ನವದೆಹಲಿ: ರಾಜಮೌಲಿ ನಿರ್ದೇಶನದ ಬಾಹುಬಲಿ ಚಿತ್ರವೂ ಕೇವಲ ಭಾರತೀಯ ಚಿತ್ರರಂಗದಲ್ಲಿ ಅಲ್ಲದೆ ಅದರಾಚೆಗೂ ಸಾಕಷ್ಟು ಸದ್ದು ಮಾಡಿದ ಸಿನಿಮಾ.ಇತ್ತೀಚಿಗೆ  ಇದಕ್ಕೆ ಸಾಕ್ಷಿಯೆನ್ನುವಂತೆ ಹಾಲಿವುಡ್ ಪ್ರಖ್ಯಾತ ಸ್ಟಾರ್ ಒಬ್ಬರು ಬಾಹುಬಲಿ ಚಿತ್ರಕ್ಕೆ ಮತ್ತು ಪ್ರಭಾಸ್ ನಟಗೆ ಮನಸೋತಿದ್ದಾರೆ.ಯಾರಂತೀರಾ ಹಾಗಾದ್ರೆ?


COMMERCIAL BREAK
SCROLL TO CONTINUE READING



ಹಾಲಿವುಡ್ ಬ್ಲಾಕ್ ಪ್ಯಾಂಥರ್ ಚಿತ್ರ ನಟ ವಿನ್ ಸ್ಟನ್  ಡ್ಯೂಕ್  ರವರು ಲೈವ್ ವಿತ್ ಕೆಲ್ಲಿ ಅಂಡ್ ರ್ಯಾನ್ ಶೋ ದಲ್ಲಿ ಬಾಲಿವುಡ್ ಚಿತ್ರಗಳ ಬಗ್ಗೆ ಮಾತನಾಡುತ್ತಾ ತಾವು ಟೊಬಾಗೋದಲ್ಲಿದ್ದಾಗ ಸಾಕಷ್ಟು ಬಾಲಿವುಡ್ ಚಿತ್ರಗಳನ್ನು ನೋಡಿರುವ ಬಗ್ಗೆ ಪ್ರಸ್ತಾಪಿಸಿದರು.ಆಗಿನಿಂದಲೂ ಅವರು ಬಾಲಿವುಡ್ ಚಿತ್ರಗಳ ಗ್ರೇಟ್ ಫ್ಯಾನ್ ಎಂದು ಎಂದು ತಿಳಿಸಿದರು



ಅಲ್ಲದೆ ಅವರು ಇನ್ಸ್ತಾಗ್ರಾಂ ನಲ್ಲಿ ಬಾಹುಬಲಿ ಚಿತ್ರದ ಪೋಸ್ಟರ್ ಗಳ ನ್ನು ಹಂಚಿಕೊಂಡಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಬಾಹುಬಲಿ ಟ್ವಿಟ್ಟರ್ ಖಾತೆ ಧನ್ಯವಾದಗಳನ್ನು ಅರ್ಪಿಸಿದೆ,ಅದಕ್ಕೆ ಪುನಃ ವಿನ್ಸ್ಟನ್ ಡ್ಯೂಕ್ ಮಾಸ್ಟರ್ ಪೀಸ್ ಎಂದು ಧನ್ಯವಾದ ಅರ್ಪಿಸಿದ್ದಾರೆ.