಟನೆಯ ಟೈಗರ್ 3 ವಿಶ್ವದಾದ್ಯಂತ 465.42 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.  


ಇದನ್ನೂ ಓದಿ: ಪ್ರಖ್ಯಾತ ನಟಿ ಕಂ ಡ್ಯಾನ್ಸರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನಿಮಲ್ ಸಿನಿಮಾ ನಟ! 


ಆದಿಪುರುಷ : ಪ್ರಭಾಸ್‌ ಅಭಿನಯದ ಆದಿಪುರುಷ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 390 ಕೋಟಿ ರೂಪಾಯಿ ಗಳಿಸಿತು.


ಪೊನ್ನಿಯಿನ್ ಸೆಲ್ವನ್ 2 : ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 2 ಚಿತ್ರವು ವಿಶ್ವಾದ್ಯಂತ 350 ಕೋಟಿ ರೂಪಾಯಿ ಆಗಿದೆ. 


ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : ಬಿಡುಗಡೆಯಾದಾಗಿನಿಂದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿತು, ವಿಶ್ವಾದ್ಯಂತ 355.61 ಕೋಟಿ ರೂಪಾಯಿ ಗಳಿಕೆ ಮಾಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.