`ನಾನು ಜುಮಾಂಜಿ, ಇಂಡಿಯಾನಾ ಜೋನ್ಸ್‌ನಂತಹ ಸಿನಿಮಾ ಮಾಡಬೇಕು`
ಇದೆ ಸಂದರ್ಭದಲ್ಲಿ ಅವರು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ತಾವು ಕೂಡ ಇಂಡಿಯಾನಾ ಜೋನ್ಸ್ ನಂತಹ ಸಿನಿಮಾವನ್ನು ಮಾಡಬೇಕು ಎಂದು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇದೆ ತಿಂಗಳು ಜುಲೈ 28 ರಂದು ವಿಶ್ವದಾದ್ಯಂತ ತೆರೆಕಾಣಲಿದೆ.ಇದೆ ಸಂದರ್ಭದಲ್ಲಿ ಅವರು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ತಾವು ಕೂಡ ಇಂಡಿಯಾನಾ ಜೋನ್ಸ್ ನಂತಹ ಸಿನಿಮಾವನ್ನು ಮಾಡಬೇಕು ಎಂದು ನಿರ್ಧರಿಸುವುದಾಗಿ ಹೇಳಿದ್ದಾರೆ.
ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಚಿತ್ರ ವಿಕ್ರಾಂತ್ ರೋಣ ಕುರಿತಾಗಿ ಮಾತನಾಡಿರುವ ಕಿಚ್ಚ ಸುದೀಪ್ ಈ ಸಿನಿಮಾ ಮಾಡಲು ನಿರ್ಧರಿಸಿದ ನಂತರ ಎಂಟು ತಿಂಗಳ ಕಾಲ ಸಿನಿಮಾದ ವಿವಿಧ ಅಂಶಗಳ ಬಗ್ಗೆ ನಿರ್ದೇಶಕರ ಜೊತೆ ಚರ್ಚಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ-Home Temple Tips : ಮನೆಯ ದೇವರಮನೆಯಲ್ಲಿ ಈ 5 ವಸ್ತುಗಳನ್ನು ಯಾವತ್ತೂ ಇಡಬೇಡಿ!
ಚಿತ್ರದ ಶೂಟಿಂಗ್ ವಿಚಾರವಾಗಿ ಮಾತನಾಡಿದ ಅವರು "ನಾವು ಎಲ್ಲವನ್ನೂ ಒಳಾಂಗಣದಲ್ಲಿ ಶೂಟ್ ಮಾಡಬೇಕೆಂದು ಸೂಚಿಸಿದೆ. ಏಕೆಂದರೆ ಆ ಮೂಲಕ ಚಿತ್ರದ ಸೊಬಗಿಗೆ ತಕ್ಕಂತೆ ನಿರ್ಮಿಸಬಹುದು, ಇದರಲ್ಲಿ ಯಾವುದೇ ನಿಜವಾದ ಸ್ಥಳಗಳಿಲ್ಲ, ಜುಮಾಂಜಿಯಂತಹ ಸಿನಿಮಾವನ್ನು ನಾವು ಮಾಡಬೇಕು ಎಂದು ಯೋಚಿಸತೊಡಗಿದೆ.ನಾವು ಟಾರ್ಜನ್, ಇಂಡಿಯಾನಾ ಜೋನ್ಸ್‌ನಂತಹ ಸೆಟ್‌ಗಳನ್ನು ಹೊಂದಿರಬೇಕು. ಮತ್ತು ಆದರೆ ನೈಜ ಸಮಯದಲ್ಲಿ ಯಾವುದೂ ನಿಮ್ಮನ್ನು ಬೆಂಬಲಿಸುವುದಿಲ್ಲ. ನೀವು ಅದನ್ನು ಸೃಷ್ಟಿಸಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ-ದೇವಶಯನಿ ಏಕಾದಶಿಯಂದು ವಿಷ್ಣು ದೇವರಿಗೆ ಈ ರೀತಿ ಪೂಜೆ ಮಾಡಿ: ಶುಭಪ್ರಾಪ್ತಿ ಖಂಡಿತ
ಇದೆ ವೇಳೆ ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡುತ್ತಾ ಈ ಚಿತ್ರವನ್ನು ನೋಡಿ ಥಿಯೆಟರ್ ನಿಂದ ಹೊರಬಂದ ನಂತರವೂ ಅದರ ಪರಿಣಾಮ ಮನದಲ್ಲಿ ಹಾಗೆಯೇ ಉಳಿಯುತ್ತದೆ ಎಂದು ಅವರು ಹೇಳಿದರು.
ಈ ಚಿತ್ರದಲ್ಲಿ ಕಿಚ್ಚ ಸುದೀಪ್,ನಿರೂಪ್ ಭಂಡಾರಿ, ನೀತಾ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದು, ಜುಲೈ 28ಕ್ಕೆ ಈ ಚಿತ್ರವು ಜಗತ್ತಿನಾದ್ಯಂತ ತೆರೆಕಾಣಲಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.