Ileana DCruz: ಕೊನೆಗೂ ತನ್ನ ಮಗುವಿನ ಅಪ್ಪ ಯಾರೆಂದು ಹೇಳಿದ ಇಲಿಯಾನಾ.!
Ileana DCruz Boyfriend : ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಪ್ರೆಗ್ನೆನ್ಸಿ ನಂತರ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಾರೆ. ಇದೀಗ ತಮ್ಮ ಅಧಿಕೃತ Instagram ಖಾತೆಯಲ್ಲಿ ಬ್ಲ್ಯಾಕ್ ಆಂಡ್ ವೈಟ್ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ಮಗುವಿನ ತಂದೆ ಯಾರೆಂದು ರಿವೀಲ್ ಮಾಡಿದ್ದಾರೆ.
Ileana DCruz: ಇಲಿಯಾನಾ ಡಿಕ್ರೂಜ್ ಕೊನೆಗೂ ತಮ್ಮ ಬಾಯ್ ಫ್ರೆಂಡ್ ಜೊತೆ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಗೆಳೆಯನ ಜೊತೆ ಇರುವ ಬ್ಲ್ಯಾಕ್ ಆಂಡ್ ವೈಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ತಾನು ಗರ್ಭಿಣಿಯಾದಾಗಿನಿಂದ ಗೆಳೆಯ ತನ್ನ ಕಾಳಜಿವಹಿಸಿದ ರೀತಿಯ ಬಗ್ಗೆ ಇಲಿಯಾನಾ ಹೇಳಿಕೊಂಡಿದ್ದಾರೆ.
ತನ್ನ ಗರ್ಭಾವಸ್ಥೆಯ ಪ್ರಯಾಣವು ಭಾವನಾತ್ಮಕವಾಗಿತ್ತು. ಆದರೆ ಚಿಕ್ಕ ಮಗುವನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ ಎಂದು ನಟಿ ಇಲಿಯಾನಾ ಹೇಳಿದ್ದಾರೆ. ಜೀವನದಲ್ಲಿ ಕೆಟ್ಟ ದಿನಗಳ ಸಮಯದಲ್ಲಿ ಗೆಳೆಯ ತನ್ನನ್ನು ಸಮಾಧಾನಪಡಿಸುತ್ತಾನೆ ಮತ್ತು ದಿನವಿಡೀ ಕಾಳಜಿವಹಿಸುತ್ತಾನೆ ಎಂದು ಇಲಿಯಾನಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಶ್ರೇಷ್ಠ ನಟ ಡಾ ರಾಜ್ಕುಮಾರ್ ಆದ್ರೆ, ನೆಚ್ಚಿನ ನಟ ಪುನೀತ್ - ಸಿಎಂ ಸಿದ್ದರಾಮಯ್ಯ
"ಗರ್ಭಿಣಿಯಾಗಿರುವುದು ತುಂಬಾ ಸುಂದರವಾದ ಆಶೀರ್ವಾದವಾಗಿದೆ. ನಾನು ಇದನ್ನು ಅನುಭವಿಸುವಷ್ಟು ಅದೃಷ್ಟಶಾಲಿ ಎಂದು ನಾನು ಭಾವಿಸಿರಲಿಲ್ಲ, ಹಾಗಾಗಿ ಈ ಪ್ರಯಾಣದಲ್ಲಿ ನಾನು ನಂಬಲಾಗದಷ್ಟು ಅದೃಷ್ಟಶಾಲಿ ಎಂದು ನನಗೆ ಅನಿಸುತ್ತಿದೆ. ನಿಮ್ಮೊಳಗೆ ಬೆಳೆಯುತ್ತಿರುವ ಜೀವನವನ್ನು ಅನುಭವಿಸುವುದು ಎಷ್ಟು ಸುಂದರ ಅನುಭವ. ನಾನು ವಿವರಿಸಲು ಸಾಧ್ಯವಿಲ್ಲ. ಬಹುಪಾಲು ದಿನಗಳಲ್ಲಿ ನಾನು ನನ್ನ ಬೇಬಿ ಬಂಪ್‌ನ್ನು ದಿಟ್ಟಿಸಿ ನೋಡುತ್ತೇನೆ. ನಾನು ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ" ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಮುಟ್ಟಾದ ಮಹಿಳೆಯರು ʼಆದಿಪುರುಷ್ʼ ಸಿನಿಮಾ ನೋಡಬಹುದಾ? ಬಾಬು ಗೊಗಿನೇನಿ ವ್ಯಂಗ್ಯ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.