Pushpa 2 : ಪುಷ್ಪ 2 ಚಿತ್ರದ ಮೇಲೆ ಸಿನಿ ಪ್ರೇಕ್ಷಕರಿಗೆ ಭಾರಿ ನಿರೀಕ್ಷೆ ಇದೆ. ಇದಕ್ಕೆ ಕಾರಣ ಪುಷ್ಪಾ ಮೊದಲ ಭಾಗ ಹಿಟ್‌ ಆಗಿದ್ದು. ಇದೀಗ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದು ಮುಂದಿನ ವರ್ಷ ಅಂದ್ರೆ 2024 ಆಗಸ್ಟ್ 15 ರಂದು ವಿಶ್ವದಾದ್ಯಂತ ಪ್ರಮುಖ ಭಾರತೀಯ ಭಾಷೆಗಳಲ್ಲಿ ತೆರೆ ಕಾಣಲಿದೆ.


COMMERCIAL BREAK
SCROLL TO CONTINUE READING

ಹ್ಯಾಟ್ರಿಕ್‌ ನಿರ್ದೇಶಕ ಸುಕುಮಾರ್ ಮಹತ್ವಾಕಾಂಕ್ಷೆಯಿಂದ ಈ ಸಿನಿಮಾ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್‌ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಹಾಸ್ಯ ನಟ ಸುನೀಲ್ ಈ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಮಿಂಚಿದ್ದಾರೆ ಅಲ್ಲದೆ, ನಿರೂಪಕಿ ಅನಸೂಯಾ ಭಾರದ್ವಾಜ್, ಧನಂಜಯ, ಮಲಯಾಳಂ ನಟ ಫಹಾದ್ ಫಾಜಿಲ್, ರಾವ್ ರಮೇಶ್ ಮುಂತಾದವರು ಈ ಸಿನಿಮಾದಲ್ಲಿದ್ದಾರೆ.


ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್‌ಗೆ ರಿಷಬ್‌ ಶೆಟ್ಟಿ ಪಡೆಯುತ್ತಿರುವ ಭಾರೀ ಸಂಭಾವನೆ ಇದು.!


ಇನ್ನು ಇದೇ ವೇಳೆ ನಿರ್ದೇಶಕ ಸುಕುಮಾರ್ ಪುಪ್ಪಾ 2ಗಾಗಿ ಪಡೆದಿರುವ ಸಂಭಾವನೆ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲು ಅರ್ಜುನ್ ಈ ಚಿತ್ರಕ್ಕೆ 300 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಸುಕುಮಾರ್ ಸಹ ಅದೇ ರೇಂಜ್​ನಲ್ಲಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


ಹೌದು.. ಪುಷ್ಪಾ ಚಿತ್ರಕ್ಕಾಗಿ ಸುಕುಮಾರ್ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಸಧ್ಯ ಭಾರೀ ನಿರೀಕ್ಷೆಗಳ ನಡುವೆ ರೆಡಿಯಾಗುತ್ತಿರುವ ಈ ಸಿನಿಮಾ 2024 ಆಗಸ್ಟ್ 15 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಈಗಾಗಲೇ ಬಿಡುಗಡೆಯಾದ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.