ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್  ಅಂಬಾನಿಯ ಮಗ ಅನಂತ ಅಂಬಾನಿಯ ಮದುವೆ ಭರ್ಜರಿಯಾಗಿ ಮುಂಬೈನಲ್ಲಿ 12ರಂದು ನಡೆಯಲಿದೆ. 


COMMERCIAL BREAK
SCROLL TO CONTINUE READING

ಈಗಾಗಲೇ ಮದುವೆ ಸಮಾರಂಭ ನಡೆಯುತ್ತಿದ್ದು, ಬಾಲಿವುಡ್ ತಾರೆಯರು ವಿಶೇಷವಾಗಿ ಮಿಂಚುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಜಾನ್ವಿ ಕಪೂರ್ ಡಿಸೈನರ್ ಲೆಹೆಂಗ ನಲ್ಲಿ ಮಿಂಚಿದ್ದಾರೆ. ಮುಂಬೈನಲ್ಲಿ ಸಂಜೆ ನಡೆಯುತ್ತಿರುವ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಬಾಲಿವುಡ್ ಸೇರಿದಂತೆ ಬೇರೆ ಬೇರೆ ನಟ ನಟಿಯರು ಭಾಗವಹಿಸುತ್ತಿದ್ದಾರೆ.


ಇದನ್ನು ಓದಿ : ಹೊಸ ಕ್ಯಾಪ್ಟನ್ ಹಾರ್ದಿಕ್ ಅಲ್ಲ! ರೋಹಿತ್ ಶರ್ಮಾ ಮನಗೆದ್ದಿದ್ದ ಈ ಬ್ಯಾಟ್ಸ್’ಮನ್’ಗೆ ನಾಯಕನ ಪಟ್ಟ!


ಈ ಸಮಾರಂಭದಲ್ಲಿ ಮಿಂಚಿದ ಜಾನ್ವಿ ಕಪೂರ್ ಅರೆಂಜ್ ಕಲರ್ ಡಿಸೈನರ್ ಚೋಲಿ ಲೆಹೆಂಗ ಮತ್ತು ದುಪಟ್ಟಾದಲ್ಲಿ ಕಾಣಿಸಿಕೊಂಡರು. ಮದುವೆ ಪೂರ್ವ ಸಮಾರಂಭದಲ್ಲಿಯೂ ಹಾಟ್ ಟಾಪಿಕ್ ಆಗಿದ್ದ ಜಾನ್ವಿ ಕಪೂರ್ ಇದೀಗ ಈ ಸಮಾರಂಭದಲ್ಲಿ ಸ್ಟೋನ್ ಹೊಂದಿರುವ ನೆಕ್ಲೆಸ್ ಧರಿಸಿದ್ದು ಹಜಾರಿಲಾಲ್ ಲೆಗಾಸಿ ಆಭರಣ ಬ್ರಾಂಡ್ ಗೆ ಸೇರಿದೆ. ನೋಡಲು ಸಕ್ಕತ್ ಮಿಂಚುತ್ತಿದ್ದು ಇದರ ಬೆಲೆ ಕೇಳಿದರಂತೂ ಶಾಕ್ ಆಗುವುದು ಖಂಡಿತ ಆದರೆ ಅದರೊಟ್ಟಿಗೆ ನೆಕ್ಲೆಸ್ ನೋಡಿದರೆ ಮನ ಸೋಲುವಂತಿದೆ. 


ಇದನ್ನು ಓದಿ : ವಿರಾಟ್ ಕೊಹ್ಲಿ ಒಡೆತನದ One8 Commune pub ವಿರುದ್ಧ FIR ದಾಖಲು: ಕಾರಣವೇನು?


ನಟಿ ಧರಿಸಿರುವ ನೆಕ್ಲೆಸ್ ಬೆಲೆ 50 ಲಕ್ಷ ರೂಪಾಯಿ ಈ ಸಮಾರಂಭಕ್ಕೆ ಜಾನ್ವಿ ಕಪೂರ್ ತನ್ನ ಗೆಳೆಯ ಶಿಖರ್ ಪಹಾರಿಯಾ ಅವರೊಂದಿಗೆ ಆಗಮಿಸಿದ್ದರು. ನಟಿ ಸದ್ಯಕ್ಕೆ ಎನ್ ಟಿ ಆರ್‌ ಗೆ ಜೋಡಿ ಆಗಿ ದೇವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಈ ಸಿನಿಮಾ ಅಕ್ಟೋಬರ್ 10 ರಂದು ವಿಶ್ವದಾದ್ಯಂತ ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಬಿಡುಗಡೆಯಾಗಲಿದೆ.


ಈ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಸದ್ದು ಮಾಡುತ್ತಿದ್ದು ಜಾನ್ವಿ ಕಪೂರ್ ಅವರ ನೆಕ್ಲೆಸ್ ಜನರ ದೃಷ್ಟಿಯನ್ನು ಸೆಳೆಯುವಂತೆ ಮಾಡಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ