ನಾನು ಪ್ರಭಾಸ್ ಅಲ್ಲ, ಯಶ್..! ಅಭಿಮಾನಿ ಪ್ರಶ್ನೆಗೆ ಯಶ್ ಖಡಕ್ ಉತ್ತರ..!
ದೇಶಾದ್ಯಂತ 'ಕೆಜಿಎಫ್-2' ಹವಾ ಬಲು ಜೋರಾಗಿದೆ. ಎಲ್ಲೆಲ್ಲೂ ಧೂಳೆಬ್ಬಿಸಿ, ಬಾಕ್ಸ್ ಆಫಿಸ್ ಉಡೀಸ್ ಮಾಡಲು ಯಶ್ ಅಭಿನಯದ ಸಿನಿಮಾ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ 'ಕೆಜಿಎಫ್-2' ಟೀಂ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಇದೇ ಕಾರಣಕ್ಕೆ ಖಾಸಗಿ ಸಂದರ್ಶನದಲ್ಲಿ ಭಾಗಿಯಾಗಿದ್ದ ಯಶ್ ಅವರಿಗೆ ಬಹುದೊಡ್ಡ ಸವಾಲು ಎದುರಾಗಿತ್ತು. ಯಶ್ ಫ್ಯಾನ್ ಒಬ್ಬರು, ಪ್ರಭಾಸ್‌ಗೆ ಯಶ್‌ರನ್ನ ಹೋಲಿಕೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿರುವ ನಟ ಯಶ್, ಖಡಕ್ ರೀಪ್ಲೇ ಕೊಟ್ಟಿದ್ದಾರೆ. ಅದನ್ನ ಮುಂದೆ ತಿಳಿಯೋಣ.
ಸದ್ಯ 'ಕೆಜಿಎಫ್-2' ಸಿನಿಮಾಗೆ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿಯೇ ದೊಡ್ಡ ಅಭಿಮಾನಿ ಬಳಗವಿದೆ. ಯಾಕಂದ್ರೆ 'ಕೆಜಿಎಫ್-2' ಟಿಕೆಟ್ ಬುಕಿಂಗ್ ಶುರುವಾದ 12 ಗಂಟೆಯ ಒಳಗಾಗಿ ಸುಮಾರು 1 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್ ಆಗಿವೆ. ಹೀಗಿರುವಾಗ 'ಕೆಜಿಎಫ್-2' ಟೀಂ ಉತ್ತರ ಭಾರತದಲ್ಲಿ ಭರ್ಜರಿ ಕ್ಯಾಂಪೇನ್ ಮಾಡುತ್ತಿದೆ. ಇದೇ ರೀತಿ ಖಾಸಗಿ ಸಂದರ್ಶನದಲ್ಲಿ ಅಭಿಮಾನಿ ಬಳಗದ ಪ್ರಶ್ನೆಗಳನ್ನು ಯಶ್ ಎದುರಿಸಬೇಕಾಗಿ ಬಂತು. ಹೀಗೆ ನಟ ಪ್ರಭಾಸ್ & ನಟ ಯಶ್ ಅವರನ್ನು ಹೋಲಿಕೆ ಮಾಡಿ ಅಭಿಮಾನಿ ಒಬ್ಬರು ಮೆಸೇಜ್ ಕಳಿಸಿದ್ದರು. ಈ ಮಾತಿಗೆ ಯಶ್ ನಗು ನಗುತ್ತಲೇ ಖಡಕ್ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ನೆಲದ ಮೇಲೆ ಮಾತ್ರವಲ್ಲ, ಸಮುದ್ರದ ಮೇಲೂ 'ಕೆಜಿಎಫ್-2' ಹವಾ..!
ನಾನು ಮೊದಲಿಗೆ ಯಶ್..!
ಹೌದು, ಯಶ್ ಅವರ ಮಹಿಳಾ ಅಭಿಮಾನಿ ಒಬ್ಬರು ಯಶ್ ಅವರನ್ನು ಪ್ರಭಾಸ್ ಅವರಿಗೆ ಹೋಲಿಸಿದ್ದರು. 'ಯಶ್ ಅವರು ಬಾಲಿವುಡ್ ಪಾಲಿಗೆ ಮತ್ತೊಬ್ಬ ಪ್ರಭಾಸ್' ಎಂದಿದ್ದರು. ಈ ಕಮೆಂಟ್ ಕೇಳುತ್ತಲೇ ನಗು ನಗುತ್ತಾ ಉತ್ತರ ನೀಡಿದ 'ಕೆಜಿಎಫ್-2' ನಾಯಕ ರಾಕಿಂಗ್ ಸ್ಟಾರ್ ಯಶ್, 'ನಾನು ಮೊದಲಿಗೆ ಯಶ್. ನಾನು ಬೇರೆ ಯಾರಿಗೂ ಹೋಲಿಕೆ ಮಾಡಿಕೊಳ್ಳಲಾರೆ. ಪ್ರಭಾಸ್ ಅವರ ಸಾಧನೆ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಅಭಿಮಾನಿ ಹೇಳಿರುವ ಮಾತಿಗೆ ಖುಷಿ ಕೂಡ ಇದೆ' ಎಂದರು. ಈ ಮೂಲಕ ತಮ್ಮ ತನವನ್ನು ಎಲ್ಲೂ ಬಿಟ್ಟುಕೊಡದೆ ಯಶ್, ಪ್ರಬುದ್ಧತೆ ಪ್ರದರ್ಶಿಸಿದರು. ಈ ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ಯಶ್ ಅಭಿಮಾನಿಗಳು ಎದೆಯುಬ್ಬಿಸಿ ತಮ್ಮ ನೆಚ್ಚಿನ ನಟನ ಬಗ್ಗೆ ಮಾತನಾಡುತ್ತಿದ್ದಾರೆ.
ಇದನ್ನು ಓದಿ: ಬಾಂಡ್ ರವಿ' ಸಾಥ್ ಕೊಟ್ಟ ಪೊಗರು ಪೋರ-ಯಂಗ್ ಟೈಗರ್... ಪ್ರಮೋದ್ ಬೆನ್ನು ತಟ್ಟಿದ ಧ್ರುವ-ವಿನೋದ್
ಒಟ್ಟಾರೆ ಹೇಳುವುದಾದರೆ ಕನ್ನಡ ಸಿನಿಮಾ ರಂಗವನ್ನು 'ಕೆಜಿಎಫ್-2' ದೊಡ್ಡ ಮಟ್ಟದಲ್ಲಿ ಕೊಂಡೊಯ್ಯುತಿದೆ. ಅದೇ ರೀತಿ 'ಕೆಜಿಎಫ್-2' ನಾಯಕ ಯಶ್ ಹೆಜ್ಜೆ ಹೆಜ್ಜೆಗೂ ಕನ್ನಡತನ ಬಿಟ್ಟುಕೊಡದೆ, ಕರುನಾಡ ಕೀರ್ತಿ ಪತಾಕೆಯನ್ನ ಹೊರ ರಾಜ್ಯಗಳಲ್ಲೂ ಹಾರಿಸುತ್ತಿದ್ದಾರೆ. ಇದೇ ರೀತಿ ತಮ್ಮ ಅಭಿಮಾನಿಯ ಹೇಳಿಕೆಗೆ ನಯವಾಗಿಯೇ ಉತ್ತರ ನೀಡಿ, ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.