ಬೆಂಗಳೂರು: ಚಲನಚಿತ್ರ ನಿರ್ಮಾಣದಲ್ಲಿ ಯಶಸ್ಸಿನ ಓಟ ನಡೆಸುತ್ತಿರುವ ಹೊಂಬಾಳೆ ಫಿಲಂಸ್‌ ತನ್ನ ಚೊಚ್ಚಲ ಮಲಯಾಳಂ ಚಲನಚಿತ್ರವನ್ನು ಘೋಷಿಸಿದ್ದು, ಮಲಯಾಳಂನ 'ಸೂಪರ್ ಸ್ಟಾರ್' ಪೃಥ್ವಿರಾಜ್ ಸುಕುಮಾರನ್ ಅವರು ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.


COMMERCIAL BREAK
SCROLL TO CONTINUE READING

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಲಿರುವ “ಟೈಸನ್” ಆಕ್ಷನ್-ಪ್ಯಾಕ್ಡ್ ಸೋಶಿಯೋ ಥ್ರಿಲ್ಲರ್ ಆಗಿದ್ದು, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಲಿದ್ದಾರೆ ಮತ್ತು ಮುರಳಿ ಗೋಪಿ ಚಿತ್ರಕಥೆ ಮಾಡಿದ್ದಾರೆ.


ಭಾರತದ ಪ್ರಸ್ತುತತೆಗೆ ತಕ್ಕಂತೆ ನಿರ್ಮಿಸಲಾಗುತ್ತಿರುವ ಈ ಚಲನಚಿತ್ರವು ಪೃಥ್ವಿರಾಜ್ ಮತ್ತು ಮುರಳಿ ಗೋಪಿ ಸಹಯೋಗದಲ್ಲಿ ಮೂಡಿಬರುತ್ತಿರುವ ಮೂರನೇ ಚಲನಚಿತ್ರವಾಗಿದೆ. ಎಂಪುರಾನ್ ನಂತರ, ದಾಖಲೆ ಮುರಿಯುವ ಮಲಯಾಳಂ ಬ್ಲಾಕ್‌ಬಸ್ಟರ್ ಲೂಸಿಫರ್‌ನ ಮುಂದುವರಿದ ಭಾಗವಾಗಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಲೂಸಿಫರ್ ಕೂಡ ಮೆಗಾ ಹಿಟ್ ಆಗಿತ್ತು. ಟೈಸನ್‌ ಕೇರಳದ ಅತಿದೊಡ್ದ ಚಲನಚಿತ್ರಗಳಲ್ಲೊಂದಾಗಿ ಹೊರಹೊಮ್ಮಲಿದೆ. 2023ರ ಕೊನೆಯಲ್ಲಿ ತೆರೆಕಾಣಲಿದ್ದು 2024ರಲ್ಲಿ ಹಿಂದಿ ಹಾಗೂ ದಕ್ಷಿಣ ಭಾರತದ 4 ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಬಿಡುಗಡೆಯಾಗಲಿದೆ.


Chaddi Campaign: ಚಡ್ಡಿ ಸುಟ್ಟು ಶಾಸಕ ಪಿ.ರಾಜೀವ್ ಮನೆಮುಂದೆ ಬೂದಿ ಇಟ್ಟರು!


ಯಶ್‌ ಅಭಿನಯದ ಕೆಜಿಎಫ್‌-2 ಚಲನಚಿತ್ರದ ಮೂಲಕ ಸಂಚಲನವನ್ನು ಮೂಡಿಸುವ ಜತೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ತನ್ನ ಛಾಪು ಮೂಡಿಸಿದೆ. ಹಾಗೆಯೇ ಕನ್ನಡ ಚಲನಚಿತ್ರೋದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ.


ದಕ್ಷಿಣ ಭಾರತದ ನಿರ್ಮಾಣ ಸಂಸ್ಥೆಗಳನ್ನು ಮತ್ತು ಕಲಾವಿದರನ್ನು ಇಂದು ಇಡಿ ಭಾರತೀಯ ಚಿತ್ರರಂಗವೇ ಹಾಡಿ ಹೊಗಳುತ್ತಿದೆ. ಕಾಲಿವಿಡ್‌, ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ನಿಂದ ಒಬ್ಬೊಬ್ಬ ದೊಡ್ಡ ನಟರ ಸಮ್ಮಿಳನವು ಅತ್ಯದ್ಭುತ ಹೊಂದಾಣಿಕೆಯಂತೆ ಭಾಸವಾಗಿದೆ. ಆಧುನಿಕ ಯುಗದಲ್ಲಿ ಬ್ಲಾಕ್‌ ಬಸ್ಟರ್‌ ಚಿತ್ರಗಳನ್ನು ನೀಡುವ ಕಲೆಯನ್ನು ಹೊಂಬಾಳೆ ಫಿಲಂಸ್‌ ಕರಗತ ಮಾಡಿಕೊಂಡಿದೆ. ಕೆಜಿಎಫ್‌-2 ವಿಶ್ವಾದ್ಯಂತ ಭರ್ಜರಿ ಯಶಸ್ಸು ಕಂಡ ಬಳಿಕ ಹೊಂಬಾಳೆ ಫಿಲಂಸ್‌ ತನ್ನ ಸಿನಿ ಪಯಣಕ್ಕೆ ಇನ್ನಷ್ಟು ವೇಗ ನೀಡಿದೆ.


ಕೆಜಿಎಫ್‌ ಬಿಡುಗಡೆಯಾದ ತಿಂಗಳ ಅವಧಿಯಲ್ಲಿ 6 ಮೆಗಾ ಚಲನಚಿತ್ರಗಳನ್ನು ಘೋಷಿಸಿದ್ದಾರೆ. ಈ ಸಂಖ್ಯೆಗಳೇ ಹೊಂಬಾಳೆ ಫಿಲಂಸ್‌ನ ಅತ್ಯುತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಒಂದು ಕಡೆ ಸಲಾರ್ ಸಿದ್ಧವಾಗುತ್ತಿದೆ ಮತ್ತು ರಾಕಿಂಗ್ ಸ್ಟಾರ್ ಯಶ್, ಸುಧಾ ಕೊಂಗೂರ, ಪ್ರಶಾಂತ್ ನೀಲ್, ರಕ್ಷಿತ್ ಶೆಟ್ಟಿ, ಪೃಥ್ವಿರಾಜ್ ಸುಕುಮಾರನ್ ಮುಂತಾದವರು ಹೊಂಬಾಳೆ ಜತೆ ಕಾರ್ಯನಿರ್ವಹಿಸುತ್ತಿದ್ದು, ಆ ಮೂಲಕ ಭಾರತೀಯ ಚಿತ್ರರಂಗದಾದ್ಯಂತ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಒಂದರ ಹಿಂದೊಂದು ಅತ್ಯುತ್ತಮ ಚಲನಚಿತ್ರಗಳು ಬರುತ್ತಿದ್ದು ಹೊಸದೊಂದು ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆಗಳು ದಟ್ಟವಾಗಿವೆ.


ಇದನ್ನೂ ಓದಿ: ಪ್ರವಾದಿ ಮಹಮ್ಮದ್ ಅವಹೇಳನ: ನಡುರಸ್ತೆಯಲ್ಲೇ ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಿದ ಕಿಡಿಗೇಡಿಗಳು!


ಮೂಲಗಳ ಪ್ರಕಾರ, ಟೈಸನ್‌ ಹೈಬಜೆಟ್‌ ಹಾಗೂ ದೊಡ್ಡ ಪ್ರಮಾಣದ ಚಲನಚಿತ್ರವಾಗಿರಲಿದೆ. ಟಾಪ್‌ ನಟರು ಹಾಗೂ ಅತ್ಯುತ್ಕೃಷ್ಟ ತಂತ್ರಜ್ಞರ ತಂಡವನ್ನೊಳಗೊಂಡಿರಲಿದ್ದು ಈ ಬಗ್ಗೆ ಸದ್ಯದಲ್ಲೇ ಮಾಹಿತಿ ಸಿಗಲಿದೆ. ತೂಕದ ಕಂಟೆಂಟ್‌ಗೆ ಬಂಡವಾಳ ಹೂಡುವ ಮೂಲಕ ಹೊಂಬಾಳೆ ಫಿಲಂಸ್‌, ಸಂಕಷ್ಟದಲ್ಲಿರುವ ಭಾರತೀಯ ಚಲನಚಿತ್ರೋದ್ಯಮಲ್ಲೆ ಬೂಸ್ಟ್‌ ನೀಡುವ ನಿರೀಕ್ಷೆಯಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.