ನವದೆಹಲಿ: ಕಿರುತೆರೆಯಿಂದ ಸೋಷಿಯಲ್ ಮೀಡಿಯಾದವರೆಗೂ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಹಿನಾ ಖಾನ್(Hina Khan) ಇದೀಗ ವಿಕ್ರಮ್ ಭಟ್ ಅವರೊಂದಿಗೆ ಬಾಲಿವುಡ್‌ನಲ್ಲಿ ಪದಾರ್ಪಣೆ ಮಾಡಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಹಿನಾ ಖಾನ್ ಅವರೊಂದಿಗೆ ಚಿತ್ರ ನಿರ್ಮಾಪಕ ವಿಕ್ರಮ್ ಭಟ್ ರವರ 'ಹ್ಯಾಕ್ಡ್'(Hacked)  ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಚಿತ್ರ ಬಿಡುಗಡೆಗೂ ಮೊದಲು ಇದೀಗ Hacked ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಇದರಲ್ಲಿ ಹಿನಾ ಸಖತ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾದ ನಕಾರಾತ್ಮಕ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದ್ದು, ಹಿನಾ ಖಾನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗಿದೆ 'Hacked':
ಈ ಚಿತ್ರ ಮುಂದಿನ ತಿಂಗಳು ಅಂದರೆ ಫೆಬ್ರವರಿ 7 ರಂದು ತೆರೆ ಮೇಲೆ ಕಾಣಿಸಿಕೊಳ್ಳಲಿದೆ. ಈ ಚಿತ್ರದ ಪೋಸ್ಟರ್ ಅನ್ನು ಹಿನಾ ಖಾನ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟರ್ ಅನ್ನು 15 ಗಂಟೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗ ತೊಡಗಿದೆ. ಸೈಬರ್ ಅಪರಾಧದ ಬಗ್ಗೆ ಚಲನಚಿತ್ರದಲ್ಲಿ  ತೋರಿಸಲಾಗಿದೆ  ಮತ್ತು ವೆಬ್‌ನಲ್ಲಿ ಪ್ರತಿಯೊಂದು ಸಣ್ಣ ಸಂಗತಿಗಳನ್ನು ಹಂಚಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಚಿತ್ರ ಬಿಂಬಿಸಲಿದೆ ಎಂದು ಹೇಳಲಾಗುತ್ತಿದೆ.  ಚಿತ್ರದಲ್ಲಿ ಹಿನಾ ಪಾತ್ರ ಸಾಕಷ್ಟು ಮನಮೋಹಕವಾಗಿದೆ. ಅಮರ್ ಪಿ. ಠಕ್ಕರ್ ಮತ್ತು ಕೃಷ್ಣ ಭಟ್ ನಿರ್ಮಿಸಿದ ಈ ಚಿತ್ರದಲ್ಲಿ ರೋಹನ್ ಶಾ, ಮೋಹಿತ್ ಮಲ್ಹೋತ್ರಾ ಮತ್ತು ಸಿಡ್ ಮಕ್ಕರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.



ಹಿನಾ ಇತ್ತೀಚಿಗಷ್ಟೇ ತಮ್ಮ ರಜಾದಿನಗಳನ್ನು ಮುಗಿಸಿ ಮಾಲ್ಡೀವ್ಸ್‌ನಿಂದ ಮರಳಿದ್ದಾರೆ. ಮಾಲ್ಡೀವ್ಸ್ ಅವರ  ಚಿತ್ರಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತಿವೆ. ಅವರು ಹಿಂದಿ 'ಬಿಗ್ ಬಾಸ್' ಸೀಸನ್ 11 ರಲ್ಲಿ ಭಾಗವಹಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಹಿನಾ ಪ್ರತಿಭಾವಂತ ನಟಿ ಮತ್ತು ಉತ್ತಮ ಡಿಸೈನರ್. ಹೀನಾ 2 ಅಕ್ಟೋಬರ್ 1987 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜನಿಸಿದರು. ಹಿನಾ ಖಾನ್ ಮೊದಲು ಪತ್ರಕರ್ತೆಯಾಗಿ ತಮ್ಮ ವೃತ್ತಿ ಜೀವನ ಆರಂಭಿಸುವ ಅಭಿಲಾಷೆ ಹೊಂದಿದ್ದರು. ಆದರೆ ನಂತರ ಏರ್ ಹೋಸ್ಟೆಸ್ ತರಬೇತಿ ನಂತರ ನಟನಾ ಜಗತ್ತಿಗೆ ಬಂದರು.