Regina Cassandra: ಸದ್ಯ ಎಲ್ಲೆಡೆ iifa 2024 ಫಿವರ್‌ ಜೋರಾಗಿದೆ. 7 ವರ್ಷಗಳ ಬಳಿಕ iifa ಅವಾರ್ಡ್‌ ನಡೆಯುತ್ತಿದ್ದು, ಸೆಲಿಬ್ರಿಟಿಗಳು ಸಖತ್‌ ಖುಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕನ್ನಡದ ʻಸೂರ್ಯಕಾಂತಿʼ ಚಿತ್ರದಲ್ಲಿ ನಟ ಚೇತನ್‌ ಅಹಿಂಸ ಜೊತೆ ನಟಿಸಿದ್ದ ನಟಿ ರೆಜಿನಾ ಕೂಡ ದುಬೈನಲ್ಲಿ iifa 2024 ರ ವೇದಿಕೆ ಮೇಲೆ ನೃತ್ಯ ಮಾಡಲಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಿನಿರಂಗಕ್ಕೆ ವಿಜಯ್‌ ರಾಘವೇಂದ್ರ ಪುತ್ರನ ಎಂಟ್ರಿ ಯಾವಾಗ ಗೊತ್ತಾ ?


ನಟಿ ರೆಜಿನಾ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದು, ಸ್ಯಾಂಡಲ್‌ವುಡ್‌ ಬಗ್ಗೆ ಸಹ ಒಂದಷ್ಟು ವಿಚಾರಗಳನ್ನು ಹೇಳಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡಿದ ಅನುಭವ ಅದ್ಭುತ ಎಂದಿದ್ದಾರೆ. ಮತ್ತೆ ಚಾನ್ಸ್‌ ಸಿಕ್ಕರೆ ಕನ್ನಡ ಸಿನಿಮಾದಲ್ಲಿ ನಟಿಸಲು ಸಿದ್ಧ ಎಂದು ಹೇಳಿದ್ದಾರೆ. ಕನ್ನಡದ ಡೈರೆಕ್ಟರ್‌ಗಳು ಪ್ರೊಡ್ಯೂಸರ್‌ಗಳ ಜೊತೆ ಕೆಲಸ ಮಾಡುವುದು ಖುಷಿ ತರುತ್ತದೆ ಎಂದಿದ್ದಾರೆ. 


iifa 2024 ರವೇದಿಕೆ ಮೇಲೆ ನೃತ್ಯ ಮಾಡುವುದು ಹೆಮ್ಮೆಯ ವಿಚಾರ. ಇದು ನನಗೆ ದೊರೆತಿದೆ. ಅದಕ್ಕೆ ಸಂತಸ ತಂದಿದೆ ಎಂದಿದ್ದಾರೆ. ಇದೇ ವೇಳೆ ತಮ್ಮ ಸೌಂದರ್ಯದ ಗುಟ್ಟಿನ ಬಗ್ಗೆ ಮಾತನಾಡಿದ ರೆಜಿನಾ, ನನ್ನ ಸೌಂದರ್ಯದ ಗುಟ್ಟು ಡಯೆಟ್‌ ಮತ್ತು ವರ್ಕೌಟ್‌ ಎಂದಿದ್ದಾರೆ. ನಾನು ಬ್ಯಾಲೆನ್ಸ್‌ಡ ಡಯೆಟ್‌ ಅನುಸರಿಸುತ್ತೇನೆ. ಹೆಚ್ಚು ವರ್ಕೌಟ್‌ ಮಾಡುತ್ತೇನೆ. ಅತಿಯಾದ ಆಹಾರ ಸೇವನೆಯಿಂದ ದೂರವಿದ್ದರೆ ಯಾರಾದರೂ ಫಿಟ್‌ನೆಸ್‌ ಕಾಪಾಡಿಕೊಳ್ಳಬಹುದು ಎಂದು ರೆಜಿನಾ ಹೇಳಿದ್ದಾರೆ. 


ಇದನ್ನೂ ಓದಿ: IIFA 2024: 69 ನೇ ವಯಸ್ಸಿನಲ್ಲಿ 150 ನೃತ್ಯಗಾರರೊಂದಿಗೆ 22 ನಿಮಿಷ ನೃತ್ಯ ಮಾಡಲಿದ್ದಾರೆ ಈ ಸ್ಟಾರ್‌ ಹೀರೋಯಿನ್‌ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.