Highest paid Asia actors: ಕಳೆದ ಕೆಲವು ವರ್ಷಗಳ ಹಿಂದೆ ಏಷ್ಯಾ ಚಿತ್ರರಂಗವೆಂದರೆ ಹಾಂಗ್​ಕಾಂಗ್​​ ಸಿನಿಮಾಗಳ ಬಗ್ಗೆ ಹೇಳುತ್ತಿದ್ದರು. ಹೀಗಾಗಿಯೇ ಬ್ರೂಸ್​ಲೀ ಮತ್ತು ಜಾಕಿಚಾನ್​​ ಅವರಂತಹ ಸ್ಟಾರ್ ನಟರು ಪ್ರಪಂಚದಾದ್ಯಂತ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ನಟರಾದ ಶಾರುಖ್ ಖಾನ್ ಮತ್ತು ಅಕ್ಷಯ್​ ಕುಮಾರ್​​​ ಜಾಗತಿಕವಾಗಿ ಖ್ಯಾತಿ ಪಡೆಯುತ್ತಿದ್ದಂತೆ ಬಾಲಿವುಡ್​ ಹೆಸರು ಮುನ್ನೆಲೆಗೆ ಬಂತು. ಆದರೆ ಇದೀಗ ಎಲ್ಲವೂ ಸಂಪೂರ್ಣವಾಗಿ ಬದಲಾಗಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಏಷ್ಯಾದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟ ದಕ್ಷಿಣ ಭಾರತದ ಸೂಪರ್​ ಸ್ಟಾರ್​. ಅದು ಬೇರೆ ಯಾರೂ ಅಲ್ಲ, ವಿಲನ್​ ಆಗಿ ವೃತ್ತಿಜೀವನ ಆರಂಭಿಸಿ ಇಡೀ ಪ್ರಪಂಚದಲ್ಲೇ ಖ್ಯಾತಿ ಗಳಿಸಿರುವ ನಟ ರಜನಿಕಾಂತ್. ಹೌದು, ಸೂಪರ್​ಸ್ಟಾರ್​ ರಜನಿಕಾಂತ್​​ ಅವರು ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂಲಗಳ ಪ್ರಕಾರ ರಜನಿಕಾಂತ್​ ತಮ್ಮ 171ನೇ ಸಿನಿಮಾ, ಲೋಕೇಶ್​ ಕನಕರಾಜ್​ ನಿರ್ದೇಶದ ʼಕೂಲಿʼ ಚಿತ್ರಕ್ಕೆ ಬರೋಬ್ಬರಿ 280 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. 


ಇದನ್ನೂ ಓದಿ: ನಾಗಶೇಖರ್ ನಿರ್ದೇಶನದ ಹೊಸ ಚಿತ್ರಕ್ಕೆ ಖ್ಯಾತ ನಟಿಯ ಪುತ್ರಿಯೇ ನಾಯಕಿ


2016ರವರೆಗೆ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಅಮೀರ್​ಖಾನ್​​ ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು. ʼದಂಗಲ್ʼ​ ಸಿನಿಮಾಗೆ ಅವರು ಬರೋಬ್ಬರಿ 275 ಕೋಟಿ ರೂ. ಸಂಭಾವನೆ ಪಡೆದಿದ್ದರು. ಬಳಿಕ 2017ರಲ್ಲಿ ಜಾಕಿಚಾನ್​​ 60 ಮಿಲಿಯನ್​ ಡಾಲರ್​ ಪಡೆಯುವ ಮೂಲಕ ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಂದಿನಿಂದ ಯಾವುದೇ ಸ್ಟಾರ್​​ ಈ ದಾಖಲೆಯನ್ನು ಮುರಿದಿಲ್ಲ. 


ಈಗ ರಜನಿಕಾಂತ್​ ಆ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಹುಕಾಲದವರೆಗೂ ರಜನಿಕಾಂತ್​​ ತಮ್ಮ ಸಿನಿಮಾಗಳಿಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದರು. ಇತ್ತೀಚೆಗೆ ಸಂಭಾವನೆ ಜೊತೆಗೆ ಸಿನಿಮಾ ಲಾಭದಲ್ಲಿನ ಗಳಿಕೆಯ ಲಾಭವನ್ನು ಸಹ ಪಡೆದುಕೊಂಡು ತಮ್ಮ ಗಳಿಕೆ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಮಾಡುತ್ತಿರುವ ಕಲೆಕ್ಷನ್​​ ಪರಿಗಣಿಸಿ ಪ್ರತಿಚಿತ್ರಕ್ಕೆ ಸುಮಾರು 150-250 ಕೋಟಿ ರೂ. ಪಡೆಯುವ ಮೂಲಕ ರಜನಿ ಬಾಲಿವುಡ್‌ನ​ ಖಾನ್​​ಗಳನ್ನೇ ಗಳಿಕೆಯಲ್ಲಿ ಹಿಂದಿಕ್ಕಿದ್ದಾರೆ.


ಇದನ್ನೂ ಓದಿ: ದರ್ಶನ್ ಅಸಭ್ಯವಾಗಿ ಮಧ್ಯದ ಬೆರಳು ತೋರಿಸಿಲ್ಲ..! ಅದು ಒಂದು ವಿಶೇಷವಾದ ʼಯೋಗ ಮುದ್ರೆʼ.. ವಿಡಿಯೋ ವೈರಲ್‌


ಅಂದಹಾಗೆ ಲೋಕೇಶ್ ಕನಕರಾಜ್​​ ಆಕ್ಷನ್‌​ ಕಟ್​ ಹೇಳುತ್ತಿರುವ ರಜನಿಕಾಂತ್​​ ಅವರ ʼಕೂಲಿʼಯಲ್ಲಿ ತೆಲುಗಿನ ನಾಗಾರ್ಜುನ, ಶ್ರುತಿಹಾಸನ್​​, ಸತ್ಯರಾಜ್​, ಉಪೇಂದ್ರ, ಶಿವಕಾರ್ತಿಕೇಯನ್​, ರಾಘವ ಲಾರೆನ್ಸ್​​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಹುಬಜೆಟ್‌ನ ಸಿನಿಮಾವನ್ನು 2025ಕ್ಕೆ ರಿಲೀಸ್‌ ಮಾಡಲು ಚಿತ್ರತಂಡ ನಿರ್ಧರಿಸಿದೆ ಅಂತಾ ವರದಿಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.