Bhagyalakshmi Serial: ಹಬ್ಬದಂದು ತನ್ಮಯ್ ಕೈಜಾರಿ ತಿಂಡಿ ಚೆಲ್ಲಾಪಿಲ್ಲಿ: ಹಸಿವು ತಾಳಲಾರದೇ ತಾಂಡವ್ ಪರವಾಗ್ತಾರಾ ಮಕ್ಕಳು!
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಮನೆಯಲ್ಲಿ ಯುಗಾದಿ ಹಬ್ಬದಂದು ಹಬ್ಬದ ಅಡುಗೆ ಊಟ ಮಾಡೋಕೆ ಆಗದೆ ಹಸಿವಿನಿಂದ ಇರುತ್ತಾರೆ. ಅದೇ ಸಮಯದಲ್ಲಿ ಹಸಿವಿನಿಂದ ಇರುವ ಮಕ್ಕಳು ತಾಂಡವ್ ಊಟಕ್ಕೆ ಕರೆಯುತ್ತಾನೆ. ಮಕ್ಕಳು ಗೆರೆ ದಾಟಿ ಅಪ್ಪನ ಬಳಿ ಹೋಗುತ್ತಾರ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bhagyalakshmi Serial Ugadi Celebration: ಪ್ರಸ್ತುತ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯಾ ಯುಗಾದಿ ಹಬ್ಬದಂದು ತಿಂಡಿಗೆ ಉಪ್ಪಿಟ್ಟು ಕೇಸರಿಬಾತ್ ಮಾಡಿ, ಅದರ ಪಾತ್ರೆಯನ್ನು ಒಂದರ ಮೇಲೊಂದು ಇಟ್ಟಿರುತ್ತಾಳೆ. ಹಸಿವು ತಾಳಲಾರದ ತನ್ಮಯ್ ತಿಂಡಿ ಏನಿದೆಂದು ನೋಡಲು ಹೋಗಿ ಕೈಜಾರಿ ಕೆಳಗೆ ಬೀಳಿಸುತ್ತಾನೆ. ಮತ್ತೆ ಕೆಳಗೆ ಜೆಲ್ಲಿದ ತಿಂಡಿಯನ್ನು ಪಾತ್ರೆಯಲ್ಲಿಗೆ ಹಾಕುತ್ತಾನೆ. ಆಗ ಕುಸುಮಾ ಜೊತೆಗೆ ಎಲ್ಲರೂ ಸೇರಿ ತನ್ಮಯ್‌ಗೆ ಬೈಯುತ್ತಾರೆ.
ತದನಂತರ ಮಕ್ಕಳಿಬ್ಬರು ಮನೆಯಲ್ಲಿ ಹಬ್ಬವಿದ್ದರೂ ಹಬ್ಬದ ಅಡುಗೆ ಊಟ ಮಾಡೋಕೆ ಆಗದೆ ಇರುತ್ತಾರೆ. ಭಾಗ್ಯಾ ಅಡುಗೆ ಮಾಡೋಕಾಗದೇ ಕೂತಾಗ, ಉಳಿದವರೆಲ್ಲಾ ಹಸಿವಿನಿಂದ ಇರುತ್ತಾರೆ. ಇನ್ನೊಂದು ಕಡೆ ಮನೆಯಲ್ಲಿ ಕುಸುಮಾ, ಧರ್ಮಾ ಎಲ್ಲಾ ಸದಸ್ಯರೂ ಕುಳಿತುಕೊಂಡು ಯೋಚನೆ ಮಾಡುತ್ತಾ ಇರುತ್ತಾರೆ. ಪ್ರತಿಯೊಬ್ಬರು ಊಟ ಮಾಡೊಕಾಗದೇ ಬಹಳ ಹಸಿವಿನಿಂದ ಯೋಚನೆ ಮಾಡುತ್ತಿರುತ್ತಾರೆ. ಸುನಂದಾ ಮಕ್ಲಳು ಮುಖ ನೋಡೋಕೆ ಆಗುತ್ತಿ ಎಂದು ಹೇಳುತ್ತಾಳೆ. ತನ್ಮಯ್ ಕೂಡ ಹೊಟ್ಟೆ ಹಸಿಯುತ್ತಾ ಇದೆ ಎಂದು ಹೇಳುತ್ತಾನೆ.
ಇದನ್ನೂ ಓದಿ: Seetha raama serial: ಸೀತಾರಾಮ ಸೀರಿಯಲ್ ಅಶೋಕ್ ನಿಜವಾದ ಪತ್ನಿ ಯಾರು ಗೊತ್ತಾ? ಇವರ ಹಿನ್ನಲೆ ಗೊತ್ತಾದ್ರೆ ಶಾಕ್ ಆಗ್ತೀರ!!
ಇದೇ ಸಮಯವನ್ನು ತಾಂಡವ್ ಸದುಪಯೋಗ ಪಡಿಸಿಕೊಳ್ಳುತ್ತಾನೆ. ಮನೆಯನ್ನು ಎರಡು ಭಾಗವನ್ನಾಗಿ ಮಾಡಿ ಕುಸಮಾ ಗೆರೆಯನ್ನು ಎಳೆದಿರುತ್ತಾಳೆ. ಹಾಗೆಯೇ ಯಾರು ಆ ಗೆರೆಯನ್ನು ದಾಟಿ ಒಳಗೆ ಹೋಗಬಾರದು ಎಂದು ಹೇಳಿರುತ್ತಾಳೆ. ಇಂತಹ ಸಂದರ್ಭದಲ್ಲಿ ತಾಂಡವ್ ಮೊದಲೇ ಅಡುಗೆ ಮಾಡಿದ್ದು, ನಿಮ್ಮಮ್ಮ ಅಡುಗೆ ಮಾಡುತ್ತಾಳೆಂಬ ಗ್ಯಾರೆಂಟಿ ಇಲ್ಲ. ನಿಮನ ಊಟ ಮಾಡಬೇಕೆಂದು ಅನಿಸಿದರೇ ಗೆರೆ ದಾಟಿ ಅಪ್ಪನ ಜೊತೆಗೆ ಊಟ ಮಾಡಲು ಬನ್ನಿ ಎಂದು ಮಕ್ಕಳನ್ನು ಊಟಕ್ಕೆ ಕರೆಯುತ್ತಾನೆ.
ಆದರೆ ಮಕ್ಕಳಿಗೆ ಹಸಿವಿನಿಂದಯಿರುವ ಕಾರಣ ಯಾರು ಊಟ ಕೊಡುತ್ತಾರೋ ಅವರ ಕಡೆ ನಾವು ಹೋಗಿಬಿಡೋಣ ಅನ್ನುವಂತಿರುತ್ತಾರೆ. ಮಕ್ಕಳಿಬ್ಬರು ಮಕ್ಕಳು ಹಸಿವು ತಾಳಲಾರದೆ ಅಜ್ಜಿ ಹಾಕಿರುವ ಗೆರೆಯ ಹತ್ತಿರ ಹೋಗುತ್ತಾರೆ. ಅದೇ ಸಮಯಲ್ಲಿ ಕುಸುಮಾ ಹಾಗೂ ಉಳಿದವರು ಅವರನ್ನು ಯಾರು ಮಕ್ಕಳನ್ನು ತಡೆಯದೆ ಸುಮ್ಮನಿರುತ್ತಾರೆ. ಪ್ರತಿಯೊಬ್ಬರು ಮಕ್ಕಳ ನಡೆ ನೋಡಿ ಶಾಕ್ ಆಗಿರುತ್ತಾರೆ. ಹಾಗಿದ್ರೇ ತನ್ಮಯ್ ಹಾಗೂ ತನ್ವಿ ಗೆರೆ ದಾಟಿ ಅಪ್ಪನ ಜೊತೆಗೆ ಊಟ ಮಾಡುತ್ತಾರೆಂಬುದನ್ನು ಬರುವ ಸಂಚಿಕೆಯಲ್ಲಿ ನೋಡಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.