Hrithik roshan: ಬಾಲಿವುಡ್‌ನ ಸ್ಟಾರ್‌ ನಟ ಹೃತಿಕ್‌ ರೋಷನ್‌ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದು ಹಲವು ವರ್ಷಗಳು ಕಳೆದಿದೆ, ಇದೀಗ ನಟ ಮಾಡೆಲ್‌ ಒಬ್ಬರನ್ನು ಪ್ರೀತಿ ಮಾಡುತ್ತಿದ್ದು, ಈ ಜೋಡಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಚರ್ಚೆಯಾಗುತ್ತಿದೆ, ಇದಕ್ಕೆ ಕಾರಣವಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡಿರುವ ಅದೊಂದು ಪೋಸ್ಟ್‌. 


COMMERCIAL BREAK
SCROLL TO CONTINUE READING

ಹೃತಿಕ್‌ ರೋಷನ್‌ ತಮ್ಮ ಮೊದಲ ಪತ್ನಿ  ಸುಸ್ಸಾನ್ನೆ ಖಾನ್ ಅವರ ಜೊತೆ  ವಿಚ್ಛೇದನ ಪಡೆದ ನಂತರ ಸಬಾ ಆಜಾದ್ ಅವರ ಜೊತೆ ಡೇಟಿಂಗ್‌ ಮಾಡುತ್ತಿರುವುದು ಗೊತ್ತೇ ಇದೆ, ಈ ನಡುವೆ ಈ ಜೋಡಿ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನುವ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು, ಆದರೆ ಇದೀಗ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅನಿವರ್ಸರಿ ಕುರಿತು ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ, ಈ ಪೋಸ್ಟ್‌ ನೋಡಿದ ನೆಟ್ಟಿಗರು ಈ ಜೋಡಿ ಯಾರಿಗೂ ಗೊತ್ತಿರದ ಹಾಗೆ ಮದುವೆಯಾಗಿದ್ದಾರಾ ಎಂಬುದರ ಕುರಿತು ಚರ್ಚೆಗಳನ್ನು ಆರಂಭಿಸಿದ್ದಾರೆ. 


ನಟ ಹೃತಿಕ್‌ ರೋಷನ್‌ ಹಾಗೂ ಸಬಾ ಆಜಾದ್ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್‌ ಮಾಡುತ್ತಿದ್ದಾರೆ, ಈ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್‌ ಆಗುತ್ತಾ ಇರುತ್ತವೆ. ಇದೀಗ ಅಂತಹದ್ದೆ ಒಂದು ಪೋಸ್ಟ್‌ನ ಮೂಲಕ ಈ ಜೋಡಿ ಸುದ್ದಿಯಲ್ಲಿದ್ದಾರೆ. ಈ ಪೋಸ್ಟ್‌ನಲ್ಲಿ ಹೃತಿಕ್‌ ಜೊತೆಗಿರುವ ಫೋಟೋವನ್ನು ಆತನ ಗೆಳತಿ ಸಬಾ ಆಜಾದ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಶೀರ್ಷಿಕೆಯಲ್ಲಿ 'ಹ್ಯಾಪಿ ಆನಿವರ್ಸರಿ ಪಾರ್ಟ್ನರ್...' ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.