Aishwarya Rai Bachchan: ನಟಿ ಐಶ್ವರ್ಯ ರೈ ಬಚ್ಚನ್ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ (ಕ್ಯಾನ್ಸ್ 2024) ನಲ್ಲಿ ಭಾಗವಹಿಸಿದ್ದರು. ಈ ವೇಳೆ ಐಶ್ವರ್ಯಾ ಲುಕ್ ಬಗ್ಗೆ ಚರ್ಚೆ ನಡೆದಿದ್ದಯ, ಅವರ ಕೈಗೆ ಗಾಯವಾಗಿರುವುದನ್ನು ಕಂಡು ಅಭಿಮಾನಿಗಳು ಶಾಕ್‌ ಆಗಿದ್ದರು.. ಐಶ್ವರ್ಯಾ ರೈಗೆ ಹೇಗೆ ಪೆಟ್ಟಾಯಿತು ಎಂದು ಹಲವರು ಯೋಚಿಸುತ್ತಿದ್ದರು.. ಏಕೆಂದರೆ ಐಶ್ವರ್ಯಾ ಸದ್ಯ ಯಾವುದೇ ಚಿತ್ರದ ಚಿತ್ರೀಕರಣದಲ್ಲಿಲ್ಲ. ಆದರೂ ಆಕೆಯ ಕೈಗೆ ಪೆಟ್ಟಾಗಿದ್ದು ಹೇಗೆ ಎಂಬುದು ಎಲ್ಲರ ಗೊಂದಲವಾಗಿತ್ತು.. ಇದೀಗ ಆ ಗಾಯಕ್ಕೆ ಕಾರಣವೇನು ಎಂಬುದು ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಮೇ 11 ರಂದು ಐಶ್ವರ್ಯಾ ಅವರ ಕೈಗೆ ಗಾಯವಾಗಿದ್ದು, ಮನೆಯಲ್ಲಿ ಬಿದ್ದು ಈ ಗಾಯ ಸಂಭವಿಸಿದೆ ಎನ್ನಲಾಗುತ್ತಿದೆ..


COMMERCIAL BREAK
SCROLL TO CONTINUE READING

ಇದನ್ನೂ ಓದಿ-Shah Rukh Khan: ಶಾರುಖ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್.. ನಿಟ್ಟುಸಿರು ಬಿಟ್ಟ ಫ್ಯಾನ್ಸ್‌!!


ಮೂಲಗಳ ಪ್ರಕಾರ, ಐಶ್ವರ್ಯಾ ತನ್ನ ಕೈ ಮುರಿತಕ್ಕೆ ಒಳಗಾದ ಎರಡು ದಿನಗಳ ನಂತರ ಡಿಸೈನರ್‌ನೊಂದಿಗೆ ಕಾಸ್ಟ್ಯೂಮ್ ಫಿಟ್ಟಿಂಗ್ ಮಾಡಿಸಿಕೊಂಡಿದ್ದು, ತಮಗೆ ಕಂಫರ್ಟ್‌ ಇರುವ ಹಾಗೇ ಡ್ರೆಸ್‌ ರೆಡಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.. ಅಲ್ಲದೇ ನಟಿ ಈ ಗಾಯದಿಂದ ಫಿಸಿಯೋಥೆರಪಿಗೆ ಒಳಗಾಗಿದ್ದು, ವೈದ್ಯರೊಂದಿಗೆ ಚರ್ಚಿಸಿದ ಬಳಿಕ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ..


ಇದನ್ನೂ ಓದಿ-ಶಾರುಖ್ ಖಾನ್ ಅನಾರೋಗ್ಯಕ್ಕೆ ಕಾರಣವಾಗಿದ್ದೇ ಇದು... ನಟಿ ಜೂಹಿ ಚಾವ್ಲಾ ಕೊಟ್ರು ಹೆಲ್ತ್ ಅಪ್‌ಡೇಟ್‌ !


'ಕೇನ್ಸ್ ಫಿಲ್ಮ್ ಫೆಸ್ಟಿವಲ್ 2024' ನಲ್ಲಿ ಪ್ರತಿ ವರ್ಷದಂತೆ, ಈ ವರ್ಷವೂ ಐಶ್ವರ್ಯಾ ಕಾಣಿಸಿಕೊಂಡಿದ್ದು, ಕೇನ್ಸ್‌ನ ಮೊದಲ ದಿನ ಐಶ್ ಕಪ್ಪು ಮತ್ತು ಬಿಳಿ ಗೌನ್ ಧರಿಸಿದ್ದರು.. ಎರಡನೇ ದಿನ ಬ್ಲೂ, ಗ್ರೀನ್‌ ಮತ್ತು ಸಿಲ್ವರ್ ಬಣ್ಣದ ಟಿನ್ಸೆಲ್ ಗೌನ್ ತೊಟ್ಟು ಮಿಂಚಿದ್ದರು..  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.