50ನೇ ವಯಸ್ಸಿನಲ್ಲಿ ತನಗಿಂತ 12 ವರ್ಷ ಕಿರಿಯ ನಟಿ ಜೊತೆ 2ನೇ ಮದುವೆಗೆ ರೆಡಿಯಾದ ಖ್ಯಾತ ನಟ!
Hrithik Roshan and Saba Azad Dating: ಇತ್ತೀಚೆಗಷ್ಟೇ ಸಬಾ ಆಜಾದ್ ತನ್ನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಹೃತಿಕ್ ರೋಷನ್ ಕಮೆಂಟ್ ಮಾಡಿದ್ದರು.
Hrithik Roshan and Saba Azad Dating: ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಡೇಟಿಂಗ್ ಮಾಡುತ್ತಿರುವುದು ತಿಳಿದಿರುವ ಸಂಗತಿ. ಅಂದಹಾಗೆ ಇವರಿಬ್ಬರು ಅತಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Fatty Liver: ಫ್ಯಾಟಿ ಲಿವರ್ ಎಂದರೇನು? ಕಾರಣಗಳು, ಲಕ್ಷಣಗಳು & ಚಿಕಿತ್ಸೆ
ಇತ್ತೀಚೆಗಷ್ಟೇ ಸಬಾ ಆಜಾದ್ ತನ್ನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಹೃತಿಕ್ ರೋಷನ್ ಕಮೆಂಟ್ ಮಾಡಿದ್ದರು. ಇದನ್ನು ಕಂಡ ನೆಟಿಜನ್ಸ್, ಇವರಿಬ್ಬರೂ ತಮ್ಮ ಸಂಬಂಧವನ್ನು ಬೇರೆ ಹಂತಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆಂದು ತೋರುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಸಬಾ ಆಜಾದ್ ತನ್ನ Instagram ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇದರಲ್ಲಿ ತನ್ನ ಬೆರಳಿಗೆ ಉಂಗುರ ಧರಿಸಿ, 'ಶೀಘ್ರದಲ್ಲೇ ಬಹಿರಂಗ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಅದಕ್ಕೆ ಹೃತಿಕ್ ರೋಷನ್ ಕಾಮೆಂಟ್ ಮಾಡಿದ್ದು, ʼಕಾತುರದಿಂದ ಕಾಯುತ್ತಿದ್ದೇನೆʼ ಎಂದು ಕಮೆಂಟ್ ಮಾಡಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಯಾಗಿದೆ. ಈ ಪೋಸ್ಟ್ ಮತ್ತು ಕಾಮೆಂಟ್ ನಂತರ, ಅವರ ಮದುವೆ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.
ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್ ಪರಸ್ಪರ ಸ್ನೇಹಿತರ ಮೂಲಕ ಮೊದಲ ಬಾರಿಗೆ ಭೇಟಿಯಾದರು. ಇದರ ನಂತರ, ಬಹಳ ಸಮಯದಿಂದ ಪರಸ್ಪರ ರಹಸ್ಯವಾಗಿ ಡೇಟಿಂಗ್ ಮಾಡಿದ ಇಬ್ಬರೂ, ಸ್ವಲ್ಪ ಸಮಯದ ಹಿಂದೆ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಈಗ ಶೀಘ್ರದಲ್ಲೇ ವಿವಾಹವಾಗುವ ಶುಭಸೂಚನೆ ತೋರುತ್ತಿದೆ.
ಇನ್ನು ಹೃತಿಕ್ʼಗಿಂತ ಸಬಾ 12 ವರ್ಷ ಕಿರಿಯಳು. ಹೃತಿಕ್ ರೋಷನ್ 2014 ರಲ್ಲಿ ತಮ್ಮ ಮೊದಲ ಪತ್ನಿ ಸುಸಾನೆ ಖಾನ್ʼಗೆ ವಿಚ್ಛೇದನ ನೀಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.