Honey rose : ಹನಿಗೆ ʼಬಾಯ್ ಫ್ರೆಂಡ್ʼ ಬೇಕು, ಆದರೆ ಮದುವೆ ಬೇಡ್ವಂತೆ..!
Honey rose : ಜೀವನ ಸಂಗಾತಿ ಮತ್ತು ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿರುವ ಮಲ್ಲು ಸುಂದರಿ ಹನಿ ರೋಸ್, ಜೀವನದಲ್ಲಿ ಒಮ್ಮೆಯಾದರೂ ಪ್ರೀತಿಯಲ್ಲಿ ಬೀಳಬೇಕು ಅಂತ ಬಯಸಿದ್ದೆ, ಆದರೆ ಇಲ್ಲಿಯವರೆಗೆ ಆ ಭಾಗ್ಯ ಸಿಕ್ಕಿಲ್ಲ ಎಂದಿದ್ದಾರೆ. ಆದರೆ, ಮದುವೆಯಾಗುವ ಆಸೆ ಇಲ್ಲ. ಬಾಲ್ಯದಿಂದಲೂ ನನಗೆ ಮದುವೆಯ ಬಗ್ಗೆ ಆಸಕ್ತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
Honey rose Marriage : ಮಲಯಾಳಂ ಸ್ಟಾರ್ ನಟಿ ಹನಿ ರೋಸ್ ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಸಿನಿಪ್ರೇಮಿಗಳ ಮನ ಸೆಳೆದ ಚೆಲುವೆ. ಮಾಲಿವುಡ್‌ನ ʼಬಾಯ್ ಫ್ರೆಂಡ್ʼ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಚೆಲುವೆ ಇದೀಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾಳೆ. ಸದ್ಯ ರೋಸ್ ತನ್ನ ಮದುವೆ ಬಗ್ಗೆ ಮೌನ ಮರಿದು ಮಾತನಾಡಿದ್ದು, ಕೆಲ ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹೌದು.. ಜೀವನ ಸಂಗಾತಿ ಮತ್ತು ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿರುವ ಮಲ್ಲು ಸುಂದರಿ, ಜೀವನದಲ್ಲಿ ಒಮ್ಮೆಯಾದರೂ ಪ್ರೀತಿಯಲ್ಲಿ ಬೀಳಬೇಕು ಅಂತ ಬಯಸಿದ್ದೆ, ಆದರೆ ಇಲ್ಲಿಯವರೆಗೆ ಆ ಭಾಗ್ಯ ಸಿಕ್ಕಿಲ್ಲ ಎಂದಿದ್ದಾರೆ. ಆದರೆ, ಮದುವೆಯಾಗುವ ಆಸೆ ಇಲ್ಲ. ಬಾಲ್ಯದಿಂದಲೂ ನನಗೆ ಮದುವೆಯ ಬಗ್ಗೆ ಆಸಕ್ತಿ ಇರಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ. ಮೊದ ಮೊದಲು ಐ ಲವ್ ಯೂ ಎನ್ನುವ ಶಬ್ದ ಕೇಳಿದರೆ ಕೋಪ ಬರುತ್ತಿತ್ತು. ನಂತರ ಬದಲಾದೆ. ಗಡಿಬಿಡಿ ಇಷ್ಟವಿಲ್ಲದ ಕಾರಣ ಮದುವೆಯ ಬಗ್ಗೆ ಯೋಚಿಸುವುದಿಲ್ಲ ಎಂದು ಹನಿ ರೋಸ್ ಹೇಳಿದ್ದಾರೆ.
ಇದನ್ನೂ ಓದಿ: ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣ : ಕೇಸ್‌ಗೆ ರೋಚಕ ಟ್ವಿಸ್ಟ್
ಬೇರೆಯವರ ಮದುವೆಗೆ ಹೋಗುವ ಆಸಕ್ತಿ ಇಲ್ಲ. ಇಲ್ಲಿಯವರೆಗೆ ಮದುವೆಯಾಗಿ ಖುಷಿ ಪಡುವವರನ್ನು ನಾನು ನೋಡಿಲ್ಲ. ಬರೀ ಗದ್ದಲ. ನನಗೆ ಸಂಗಾತಿ ಬೇಕು ಆದರೆ ಮದುವೆಯ ಮೂಲಕ ಅದನ್ನು ಹೊಂದಲು ನಾನು ಬಯಸುವುದಿಲ್ಲ ಅಂತ ಹೇಳಿದ್ದಾರೆ. ಸದ್ಯ ಹನಿ, ತನ್ನ ಸೌಂದರ್ಯ ಮತ್ತು ನಟನಾ ಕೌಶಲ್ಯದ ಮೂಲಕ ಮಿಂಚುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಉತ್ತಮ ಪ್ಯಾನ್ಸ್ ಪಾಲೋಯಿಂಗ್ ಹೊಂದಿದ್ದಾರೆ.
ಮಮ್ಮುಟ್ಟಿ, ಮೋಹನ್ ಲಾಲ್ ರಂತಹ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿರುವ ಹನಿ ರೋಸ್ ಇದೀಗ ದಕ್ಷಿಣ ಭಾರತದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಹನಿ ರೋಸ್ ನಂದಮೂರಿ ಬಾಲಕೃಷ್ಣ ಅಭಿನಯದ ವೀರ ಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸಿದ್ದರು. ಈ ಸುಂದರಿಯ ಶಾಪ್ ಉದ್ಘಾಟನಾ ಸಮಾರಂಭದ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ತನ್ನ ಡ್ರೆಸ್ಸಿಂಗ್ ಶೈಲಿಂಗ ಆಗಾಗ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.