AR Rahman net worth : ಅಪಾರ ಅಭಿಮಾನಿಗಳನ್ನು ಹೊಂದಿರುವ ಸಂಗೀತ ಕಲಾವಿದರಲ್ಲಿ ಎಆರ್ ರೆಹಮಾನ್ ಕೂಡ ಒಬ್ಬರು. ಆಸ್ಕರ್ ಪ್ರಶಸ್ತಿ ವಿಜೇತ, ಅತ್ಯುತ್ತಮ ಗಾಯಕ, ಸಂಗೀತ ಪ್ರತಿಭೆ ಹೀಗೆ ಹಲವು ಹೆಸರುಗಳು ಇವರಿಗೆ ಬಂದರೂ ಮೂಲತಃ ಅವರನ್ನು ಭೇಟಿಯಾಗುವ ಗಣ್ಯರೆಲ್ಲ ಅವರೊಬ್ಬ ಮಹಾನ್ ವ್ಯಕ್ತಿ ಅಂತ ಒತ್ತಿ ಹೇಳುತ್ತಾರೆ. ಬನ್ನಿ ಅಭಿಮಾನಿಗಳನ್ನೇ ಆಸ್ತಿಯನ್ನಾಗಿಸಿಕೊಂಡಿರುವ ರೆಹಮಾನ್ ನಿವ್ವಳ ಮೌಲ್ಯ ಎಷ್ಟಿದೆ ಅಂತ ತಿಳಿಯೋಣ..


COMMERCIAL BREAK
SCROLL TO CONTINUE READING

32 ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದ ದಂತಕಥೆ ಸಂಗೀತಗಾರ ರೆಹಮಾನ್. ಅವರು ಭಾರತೀಯ ಸಂಗೀತದ 'ಟಾಪ್' ಸ್ಟಾರ್ ಆಗಿದ್ದರೂ, ಸಹ ಡಿಮ್ಯಾಂಡ್‌ ಮಾಡದೆ, ಅವರು ಸಂಗೀತ ಸಂಯೋಜಿಸುವ ಚಿತ್ರಕ್ಕೆ ಅನುಗುಣವಾಗಿ ತಮ್ಮ ಸಂಭಾವನೆಯನ್ನು ಕಡಿಮೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ:ಪ್ರಜ್ವಲ್ ದೇವರಾಜ್ ರಿಂದ ರಾಗಿಣಿ ದ್ವಿವೇದಿ ಅಭಿನಯದ ʻಇಮೇಲ್ʼ ಚಿತ್ರದ ಫಸ್ಟ್ ಲುಕ್ ರಿಲೀಸ್‌


ಕಳೆದ ವರ್ಷದವರೆಗೆ, ಎಆರ್ ರೆಹಮಾನ್ ಪ್ರತಿ ಚಿತ್ರಕ್ಕೆ 8 ಕೋಟಿಗಳವರೆಗೆ ಸಂಭಾವನೆ ಪಡೆದಿದ್ದರು. ಚಲನಚಿತ್ರಗಳಲ್ಲದೆ, ಅವರು ಸಂಗೀತ ಕಚೇರಿಗಳನ್ನು ಸಹ ನಡೆಸುತ್ತಾರೆ. ಅಷ್ಟೇ ಅಲ್ಲ, ಸಂಗೀತ ಶಾಲೆಗಳು ಮತ್ತು ಕಾಲೇಜುಗಳನ್ನು ಸಹ ಹೊಂದಿದ್ದಾರೆ. ಇದೆಲ್ಲದರ ಜೊತೆಗೆ ಮಾಸಿಕ 4 ಕೋಟಿ ರೂ. ವಾರ್ಷಿಕ ಆದಾಯ ರೂ.50 ಕೋಟಿ ಇರಬಹುದು ಹೇಳಲಾಗಿದೆ. 


ಎಆರ್ ರೆಹಮಾನ್ ಚೆನ್ನೈ, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಚೆನ್ನೈನಲ್ಲಿ ಸ್ಟುಡಿಯೋ ಕೂಡ ನಿರ್ಮಿಸಿದ್ದಾರೆ. ಇತ್ತೀಚೆಗೆ ರೆಹಮಾನ್ ದುಬೈನಲ್ಲಿ ಬೃಹತ್ ಸಂಗೀತ ಸ್ಟುಡಿಯೋವನ್ನೂ ತೆರೆದಿದ್ದಾರೆ. ಇದರ ಮೌಲ್ಯ ಬರೋಬ್ಬರಿ ಹಲವು ಕೋಟಿ ರೂ. ಇರಬಹುದು ಎನ್ನಲಾಗಿದೆ. ಭಾರತದ ಹೊರತಾಗಿ, ಅವರು ಲಾಸ್ ಏಂಜಲೀಸ್‌ನಲ್ಲಿ ಅಪಾರ್ಟ್ಮೆಂಟ್ ಹೊಂದಿದ್ದಾರೆಂದು ವರದಿಯಾಗಿದೆ. 


ಇದನ್ನೂ ಓದಿ:ಒಮನ್‌ನಲ್ಲಿ ಕಾಟೇರ ಹೌಸ್ ಫುಲ್ ಪ್ರದರ್ಶನದ ವಿಡಿಯೋ ವೈರಲ್‌!


ಎಆರ್ ರೆಹಮಾನ್ ಹತ್ತಿರ ಜಾಗ್ವಾರ್, ಮರ್ಸಿಡಿಸ್, ಬೆಂಜ್, ವೋಲ್ವೋ ನಂತಹ ಐಷಾರಾಮಿ ಕಾರುಗಳಿವೆ. ರೆಹಮಾನ್ ಭಾರತೀಯ ಚಿತ್ರರಂಗದ ಶ್ರೀಮಂತ ಸಂಗೀತ ಸಂಯೋಜಕ ಎಂದು ಹೇಳಲಾಗುತ್ತದೆ. ಅವರ ಒಟ್ಟು ನಿವ್ವಳ ಮೌಲ್ಯ 650 ಕೋಟಿ ಮತ್ತು 700 ಕೋಟಿ ಎಂದು ವರದಿಯಾಗಿದೆ. ಆದರೆ ಇದು ಅಧಿಕೃತವಲ್ಲ.


ಸಂಗೀತದ ಮೂಲಕ ದೊಡ್ಡ ಖ್ಯಾತಿಯನ್ನು ಗಳಿಸಿರುವ ಎಆರ್ ರೆಹಮಾನ್ ಇಂದು (ಜನವರಿ 6) ತಮ್ಮ 57 ನೇ ಹುಟ್ಟುಹಬ್ಬವನ್ನು (ಜನವರಿ 6) ಆಚರಿಸಿಕೊಳ್ಳುತ್ತಿದ್ದಾರೆ. ಅವರ ಪುತ್ರ ಅಮೀನ್ ಅವರ ಜನ್ಮದಿನವೂ ಇಂದು (ಎಆರ್ ಅಮೀನ್ ಜನ್ಮದಿನ). ನಟ-ನಟಿಯರು, ರಾಜಕೀಯ ಗಣ್ಯರು, ಅಭಿಮಾನಿಗಳು ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.