ನವದೆಹಲಿ : ಚಿತ್ರ  ಜಗತ್ತಿನಲ್ಲಿ ತಲ್ಲಣ ಮೂಡಿಸಿದ ಸಿನಿಮಾ 'ಪುಷ್ಪ' (Pushpa). ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಧೂಳೆಬ್ಬಿಸಿದೆ. 'ಪುಷ್ಪ' ಚಿತ್ರದ ನಾಯಕ ನಟ ಅಲ್ಲು ಅರ್ಜುನ್ (Allu Arjun) ಪ್ರತಿಭೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರಕ್ಕಾಗಿ ಅಲ್ಲೂ ಅರ್ಜುನ್ ಅದ್ಭುತ Transformation ಮಾಡಿದ್ದಾರೆ.  ಅದರ ಒಂದು ಲುಕ್ ಈ ಕೆಳಗಿನ ವಿಡಿಯೋದಲ್ಲಿದೆ.  


COMMERCIAL BREAK
SCROLL TO CONTINUE READING

ದಾಖಲೆಗಳನ್ನು ಮುರಿದಿರುವ ಪುಷ್ಪಾ : 
 ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' (Pushpa Film) ಚಿತ್ರ ದೇಶವಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಭಾರೀ ತಲ್ಲಣ ಸೃಷ್ಟಿಸಿದೆ. ಚಿತ್ರಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಡೈಲಾಗ್‌ಗಳಿಂದ ಹಿಡಿದು ಹಾಡುಗಳವರೆಗೆ ಎಲ್ಲರ ಹೃದಯ ಗೆದ್ದಿದೆ. ಈ ಚಿತ್ರದ ಹಾಡುಗಳನ್ನು (Pushpa film song) ರೀಲ್ ಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಬಳಸಲಾಗುತ್ತಿದೆ. 


ಇದನ್ನೂ ಓದಿ : ನಾಳೆ 'ಜೇಮ್ಸ್' ಎಂಟ್ರಿ , ಮುಗಿಲು ಮುಟ್ಟಿದ ಅಪ್ಪು ಅಭಿಮಾನಿಗಳ ಸಂಭ್ರಮ..!


ಅಲ್ಲು ಅರ್ಜುನ್ ಮೇಕ್ ಓವರ್ :
ಈ ವಿಡಿಯೋದಲ್ಲಿ (Viral video) ಅಲ್ಲು ಅರ್ಜುನ್ ತಮ್ಮ ದುಬಾರಿ ಕಾರಿನಿಂದ ಕೆಳಗಿಳಿಯುತ್ತಿರುವುದನ್ನು ಕಾಣಬಹುದು.  ಕಪ್ಪು ಬಣ್ಣದ ಕ್ಯಾಶುಯಲ್ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುವ  ಅರ್ಜುನ್, ತನ್ನ ವ್ಯಾನಿಟಿಯ ಕಡೆಗೆ ಹೆಜ್ಜೆ ಹಾಕುವುದನ್ನು ನೋಡಬಹುದು. ವ್ಯಾನಿಟಿಯೊಳಗೆ ಅಲ್ಲೂ ಅರ್ಜುನ್ ಪುಷ್ಪಾ ಆಗಿ ಮೇಕ್ ಓವರ್‌ ( Allu Arjun Make over) ಆಗುವುದನ್ನು ಕಾಣಬಹುದು. ಹೇರ್ ಸ್ಟೈಲಿಸ್ಟ್‌ಗಳು ಮತ್ತು ಮೇಕಪ್ ಕಲಾವಿದರು  ಅಲ್ಲೂ ಅರ್ಜುನ್ ಲುಕ್ ಅನ್ನು ಬದಲಾಯಿಸುವುದನ್ನು ಗಮನಿಸಬಹುದು. 


'ಬೈಟ್ ಟು ಲವ್' ಇದು ಚಂದನವನದ ಕ್ಯೂಟ್‌ ಲವ್‌ ಸ್ಟೋರಿ..!


ಇದೀಗ ನಟನ ಟ್ರಾನ್ಸ್ ಫಾರ್ಮಿಂಗ್ ವೀಡಿಯೊ ಭಾರೀ ವೈರಲ್ (Viral video) ಆಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.