ಸ್ವಿಡ್ಜರ್‌ಲ್ಯಾಂಡ್‌ಗೆ ಹೋದ್ರೆ ಮಾತ್ರ ಹನಿಮೂನ್ ಆಗಲ್ಲ; ಪ್ರಥಮ್ ವ್ಯಂಗ್ಯ
Pratham : ಕನ್ನಡದ ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಪರಿಚಯವಾಗಿ, ವೀಕ್ಷಕರ ಮನಸ್ಸನ್ನು ಗೆದ್ದಿದ್ದ ಪ್ರಥಮ್ ಹನಿಮೂನ್ ಕುರಿತು ನೀಡಿರುವ ಹೇಳಿಕೆಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Olle Hudga Pratham : ನಟ ಪ್ರಥಮ್ ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಬಾಸ್ ಗೆ ಎಂಟ್ರಿಕೊಟ್ಟಿದ್ದರು. ಸದ್ಯ ಅವರು ಸೆಲೆಬ್ರಿಟಿ ಆಗಿದ್ದಾರೆ. ಇನ್ನು ಪ್ರಥಮ್ ಅವರು ಜೂನ್ 12 ಭಾನುವಾರ ಸಿಂಪಲ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಹೌದು ಒಳ್ಳೆ ಹುಡುಗ ಯಾವುದೇ ಸುಳಿವು ಕೂಡಾ ನೀಡದೇ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡು ಅವರ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದರು.
ಎಂಗೇಜ್ ಆದ ಬಳಿಕ ಪ್ರಥಮ್ ಮಾದ್ಯಮಗಳ ಮುಂದೆ ಬಂದು ಮಾತನಾಡಿದ್ದರು. ಮತ್ತು ತಾವು ಯಾಕೆ ಯಾರಿಗೂ ಹೇಳದೇ ಸರಳವಾಗಿ ನಿಶ್ಚತಾರ್ಥ ಮಾಡಿಕೊಂಡೆ ಎನ್ನುವದಕ್ಕೆ ಉತ್ತರವನ್ನು ಸಹ ನೀಡಿದರು. ನಟ ಮೊದಲು ತಾನು ಕೈ ಹಿಡಿಯಲಿರುವ ಹುಡುಗಿ ಬಗ್ಗೆ ಮಾಹಿತಿ ನೀಡಿದ್ದು, ಅವರು ಪದವಿ ಮುಗಿಸಿದ್ದಾರೆ, ಸದ್ಯಕ್ಕೆ ಮಾಸ್ಟರ್ ಡಿಗ್ರಿ ಮಡುತ್ತಿದ್ದಾರೆ. ಅಲ್ಲದೇ ಆಕೆ ಇನ್ನೂ ಸಹ ಮೊಬೈಲ್ ಬಳಸುವುದಿಲ್ಲ, ನಮ್ಮ ಮನೆಯವರೇ ನೋಡಿದ ಹುಡುಗಿ, ಸಿದ್ದರಾಮಯ್ಯ ಹಾಗೂ ರವಿಚಂದ್ರನ್ ಅವರ ಪತ್ನಿಯರ ಹಾಗೆ ನನ್ನ ಕೈಹಿಡಿಯುವ ಹುಡುಗಿಯೂ ಸಾಮಾಜಿಕ ಜಾಲತಾಣದಿದಂದ ದೂರ ಮತ್ತು ಸರಳ ಸ್ವಭಾವದವರು ಎಂದು ತಿಳಿಸಿದ್ದಾರೆ.
ಹೀಗೆ ಮುಂದುವರೆದು ಮಾತನಾಡಿದ ಅವರು ನಿಶ್ಚಿತಾರ್ಥ ಹೇಗೆ ಸರಳವಾಗಿ ನಡೆಯಿತೋ ಹಾಗೆಯೇ ಮದುವೆಯೂ ಸಿಂಪಲ್ ಆಗಿ ನಡೆಯಲಿದೆ. ನನಗೆ ಆಡಂಬರ ಇಷ್ಟವಿಲ್ಲ. ತಾನೊಬ್ಬ ಸಾಮಾನ್ಯ ವ್ಯಕ್ತಿಯೇ ಹೊರತು ಸೆಲೆಬ್ರಿಟಿ ಅಲ್ಲ ಎಂದ ಪ್ರಥಮ್ ಬೇರೆ ಕಲಾವಿದರ ಹಾಗೆ ತಾನು ತಮ್ಮ ವೈವಾಹಿಕ ಜೀವನದ ಬಗ್ಗೆ ಯಾವುದೇ ಮಾಹಿಯನ್ನು ಹಂಚಿಕೊಳ್ಳುವುದಿಲ್ಲ, ಹಾಗೂ ನನಗೆ ಮಗು ಆದರೂ ಸಹ ನಾನು ಅನಗತ್ಯವಾಗಿ ಸುದ್ದಿಯಾಗಲು ಇಚ್ಚಿಸುವುದಿಲ್ಲ ಎಂದರು.
ದೇಶದಲ್ಲಿರುವ ಎಲ್ಲರಿಗೂ ಮಕ್ಕಳೆ ಆಗೋದು, ನನಗೇನು ಸಿಂಹ ಅಥವಾ ಹುಲಿ ಜನಿಸುವುದಿಲ್ಲ ಎಂದು ಹೇಳಿದರು. ಇನ್ನು ಪ್ರಥಮ್ ಅವರಿಗೆ ಎಲ್ಲರು ಹನಿಮೂನ್ ಬಗ್ಗೆ ಪ್ರಶ್ನೆ ಮಾಡಿದರು ಇದಕ್ಕೂ ಉತ್ತರಿಸಿದ ಪ್ರಥಮ್ "ಅಣ್ಣಾ ಇದೇ ತಪ್ಪು, ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗ್ತೀವಿ.. ಸ್ಕಾಟ್ಲೇಂಡ್‌ಗೆ ಹೋಗ್ತೀವಿ, ಅಲ್ಲಿ ಹನಿಮೂನ್ ಮಾಡಿದ್ರೆ ಮಾತ್ರ ಹನಿಮೂನ್ ಅಲ್ಲ. ಎಲ್ಲಿ ಮಾಡಿದ್ರು ಆಗೋದೆ ಆಗೋದು.. ಯಾಕೆ ಇಲ್ಲಿ ಹನಿಮೂನ್ ಮಾಡಿದ್ರೆ ಹನಿಮೂನ್ ಆಗಲ್ವಾ? ಅಲ್ಲಿ ಹೋಗಿ ಹನಿಮೂನ್ ಮಾಡಿಕೊಳ್ಳುವುದು ಏನಿದೆ? ಇಲ್ಲೆ ಮಾಡಿಕೊಳ್ಳಬಹುದಲ್ವಾ..? ಎಂದು ಪ್ರಥಮ್ ಹಾಸ್ಯಾಸ್ಪದ ಉತ್ತರ ನೀಡಿದ್ದಾರೆ.
ಇದನ್ನೂ ಓದಿ-Hanuman Movie: ಆದಿಪುರುಷ’ ಆಯ್ತು ಇದೀಗ ಸದ್ಯದಲ್ಲೇ ತೆರೆಯ ಮೇಲೆ ‘ಹನುಮಾನ್’ ಸಿನಿಮಾ!
ನನಗೆ ನನ್ನ ವೈಯಕ್ತಿಕ ವಿಚಾರದಲ್ಲಿ ಸುದ್ದಿಯಾಗುವ ಗೀಳಿಲ್ಲ. ಎಲ್ಲರ ಹಾಗೆ ನನಗೆ ಹನಿಮೂನ್ ಪೋಟೋಗಳನ್ನು ಶೇರ್ ಮಾಡಲು ಇಷ್ಟವಿಲ್ಲ. ಸರಳವಾಗಿ ಸಂಪ್ರದಾಯಸ್ತವಾಗಿ ಎಲ್ಲವೂ ನಡೆಯಲಿದೆ. ಪಕ್ಕಾ ಹಳ್ಲಿ ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಸದ್ಯ ಪ್ರಥಮ್ ಹನಿಮೂನ್ ಬಗ್ಗೆ ನೀಡಿರುವ ಹೇಳಿಕೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಟ್ರೋಲ್ ಪೇಜ್‌ಗಲಲ್ಲಿ ಪ್ರಥಮ್ ಅವರದ್ದೇ ಹವಾ.. ಇನ್ನು ಈ ಹೇಳಿಕೆಗೆ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಡಂಬರ ಬಿಟ್ಟು ಸಾಮಾನ್ಯವಾಗಿ ಬದುಕುವುದೇ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ