`Salman Khan ವಿರುದ್ಧ ಮಾತನಾಡಿದ್ದಕ್ಕೆ ನನಗೆ Gang Rape ಧಮ್ಕಿ ಹಾಕಿದ್ದರು`
ಬಾಲಿವುಡ್ ಖ್ಯಾತ ಸಿಂಗರ್ ಸೋನಾ ಮಹಾಪಾತ್ರಾ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸೋನಾ ಮಹಾಪಾತ್ರ, ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಅವರ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಗ್ಯಾಂಗ್ ರೇಪ್ ಹಾಗೂ ಆಸಿಡ್ ದಾಳಿ ನಡೆಸುವ ಕುರಿತು ಬೆದರಿಕೆಯ ಪತ್ರಗಳು ಬಂದಿದ್ದವು ಎಂದು ಬಹಿರಂಗಗೊಳಿಸಿದ್ದಾರೆ.
ನವದೆಹಲಿ: ಖ್ಯಾತ ಬಾಲಿವುಡ್ ನಟಿ ಸೋನಾ ಮಹಾಪಾತ್ರ ಕಳೆದ ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕಠಿಣ ನಿಲುವುಗಳನ್ನು ತಳೆಯುವ ಮೂಲಕ ಹೆಡ್ಲೈನ್ ಸೃಷ್ಟಿಸುತ್ತಿದ್ದಾರೆ. ಇದೀಗ ಮತ್ತೊಮ್ಮೆ ಸೋನಾ ಮಹಾಪಾತ್ರಾ ಗಂಭೀರ ಹೇಳಿಕೆಯೊಂದನ್ನು ನೀಡುವ ಮೂಲಕ ಸುದ್ದಿ ಸೃಷ್ಟಿಸಿದ್ದಾಳೆ.
ಸೋನಾ ಮಹಾಪಾತ್ರಾ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರನೊಬ್ಬ ಟ್ರೋಲ್ ಮಾಡುವ ಪ್ರಯತ್ನ ಮಾಡಿದ್ದ. ಸೋನಾ ಅವರನ್ನು ಟ್ರೊಲ್ ಮಾಡಲು ಬರೆದುಕೊಂಡಿದ್ದ ಬಳಕೆದಾರ, "ಮೇಡಮ್ ನೀವು ಟ್ವಿಟ್ಟರ್ ನಲ್ಲಿ ಹೆಸರೊಂದರ ಹುಡುಕಾಟ ನಡೆಸುವಾಗ ನಿಮಗೆ ನಾಲ್ಕೂ ದಿಕ್ಕುಗಳಿಂದ ಹಿಂದೂಫೋಬಿಯಾ ಕಾಣಿಸುವಷ್ಟು ಕೆಟ್ಟ ದಿನಗಳು ನಿಮಗೆ ಬಂದಿವೆಯೇ?" ಎಂದು ಬರೆದುಕೊಂಡಿದ್ದ. ಬಳಕೆದಾರನ ಈ ಹೇಳಿಕೆಗೆ ಕೇವಲ ಉತ್ತರವೊಂದನ್ನೇ ಮಾತ್ರ ನೀಡದ ಸೋನಾ, ಭಾರಿ ಹೇಳಿಕೆಯೊಂದನ್ನು ಹೇಳಿ ಸಂಚಲನ ಮೂಡಿಸಿದ್ದಾರೆ.
ನನಗೆ ರೇಪ್ ಬೆದರಿಕೆ ಒಡ್ಡಲಾಗಿತ್ತು-ಸೋನಾ ಮಹಾಪಾತ್ರಾ
ಬಳಕೆದಾರನಿಗೆ ಉತ್ತರ ನೀಡಿರುವ ಸೋನಾ, "ನಾನೋರ್ವ ಪಬ್ಲಿಕ್ ಫಿಗರ್ ಆಗಿದ್ದೇನೆ. ಎರಡು ವರ್ಷಗಳ ಹಿಂದೆ ಹಾಡೊಂದನ್ನು ಹಾಡಿದ್ದಕ್ಕಾಗಿ ನನಗೆ ಮುಸ್ಲಿಂ ಸಂಸ್ಥೆಯೊಂದರಿಂದ ಬೆದರಿಕೆ ಒಳಗೊಂಡ ಪತ್ರಗಳು ಬಂದಿದ್ದವು. ಸಲ್ಮಾನ್ ಖಾನ್ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಮೇಲೆ ಗ್ಯಾಂಗ್ ರೇಪ್ ಹಾಗೂ ಆಸಿಡ್ ದಾಳಿ ನಡೆಸುವುದಾಗಿ ಧಮ್ಕಿ ಹಾಕಲಾಗಿತ್ತು" ಎಂದು ಸೋನಾ ಹೇಳಿದ್ದಾರೆ.
ಸೋನಾ ಈ ರೀತಿಯ ಹೇಳಿಕೆಯನ್ನು ನೀಡುತ್ತಿರುವುದು ಇದೇ ಮೊದಲ ಬಾರಿಗೆ ಅಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಕಂಗನಾ ರಣಾವತ್ ಅವರ ಸಹೋದರಿ ರಂಗೋಲಿ ಚಂದೆಲ್ ಅವರ ಟ್ವಿಟ್ಟರ್ ಹ್ಯಾಂಡಲ್ ಅನ್ನು ಸಸ್ಪೆಂಡ್ ಮಾಡಿದ ಸಂದರ್ಭದಲ್ಲಿಯೂ ಕೂಡ ಸೋನಾ ರಂಗೋಲಿಯನ್ನು ಬೆಂಬಲಿಸಿದ್ದರು. ಆ ವೇಳೆ ಕೇವಲ ರಂಗೋಲಿ ಅವರ ಹೇಳಿಕೆಯನ್ನು ಮಾತ್ರ ಸಮರ್ಥಿಸದೆ, ಅವರ ಟ್ವಿಟ್ಟರ್ ಹ್ಯಾಂಡಲ್ ಸಸ್ಪೆಂಡ್ ಮಾಡುವ ಕ್ರಮವನ್ನು ಕೂಡ ಪ್ರಶ್ನಿಸಿದ್ದರು.
ಇತ್ತೀಚೆಗಷ್ಟೇ ಕಾರ್ತಿಕ್ ಆರ್ಯನ್ ಅವರನ್ನು ಕೂಡ ಸೋನಾ ಮಹಾಪಾತ್ರಾ ಗುರಿಯಾಗಿಸಿದ್ದರು. ಟಿಕ್ ಟಾಕ್ ವಿಡಿಯೋವೊಂದನ್ನು ಹಂಚಿಕೊಂಡ ಕಾರ್ತಿಕ್ ವಿಡಿಯೋದಲ್ಲಿ ತಮ್ಮ ಸಹೋದರಿ ಮಾಡಿದ್ದ ರೋಟಿ ತಮಗೆ ಇಷ್ಟವಾಗದ ಕಾರಣ ಸಹೋದರಿಯನ್ನು ತುಂಬಾ ರೇಗಿಸಿದ್ದೆ ಎಂದು ಹೇಳಿಕೊಂಡಿದ್ದರು. ಆದರೆ, ಅವರ ಈ ವಿಡಿಯೋ ಕೇವಲ ತಮಾಷೆಯ ಒಂದು ಭಾಗವಾಗಿತ್ತು. ಅದನ್ನೂ ಕೂಡ ಸೋನಾ ಒಂದು ದೊಡ್ಡ ವಿಷಯವನ್ನಾಗಿಸಿದ್ದರು.