Jaya Bachchan Relationship with Aishwarya Rai : ಜಯಾ ಬಚ್ಚನ್ ಯಾವಾಗಲೂ ತಮ್ಮ ಹೇಳಿಕೆಗಳಿಂದ ಜನಮನದಲ್ಲಿದ್ದಾರೆ. ಕೆಲವೊಮ್ಮೆ ಪಾಪರಾಜಿಗಳು ಫೋಟೋಗಳನ್ನು ಕ್ಲಿಕ್ಕಿಸಿದಾಗ ಅವರು ಕೋಪಗೊಳ್ಳುತ್ತಾರೆ. ಆದರೆ ಸೊಸೆ ಐಶ್ವರ್ಯಾ ರೈ ಬಚ್ಚನ್ ಜೊತೆ ಜಯಾಗೆ ಯಾವ ರೀತಿಯ ಸಂಬಂಧವಿದೆ ಗೊತ್ತಾ? ಕೆಲವು ದಿನಗಳ ಹಿಂದೆ ಜಯಾ ಸಂದರ್ಶನವೊಂದರಲ್ಲಿ ಐಶ್ವರ್ಯಾ ಜೊತೆಗಿನ ಸಂಬಂಧದ ಸತ್ಯವನ್ನು ಹೇಳಿದ್ದರು. ಜಯಾ ಅವರ ಈ ಹೇಳಿಕೆ ಇದೀಗ ಮತ್ತೆ ಸುದ್ದಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಜಯಾ ಬಚ್ಚನ್ ತಮ್ಮ ಹಳೆಯ ಸಂದರ್ಶನದಲ್ಲಿ ಐಶ್ವರ್ಯಾ ರೈ ಬಚ್ಚನ್ ಜೊತೆಗಿನ ಸಂಬಂಧದ ಸತ್ಯವನ್ನು ಹೇಳಿದ್ದಾರೆ. "ಐಶ್ವರ್ಯ ನನಗೆ ತುಂಬಾ ಒಳ್ಳೆಯ ಸ್ನೇಹಿತೆ. ನನಗೆ ಏನಾದರೂ ಇಷ್ಟವಾಗದಿದ್ದರೆ, ನಾನು ಮುಖದ ಮೇಲೆ ಮಾತನಾಡುತ್ತೇನೆ. ಅವರ ಬೆನ್ನ ಹಿಂದೆ ಕೆಟ್ಟದ್ದನ್ನು ಮಾಡುವುದಿಲ್ಲ. ಅವಳಿಗೂ ಏನಾದರೂ ಒಪ್ಪಿಗೆಯಾಗದಿದ್ದರೆ, ಅವಳು ನನಗೆ ಹೇಳುತ್ತಾಳೆ" ಎಂದಿದ್ದರು.


ಇದನ್ನೂ ಓದಿ : Aarathi: ಮಂತ್ರಿ ಜೊತೆ ಮದುವೆಯಾಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟಿದ್ದರು ನಟಿ ಆರತಿ.!?


ಇದರೊಂದಿಗೆ ಜಯಾ ಸಂದರ್ಶನವೊಂದರಲ್ಲಿ ಅವಳು ಒಳ್ಳೆಯ ತಾಯಿ ಎಂದು ಹೇಳಿದ್ದರು. ಆ ಸಮಯದಲ್ಲಿ ಜಯಾ ಬಚ್ಚನ್ ಅವರ ಈ ಸಂದರ್ಶನ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಐಶ್ವರ್ಯಾ ಮತ್ತು ಜಯಾ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಈ ಹೇಳಿಕೆ ಸಾಕಷ್ಟು ಪ್ರಚಾರದಲ್ಲಿತ್ತು. ವಿಶೇಷವೆಂದರೆ ಜಯಾ ಮತ್ತು ಐಶ್ವರ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾದಾಗಲೆಲ್ಲ ಇಬ್ಬರ ನಡುವೆ ಉತ್ತಮ ಬಾಂಧವ್ಯವೂ ಗೋಚರಿಸುತ್ತದೆ.


ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ 20 ಏಪ್ರಿಲ್ 2007 ರಂದು ವಿವಾಹವಾದರು. ಮುಂಬರುವ ಏಪ್ರಿಲ್ 20 ರಂದು, ಈ ಇಬ್ಬರೂ ಸ್ಟಾರ್‌ಗಳು ತಮ್ಮ 16 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ. 


ಇದನ್ನೂ ಓದಿ : Virat Kohli-Anushka Sharma: ʼನನ್ನ ಪತ್ನಿಯೇ ನನಗೆ ಸ್ಫೂರ್ತಿʼ - ವಿರಾಟ್ ಕೊಹ್ಲಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.