Ileana D`Cruz: ಕೊನೆಗೂ ಬಾಯ್ಫ್ರೆಂಡ್ ಮುಖ ತೋರಿಸಿದ ಗೋವಾ ಬ್ಯೂಟಿ..!
Ileana D`Cruz Boyfriend photo Viral : ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಗರ್ಭಿಣಿ. ಆದರೆ ತನ್ನ ಮಗುವಿಗೆ ತಂದೆಯಾಗಲಿರೋ ವ್ಯಕ್ತಿಯನ್ನು ಪರಿಚಯಿಸಿರಲಿಲ್ಲ. ಇದೀಗ ನಟಿ ನಿಮ್ಮ ಮಗುವಿನ ತಂದೆ ಯಾರು ಎಂದು ಕೇಳುತ್ತಿದ್ದ ನೆಟ್ಟಿಗರಿಗೆ ಉತ್ತರ ಕೊಟ್ಟಿದ್ದಾರೆ.
Ileana D'Cruz : ನಟಿ ಇಲಿಯಾನಾ ಡಿ ಕ್ರೂಸ್ ತಾಯಿಯಾಗುವ ಖುಷಿಯಲ್ಲಿ ಇದ್ದಾರೆ. ಆಗಾಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳುವ ಮೂಲಕ ಖುಷಿಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಮಗುವಿನ ತಂದೆ ಯಾರೆಂದು ಮಾತ್ರ ರಿವೀಲ್ ಮಾಡಿರಲಿಲ್ಲ.
ಇಲಿಯಾನಾ ಡಿ ಕ್ರೂಸ್ ಕೊನೆಗೂ ಆ ಮಿಸ್ಟರಿ ಮ್ಯಾನ್ ಯಾರು ಅನ್ನೋದಕ್ಕೆ ಚಿಕ್ಕದೊಂದು ಹಿಂಟ್ ಕೊಟ್ಟಿದ್ದಾರೆ. ಇದೀಗ ನಟಿ ತನ್ನ ಮಗುವಿನ ತಂದೆ ಹಾಗೂ ತನ್ನ ಬಾಯ್ ಪ್ರೆಂಟ್ ಪೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಹಿಂದೆ ಇಲಿಯಾನಾ ತಮ್ಮ ಭಾವಿ ಪತಿಯ ಬ್ಲರ್ ಫೋಟೊ ಶೇರ್ ಮಾಡಿದ್ದರು. ಈಗ ಮುಖ ತೋರಿಸಿದ್ದಾರೆ.
ಇದನ್ನೂ ಓದಿ-ತಮನ್ನಾ ಬಳಿಕ ಮತ್ತಿಬ್ಬರಿಂದ ನೋ ಕಿಸ್ಸಿಂಗ್ ರೂಲ್ಸ್ ಬ್ರೇಕ್...ಮೈಚಳಿ ಬಿಟ್ಟು ಚುಂಬಿಸಿದ ನಟಿಯರಿವರು..!
ಇನ್ನು ಇಲಿಯಾನಾ ಅವರು ತೆಗೆದುಕೊಂಡಿದ್ದ ನಿರ್ಧಾರಕ್ಕೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಆದರೆ ನಟಿ ಅದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ನಟಿ ಮಗುವಿನ ತಂದೆ ಯಾರೆಂದು ಹೇಳದೆ ಹೋದರೂ, ಮುಖವನ್ನು ತೋರಿಸಿದ್ದಾರೆ. ಈ ಪೋಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನಟಿ ಅದರಲ್ಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಇನ್ನು ನಟಿ ಇಲಿಯಾನಾ ಶೇರ್ ಮಾಡಿಕೊಂಡಿರುವ ಪೋಸ್ಟ್ನ ಕೆಳಗೆ "ಕೆಲವು ದಿನಗಳಿಂದ ನನ್ನ ಬಗ್ಗೆ ನಾನು ಯೋಚಿಸುವುದನ್ನೇ ಮರೆತಿದ್ದೇನೆ. ಆದರೆ ಈ ವ್ಯಕ್ತಿ ಬಂಡೆಯ ಹಾಗೇ ನನ್ನ ಜೊತೆ ಇದ್ದಾರೆ. ನನ್ನ ಕಣ್ಣೀರು ಒರೆಸಿದ್ದಾರೆ. ನನ್ನನ್ನು ನಗಿಸುತ್ತಾರೆ. ನಾನು ಎಣು ಎಂದು ಅರ್ಥ ಮಾಡಿಕೊಂಡು ನನ್ನನ್ನು ಅಪ್ಪಿಕೊಂಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ-ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸ್ಯಾಂಡಲ್ವುಡ್ ಪ್ರೇಮ್ & ಬಾಲಿವುಡ್ ಸಂಜಯ್ ದತ್..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.