Hollywood critics awards 2023 for RRR : ಆರ್‌ಆರ್‌ಆರ್‌ ಸಿನಿಮಾ ಹಾಲಿವುಡ್ ಅಡ್ಡಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಸಾಲು ಸಾಲು ಅಂತರಾಷ್ಟ್ರೀಯ ಪ್ರಶಸ್ತಿ ಬಾಚಿಕೊಳ್ಳುತ್ತಿರುವ ರಾಜಮೌಳಿ ಸಿನಿಮಾ ಇದೀಗ ಹಾಲಿವುಡ್ ವಿಮರ್ಶಕರ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡು ಮಿಂಚುತ್ತಿದೆ. ಜೂ, ಎನ್‌ಟಿಆರ್‌, ರಾಮ್‌ಚರಣ್‌ತೇಜ್‌ ನಟನೆಯ ಈ ಚಿತ್ರವು ಅತ್ಯುತ್ತಮ ಆಕ್ಷನ್, ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ಮತ್ತು ಅತ್ಯುತ್ತಮ ಹಾಡು ಸೇರಿದಂತೆ ಮುಂತಾದ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.


COMMERCIAL BREAK
SCROLL TO CONTINUE READING

ಆರ್‌ಆರ್‌ಆರ್‌ ಚಿತ್ರ ಈಗ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದೆ. ಅತ್ಯುತ್ತಮ ಸಾಹಸ ದೃಶ್ಯ, ಅತ್ಯುತ್ತಮ ಆಕ್ಷನ್ ಸಿನಿಮಾ, ಅತ್ಯುತ್ತಮ ಹಾಡು ಮತ್ತು ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ಎಂಬ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಅತ್ಯುತ್ತಮ ಸಾಹಸ ಪ್ರದರ್ಶನಕ್ಕಾಗಿ ಪ್ರಶಸ್ತಿ ಪಡೆದ ರಾಜಮೌಳಿ ಅವರು ಪ್ರಶಸ್ತಿಯನ್ನು ತಮ್ಮ ಎಲ್ಲಾ ಸ್ಟಂಟ್ ಮಾಸ್ಟರ್‌ಗಳಿಗೆ ಅರ್ಪಿಸಿದರು. ಚಿತ್ರರಂಗದಲ್ಲಿ ಕಷ್ಟಪಟ್ಟು ದುಡಿಯುತ್ತಿರುವ ಎಲ್ಲ ಆ್ಯಕ್ಷನ್ ಕೊರಿಯೋಗ್ರಾಫರ್‌ಗಳಿಗೆ ಈ ಪ್ರಶಸ್ತಿಯನ್ನು ಅರ್ಪಿಸಿಕೊಳ್ಳುತ್ತಿದ್ದೇನೆ ಎಂದು ರಾಜಮೌಳಿ ಹೇಳಿದರು.


ಕನ್ನಡ ಚಿತ್ರರಂಗ ಪ್ರವೇಶಿಸಿದ ಡಾ.ರಾಜ್‌ಕುಮಾರ್ ಅವರ ಐವರು ಮೊಮ್ಮಕ್ಕಳಿವರು


ಇನ್ನು ಈ ಸಮಾರಂಭದಲ್ಲಿ ಪ್ರಶಸ್ತಿವೊಂದನ್ನು ನೀಡಲು ರಾಮ್ ಚರಣ್ ವೇದಿಕೆ ಮೇಲೆ ಬಂದರು. ಅತ್ಯುತ್ತಮ ವಾಯ್ಸ್ ಓವರ್ ಮೋಷನ್ ಕ್ಯಾಪ್ಚರ್ ವಿಭಾಗದಲ್ಲಿ ಸಾಧಕರೊಬ್ಬರಿಗೆ ರಾಮ್ ಚರಣ್ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ರಾಮ್ ಚರಣ್ ಹೆಸರನ್ನು ಸರಿಯಾಗಿ ಉಚ್ಛರಿಸದಿದ್ದಕ್ಕೆ ನಟಿಯೊಬ್ಬರು ವೇದಿಕೆಯಲ್ಲಿಯೇ ಕ್ಷಮೆ ಯಾಚಿಸಿದ್ದಾರೆ. ರಾಮ್ ಎಂದು ಪ್ರೀತಿಯಿಂದ ಕರೆಯುತ್ತಿದ್ದ ನಟಿ ನಂತರ ಚರಣ್ ಸೇರಿಸಿದರು. ಒಟ್ಟಿನಲ್ಲಿ ರಾಮ್ ಚರಣ್ ಈಗ ಈವೆಂಟ್ ನಲ್ಲಿ ಹಾಟ್ ಟಾಪಿಕ್ ಆಗಿದ್ದರು.


ಹಾಲಿವುಡ್ ನಿರ್ಮಾಪಕರು ಕೂಡ ರಾಮ್ ಚರಣ್ ಜೊತೆ ಮಾತುಕತೆ ನಡೆಸುತ್ತಿದ್ದಾರೆಯಂತೆ. ಚರಣ್ ಸದ್ಯದ ತಮ್ಮ ಮುಂಬರುವ ಸಿನಮಾ ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಿ ಹಾಲಿವುಡ್ ಪ್ರಾಜೆಕ್ಟ್‌ಗಳನ್ನು ಮಾಡಲು ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಗುಡ್ ಮಾರ್ನಿಂಗ್ ಅಮೇರಿಕಾ ಮತ್ತು ಎಬಿಸಿ ಮಾಧ್ಯಮಗಳ ಸಂದರ್ಶನದಲ್ಲಿ ರಾಮ್ ಚರಣ್ ನೀಡಿದ ಹೇಳಿಕೆಗಳು ಸಹ ವೈರಲ್ ಆಗಿದ್ದವು. ಈ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಅಲ್ಲದೆ, ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಗಲಿ ಎಂಬ ಭರವಸೆಯನ್ನು ರಾಮ್ ಚರಣ್ ವ್ಯಕ್ತಪಡಿಸಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.