Ileana D'Cruz : ನಟಿ ಇಲಿಯಾನಾ ಕೆಲ ದಿನಗಳ ಹಿಂದೆ ತಾವು ತಾಯಿಯಾಗುವ ವಿಚಾರವನ್ನು ಬಹಿರಂಗ ಪಡಿಸಿದ್ದರು. ಮದುವೆಗೂ ಮೊದಲೇ ಮಗುನಾ..? ಮಗುವಿನ ತಂದೆ ಯಾರು..? ಎಂದೆಲ್ಲಾ ಟ್ರೋಲ್‌ ಕೂಡಾ ಆಗಿದ್ದರು. ಆದರೆ ಅವರು ಯಾವುದಕ್ಕೂ ಕೇರ್‌ ಮಾಡದೇ ಆಗ್ಗಾಗೆ ಪೋಟೋಗಳನ್ನು ಶೇರ್‌ ಮಾಡಿ ತಾಯಿಯಾಗುತ್ತಿರುವ ಖುಷಿಯನ್ನು ಹಂಚಿಕೊಳ್ಳುತ್ತಿದ್ದರು. 


COMMERCIAL BREAK
SCROLL TO CONTINUE READING

ಸದ್ಯ ಇಲಿಯಾನಾ ತಾವು ಗಂಡು ಮಗುವಿಗೆ ಜನ್ಮ ನೀಡಿರುವ ಸಂಗತಿಯನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗನ ಹೆಸರು ಕೋವಾ ಫೀನಕ್ಸ್ ಡೋಲನ್ ಎಂದು ಪರಿಚಯಿಸಿದ್ದಾರೆ. ಆದರೆ ಮಗುವಿನ ತಂದೆ ಯಾರು ಅನ್ನೋದು ಮಾತ್ರ ಗುಟ್ಟಾಗಿಯೇ ಇದೆ.  


OTT In India: ಒಟಿಟಿ ಸೆನ್ಸಾರ್‌ಶಿಪ್ ಸರ್ಕಾರದ ಮಹತ್ವದ ನಿರ್ಧಾರ


ಇನ್ನು ಇಲಿಯಾನಾ ಸಿನಿಮಾ ವಿಚಾರಕ್ಕೆ ಬಂದರೇ ತೆಲುಗಿನ ದೇವದಾಸು ಸಿನಿಮಾ ಮೂಲಕ ಬೆಳ್ಳೆತೆರೆಗೆ ಕಾಲಿಟ್ಟ ಇಲಿಯಾನಾ ಮುಂದೆ ತಮಿಳು, ಹಿಂದಿ, ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಮಹೇಶ್‌ ಬಾಬು ಜೊತೆ ನಟಿಸಿದ ಪೋಕಿರಿ ಸಿನಿಮಾದಿಂದ ಈ ನಟಿಗೆ ದೊಡ್ಡ ಬ್ರೇಕ್‌ ಸಿಕ್ಕಿತ್ತು. ಇದರಿಂದ ಬಾಲಿವುಡ್‌ನಲ್ಲಿಯೂ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ತಮ್ಮ ಮಾದಕ ಮೈಮಾಟದಿಂದಲೇ ಇಲಿಯಾನಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಇತ್ತೀಚೆಗೆ ನಟಿ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದಾರೆ. 


ಮೈಕಲ್‌ ಡೋಲನ್‌ ಎಂಬುವರನ್ನು ಇಲಿಯಾನಾ ಮದುವೆಯಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಸದ್ಯ ಮಗುವನ್ನು ಸ್ವಾಗತಿಸಿದ್ದಾರೆ ಎನ್ನುವ ಕುರಿತು ಚರ್ಚೆ ಆಗುತ್ತಿದೆ. ಈ ಹಿಂದೆ ಇಲಿಯಾನಾ ಆಸ್ಟೇಲಿಯಾ ಮೂಲದ ಪೋಟೋಗ್ರಾಫರ್‌ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗುತ್ತಿತ್ತು. ಇಬ್ಬರು ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುವ ವದಂತಿಯೂ ಇದೆ. 4 ವರ್ಷಗಳಿಂದ ಇವರಿಬ್ಬರೂ ದೂರವಾಗಿದ್ದಾರೆ ಎನ್ನುವ ಗುಸುಗುಸು ಹಬ್ಬಿತ್ತು. 


ಇದನ್ನೂ ಓದಿ- ಅದ್ಭುತ ಯಶಸ್ಸಿನೊಂದಿಗೆ ಮುಕ್ತಾಯವಾದ ಮಿಸ್ಟರ್, ಮಿಸ್ ಮತ್ತು ಮಿಸೆಸ್ ಸ್ಟಾರ್‌ ಯೂನಿವರ್ಸ್‌ ಇಂಡೋ-ಇಂಟರ್ನ್ಯಾಷನಲ್ ಫ್ಯಾಶನ್ ಕಾರ್ನಿವಲ್ 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.