Ilayaraja daughter : ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಕುಟುಂಬದಲ್ಲಿ ಬಹುದೊಡ್ಡ ದುರಂತ ಸಂಭವಿಸಿದೆ. ಇಳಯರಾಜ ಅವರ ಪುತ್ರಿ, ಗಾಯಕಿ ಭವತಾರಿಣಿ ಇಂದು ಸಂಜೆ ಶ್ರೀಲಂಕಾದಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಗಾಯಕಿ ಕೊನೆಯುಸಿರೆಳೆದಿದ್ದಾಳೆ. ಅವರನ್ನು ಆಯುರ್ವೇದ ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ಕರೆದೊಯ್ಯಲಾಯಿತು.


COMMERCIAL BREAK
SCROLL TO CONTINUE READING

ಗಾಯಕಿ ಭವತಾರಿಣಿ ಅವರಿಗೆ ಕೇವಲ 47 ವರ್ಷ ವಯಸ್ಸಾಗಿತ್ತು. ಅವರ ಅಗಲಿಕೆಗೆ ಭಾರತೀಯ ಚಿತ್ರರಂಗವನ್ನು ಕಂಬನಿ ಮಿಡಿದಿದೆ. 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವು ಹಾಡುಗಳನ್ನು ಹಾಡಿ ಗುರುತಿಸಿಕೊಂಡಿದ್ದರು. ಇಳಯರಾಜ ಸಂಗೀತ ಸಂಯೋಜನೆಯ ರಸಯ್ಯ ಚಿತ್ರದ ಮೂಲಕ ಗಾಯಕಿಯಾಗಿ ಸಿನಿಜಗತ್ತಿಗೆ ಪಾದಾರ್ಪಣೆ ಮಾಡಿದರು.


ಇದನ್ನೂ ಓದಿ: BBK 10 : ʼತುಕಾಲಿ ಮಹಾರಾಜʼರಿಗೆ ಕಿಸ್‌ ಮಾಡಿ ಲವ್‌ ಯೂ ಎಂದ ಸುಂದರಿ..! ಯಾರವಳು ಗೊತ್ತೆ..?


‘ಮೇಲ್ ಬೋಲಾ’ ಎಂಬ ಹಾಡಿಗೆ ಭವತಾರಿಣಿ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರಪ್ರಶಸ್ತಿ ಪಡೆದರು. ಇಳಯರಾಜಾ, ಕಾರ್ತಿಕ್ ರಾಜಾ, ಯುವನ್ ಶಂಕರ್ ರಾಜಾ ಮುಂತಾದವರು ರಚಿಸಿದ ಹಾಡುಗಳನ್ನು ಹಾಡಿದ್ದಾರೆ. ತಮಿಳು ಮಾತ್ರವಲ್ಲದೆ, ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಗಳ ವಿವಿಧ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.