ನವದೆಹಲಿ: ಬಾಲಿವುಡ್ ಸೆಲೆಬ್ರಿಟಿಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ಸುದ್ದಿಗಳು ಪ್ರಕಟಗೊಳ್ಳುತ್ತವೆ. ಇವುವಳಲ್ಲಿ ಕೆಲ ವರದಿಗಳು ನಿಜ ಎಂದು ಸಾಬೀತಾದರೆ, ಕೆಲ ವರದಿಗಳು ಸುಳ್ಳು ಎಂದು ಸಾಬೀತಾಗುತ್ತವೆ. ಹೀಗಾಗಿ ಹಲವು ತಾರೆಯರು ಸುಳ್ಳು ವದಂತಿ ಅಥವಾ ಸುದ್ದಿಗೆ ಗುರಿಯಾಗುತ್ತಾರೆ. ಖ್ಯಾತ ಬಾಲಿವುಡ್ ನಟಿ ಇಲಿಯಾನ ಡಿ'ಕ್ರೂಜ್ (Ileana D'Cruz Fake News) ಜೊತೆ ಕೂಡ ಇಂತಹುದೇ ಒಂದು ಘಟನೆ ಸಂಭವಿಸಿದೆ ಮತ್ತು ಈ ಕುರಿತು ಹೇಳಿಕೊಂಡಿರುವ ಇಲಿಯಾನ ತಾವೂ ಕೂಡ ಸುಳ್ಳು ಸುದ್ದಿಗೆ ಗುರಿಯಾಗಿರುವುದಾಗಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಅಬಾರ್ಶನ್ ಮಾಡಿಸಿರುವ ಕುರಿತು ವರದಿಯಾಗಿತ್ತು
ಬಾಲಿವುಡ್ ಹಂಗಾಮಾಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ Ileana D'Cruz, 'ಕೆಲ ದಿನಗಳ ಹಿಂದೆ ಒಂದು ಸುದ್ದಿ ವರದಿಯಾಗಿತ್ತು. ಆ ಸುದ್ದಿಯಲ್ಲಿ ನಾನು ಪ್ರೆನ್ಗೆಂಟ್ (Ileana D'Cruz Pregnancy)ಆಗಿರುವ ಕುರಿತು ಹಾಗೂ ನಾನು ಆ ಬಳಿಕ ಅಬಾರ್ಶನ್ ಮಾಡಿಸಿರುವುದಾಗಿ (Ileana D'Cruz Abortion) ಹೇಳಲಾಗಿತ್ತು. ಇದು ನನಗೆ ತುಂಬಾ ನೋವು ನೀಡಿತ್ತು ಎಂಬುದು ನಿಜ. ಯಾವ ವ್ಯಕ್ತಿ ಈ ರೀತಿ ವರದಿ ಮಾಡಿದ್ದನೋ ಗೊತ್ತಿಲ್ಲ ಆದರೆ, ಅದು ತುಂಬಾ ವಿಚಿತ್ರವಾಗಿತ್ತು' ಎಂದಿದ್ದಾರೆ. ಇದರ ಜೊತೆಗೆ ತಾವು ಆತ್ಮಹತ್ಯೆಗೆ ಯತ್ನಿಸಿರುವ ಕುರಿತಾದ ಸುಳು ವರದಿಯ ಕುರಿತು ಕೂಡ ಇಲಿಯಾನಾ ಈ ವೇಳೆ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ-ಲಡಾಖ್ ನಲ್ಲಿ ನಡೆಯಲಿದೆ Laal Singh Chaddha ಸಿನಿಮಾ ಚಿತ್ರೀಕರಣ ; ಕಾರ್ಗಿಲ್ ನಲ್ಲಿ Aamir Khan ತಂಡ


Radhe Release Date: ಮನೆಯಲ್ಲಿಯೇ ಕುಳಿತು ವಿಕ್ಷೀಸಿ ಸಲ್ಮಾನ್ ಅಭಿನಯದ Radhe ಚಿತ್ರದ First Day First Show


2018ರಲ್ಲಿ ಪ್ರೆಗ್ನೆನ್ಸಿ ಸುದ್ದಿ ವರದಿಯಾಗಿತ್ತು
ವರ್ಷ 2018ರಲ್ಲಿ ಇಲಿಯಾನಾ ಗರ್ಭಿಣಿಯಾಗಿರುವ ಕುರಿತು ವರದಿಯಾಗಿತ್ತು ಮತ್ತು ಶೀಘ್ರದಲ್ಲಿಯೇ ಇಲಿಯಾನ (Ileana D'Cruz News) ಮುದ್ದಾದ ಮಗುವಿಗೆ ಜನ್ಮ ನೀಡಲಿದ್ದಾಳೆ ಎನ್ನಲಾಗಿತ್ತು. ಆ ಸಂದರ್ಭದಲ್ಲಿ ಇಲಿಯಾನ ಆಂಡ್ರೂ ನಿಬೋನ್ ಜೊತೆಗೆ ರಿಲೇಶನ್ ಶಿಪ್ ನಲ್ಲಿದ್ದಳು. ಆದರೆ ಬಳಿಕ ಇಲಿಯಾನಾ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಹಾಕುವ ಮೂಲಕ ಈ ರೀತಿಯ ವರದಿಗಳನ್ನು ಖಂಡಿಸಿದ್ದರು. ಜೊತೆಗೆ ತನ್ನ ಪೋಸ್ಟ್ ನಲ್ಲಿ ನಾನು ಗರ್ಭಿಣಿ ಕೂಡ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಳು.


ಇದನ್ನೂ ಓದಿ-ಮಾಲ್ಡೀವ್ಸ್ ನಲ್ಲಿ ಮಸ್ತಿ ಮಾಡುವ ನಟ ನಟಿಯರಿಗೆ ನವಾಜುದ್ದೀನ್ ಸಿದ್ದಿಕಿ ಹೇಳಿದ್ದೇನು ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.