ಕಬ್ಜ... ವೆರಿ ಟ್ಯಾಲೆಂಟ್ ಡೈರೆಕ್ಟರ್ ಆರ್ ಚಂದ್ರು ನಿರ್ದೇಶನದ ಸಿನಿಮಾ.ಟೈಟಲ್ ಮೂಲಕವೇ ಸದ್ದು ಮಾಡಿದ್ದ ಕಬ್ಜ ಸಿನಿಮಾದ ಟೀಸರ್ ಫೈನಲಿ ರಿಲೀಸ್ ಆಗಿದ್ದು,ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಜನಪ್ರಿಯ ನಟ ರಾಣಾ ದಗ್ಗುಬಾಟಿ ಕಬ್ಜ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದು ಸಿನಿಮಾಗೆ ಇನ್ನಷ್ಟು ಬಲ ತುಂಬಿದ ಹಾಗಿದೆ. ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಪಕ್ಕಾ ಮೋಡಿ ಮಾಡೋ ಮೂಲಕ ಇಡೀ ವಿಶ್ವವೇ ತಿರುಗಿ ನೋಡೋ ಹಾಗೇ ಮಾಡೋದು ಪಕ್ಕಾ ಆಗಿದೆ.


COMMERCIAL BREAK
SCROLL TO CONTINUE READING

ಅಬ್ಬಬ್ಬಾ.. ಟೀಸರ್ ನೋಡಿದ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದಾರೆ.ಯಾಕಂದ್ರೆ ಟೀಸರ್ನಲ್ಲಿ ಕಂಡು ಬರೋ ಚಿತ್ರಣ ಮೈರೋಮಾಂಚನವೆನಿಸುವಂತಿದೆ. ಪಕ್ಕಾ ಈ ಸಿನಿಮಾ ರಿಲೀಸ್ ಆದ ಬಳಿಕ ಇಡೀ ಚಿತ್ರರಂಗ ಮತ್ತೊಮ್ಮೆ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ.ಯಾಕಂದ್ರೆ ಟೀಸರ್ ನೋಡ್ತಾ ಇದ್ರೆ ಇದು ಬಾಲಿವುಡ್ನೂ ಮೀರಿಸೋ ಲೆವೆಲ್ಲಿಗೆ ಹವಾ ಕ್ರಿಯೇಟ್ ಮಾಡಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.