IIFA Utsavam 2024 ವೇದಿಕೆ ಮೇಲೆ ರಾಣಾ - ತೇಜ ಶೈನಿಂಗ್..! ವೀಡಿಯೊ ವೈರಲ್
IIFA 2024 ತೆಲುಗು ನಿರೂಪಕರಾಗಿ ನಟ ರಾಣಾ ದಗ್ಗುಬಾಟಿ ಮತ್ತು ತೇಜ ಸಜ್ಜಾ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಡೇ-1 ಈವೆಂಟ್‌ಗೆ ಇಬ್ಬರು ತೆಲುಗು ಹೋಸ್ಟ್‌ಗಳಾಗಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.. ಈ ವೇಳೆ ರಾಣಾ ಯುವ ನಟ ತೇಜ ಸಜ್ಜಾ ಜೊತೆ... ವಿಡಿಯೋ ಜೊತೆ ಹೆಚ್ಚಿನ ಮಾಹಿತಿ ಇಲ್ಲಿದೆ.
IIFA Utsavam 2024 : IIFA 2024 ಹೊಸ ಸ್ವರೂಪದೊಂದಿಗೆ ಮತ್ತಷ್ಟು ಅದ್ಭುತವಾಗಿ ಮೂಡಿ ಬರುತ್ತಿದೆ. ಈ ವರ್ಷ ಈ ಪ್ರತಿಷ್ಠಿತ ಸಮಾರಂಭವು ಹಿಂದಿ ಮತ್ತು ದಕ್ಷಿಣ ಚಿತ್ರರಂಗವನ್ನು ಒಂದುಗೂಡಿಸುತ್ತದೆ. IIFA ಮೂರು ದಿನಗಳ ಕಾಲ (ಸೆಪ್ಟೆಂಬರ್ 27 ರಿಂದ 29) ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆಯಲಿದೆ.
1ನೇ ದಿನವನ್ನು IIFA Utsavam ಗೆ ನಿಗದಿಪಡಿಸಲಾಗುತ್ತದೆ. ಅಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. IIFA Utsavam ತೆಲುಗು ನಿರೂಪಕರಾಗಿ ನಟ ರಾಣಾ ದಗ್ಗುಬಾಟಿ ಮತ್ತು ತೇಜ ಸಜ್ಜಾ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಡೇ-1 ಈವೆಂಟ್‌ಗೆ ಇಬ್ಬರು ತೆಲುಗು ಹೋಸ್ಟ್‌ಗಳಾಗಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ:ʻiifa 2024 Regina Cassandra: ʻಸೂರ್ಯಕಾಂತಿʼ ಸುಂದರಿ ರೆಜಿನಾ ಸ್ಯಾಂಡಲ್‌ವುಡ್ ಬಗ್ಗೆ ಹೇಳಿದ್ದೇನು?
ಅದಕ್ಕಾಗಿ ತೇಜ ಮತ್ತು ರಾಣಾ ವೇದಿಕೆಯ ಮೇಲೆ ಇಬ್ಬರೂ ಪೂರ್ವಾಭ್ಯಾಸ ಮಾಡಿದ್ದಾರೆ.. ಈ ವೇಳೆ ಇಬ್ಬರು ಹಾಸ್ಯ ಚಟಾಕಿ ಹಾರಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು IIFA ಪ್ರಶಸ್ತಿಗಳ ಎರಡನೇ ದಿನದಂದು ಹಿಂದಿ ಚಲನಚಿತ್ರಗಳ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಈ ವರ್ಷ IIFA ಪ್ರಜ್ಞಾ ಜಸ್ವಾಲ್, ನೋರಾ, ಹನಿಸಿಂಗ್, ರೇಖಾ ಮತ್ತು ಶಾಹಿದ್ ಕಪೂರ್ ಅವರ ವಿಶೇಷ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದೆ. ರಾಣಾ ಬಾಹುಬಲಿ ಸಿನಿಮಾದಲ್ಲಿ ಭಲ್ಲಾಳ ದೇವನ ಪಾತ್ರದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೆಸರುವಾಸಿಯಾದರು.. ಅಲ್ಲದೆ, ಇತ್ತೀಚಿಗೆ ತೆರೆಕಂಡ ಹನುಮಾನ್ ಸಿನಿಮಾದ ಮೂಲಕ ಯುವ ನಟ ತೇಜ ಸಜ್ಜಾ ಇಂಡಿಯನ್ ಸಿನಿ ಇಂಡ್ರಸ್ಟ್ರಿಯಲ್ಲಿ ಹೊಸ ದಾಖಲೆ ಬರೆದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.