Naga Chaitanya: ನಾಗ ಚೈತನ್ಯ ಇದುವರೆಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಹಿಟ್ ಆದದ್ದು ಬಹಳ ಕಡಿಮೆ.. ಚೈತನ್ಯ ಅವರ ವೃತ್ತಿಜೀವನದಲ್ಲಿ ಇದುವರೆಗೆ ಒಂದೇ ಒಂದು ಬ್ಲಾಕ್ ಬ್ಲಾಸ್ಟರ್ ಹಿಟ್ ಆಗಿಲ್ಲ. ನಾಗ ಚೈತನ್ಯ ಅವರ ವೈಯಕ್ತಿಕ ಜೀವನ ಕೂಡ ಅಷ್ಟೊಂದು ಚೆನ್ನಾಗಿಲ್ಲ. ನಾಯಕಿ ಸಮಂತಾ ಅವರನ್ನು ಪ್ರೀತಿಸಿ ಮದುವೆಯಾದ ನಾಗ ಚೈತನ್ಯ ಕೆಲವೇ ದಿನಗಳಲ್ಲಿ ವಿಚ್ಛೇದನ ಪಡೆದರು. ಸಮಂತಾ ಜೊತೆಗಿನ ವಿಚ್ಛೇದನದ ನಂತರ, ನಾಗ ಚೈತನ್ಯ ಶೋಭಿತಾ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿವೆ.‌


COMMERCIAL BREAK
SCROLL TO CONTINUE READING

ಇದನ್ನೂ ಓದಿ-Kalki 2898AD Movie Leaked: ಪ್ರಭಾಸ್ ಕಲ್ಕಿ 2898AD ಸಿನಿಮಾ ಲೀಕ್.. ಈ ಸೈಟ್‌ನಲ್ಲಿ ಸಂಪೂರ್ಣ ಚಿತ್ರ ಲಭ್ಯ!


ಈ ಮಧ್ಯೆ ನಾಗ ಚೈತನ್ಯ ಅವರ ಇತ್ತೀಚಿನ ಕಾಮೆಂಟ್‌ಗಳು ವೈರಲ್ ಆಗಿವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಾಗ ಚೈತನ್ಯ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಚೆನ್ನೈನಲ್ಲಿ ಹುಟ್ಟಿ ಬೆಳೆದ ನಾಗ ಚೈತನ್ಯ ಪದವಿ ಓದುತ್ತಿರುವಾಗಲೇ ಹೈದರಾಬಾದ್‌ಗೆ ಬಂದಿದ್ದರು. 


ಇದನ್ನೂ ಓದಿ-ಪ್ರಜ್ವಲ್ ದೇವರಾಜ್ ʼಮಾಫಿಯಾʼ ಟೀಸರ್‌ ರಿಲೀಸ್‌..! ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್ ನಲ್ಲಿ ತೆರೆಗೆ


"ಡಿಗ್ರಿ ಓದುವಾಗ ಬೇಸಿಗೆ ರಜೆಗೆಂದು ಮುಂಬೈಗೆ ಹೋಗಿ ಎಂಜಾಯ್ ಮಾಡುತ್ತಿದ್ದೆ.. ಚಿಕ್ಕವನಿದ್ದಾಗ ಅಮ್ಮನ ಜೊತೆ ರೈಲಿನಲ್ಲಿ ಮುಂಬೈಗೆ ಹೋಗಿದ್ದೆ.. ಈ ಎರಡು ಬಾರಿಯ ಪಯಣ ನನಗೆ ಯಾವಾಗಲೂ ವಿಶೇಷವಾಗಿರುತ್ತದೆ ಮತ್ತು ಇದು ನನ್ನ ಮನಸ್ಸಿನಿಂದ ಎಂದಿಗೂ ಅಳಿಸಿಹೋಗುವುದಿಲ್ಲ ಎಂದು ನಾಗ ಚೈತನ್ಯ ಈ ಸಂದರ್ಶನದಲ್ಲಿ ಹೇಳಿದ್ದಾರೆ. ಅದೂ ಅಲ್ಲದೆ ಜಗತ್ತಿನಾದ್ಯಂತ ಎಷ್ಟೇ ಸುತ್ತಾಡಿದರೂ, ಮಿಸ್ ಮಾಡಿಕೊಂಡರೂ ಕೊನೆಗೆ ನಿವೃತ್ತಿಯಾಗುವ ವೇಳೆಗೆ ಗೋವಾದಲ್ಲಿ ಸೆಟ್ಲ್ ಆಗುತ್ತೇನೆ" ಎಂದಿದ್ದಾರೆ ಚೈತು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.