ಈಗಾಗಲೇ 'ತಾರಕ್' ಚಿತ್ರದ ಹಾಡುಗಳ ಮೋಡಿಗೆ ಫಿದಾ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿಮಾನಿಗಳಿಗೆ ಬಹುನಿರೀಕ್ಷಿತ 'ತಾರಕ್' ಚಿತ್ರದ ಮೊದಲ ಟೀಸರ್ ನೋಡುವ ಭಾಗ್ಯ ಇಂದು ದೊರೆಯಲಿದೆ. ಸಂಜೆ 5 ಗಂಟೆಗೆ ಟೀಸರ್ ಬಿಡುಗಡೆಯಾಗಲಿದೆ ಎಂಬ ವಿಷಯವನ್ನು ದರ್ಶನ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಶೃತಿ ಹರಿಹರನ್ ನಾಯಕಿಯಾಗಿದ್ದಾರೆ. ಡೈನಮಿಕ್ ಸ್ಟಾರ್ ದೇವರಾಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಅವರ ಅದ್ಭುತ ಸಂಗೀತ ಸಂಯೋಜನೆ ಚಿತ್ರಕ್ಕಿದೆ.


ಇದೇ ಮೊದಲ ಬಾರಿಗೆ ದರ್ಶನ್ ಒಬ್ಬ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ 'ತಾರಕ್' ಚಿತ್ರವೂ ಅಭಿಮಾನಿಗಳಲ್ಲಿ ಬಹಳ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದೆ.