ಮದುವೆ ವಿಷಯದಲ್ಲಿ 99% ತಪ್ಪು ಮಾಡುವವರು ಪುರುಷರೇ ಎಂದಿದ್ದೇಕೆ ಈ ಹಾಟ್ ಹೀರೋಯಿನ್?
Marriage: ಬೆಂಗಳೂರಿನ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡುತ್ತಾ, ‘ನಾನು ಅವರ ವೀಡಿಯೋ ನೋಡಿದೆ. ಅವರು ಕಿರುಕುಳ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ವಿಷಯದಲ್ಲಿ 99% ಪುರುಷರು ತಪ್ಪು ಮಾಡುತ್ತಾರೆ’ ಎಂದಿದ್ದಾರೆ ನಟಿ.
Marriage Mistakes: ಬಾಯಿ ಬಿಟ್ಟರೆ ವಿವಾದ ಸೃಷಿಸುವ ಬಾಲಿವುಡ್ನ ಬೋಲ್ಡ್ ಗರ್ಲ್, ಹಾಟ್ ಹೀರೋಯಿನ್ ಮತ್ತೀಗ ಬಿಜೆಪಿಯ ಸಂಸದೆ ಕಂಗನಾ ರಣಾವತ್ ಗೆ ವಿಷಯ ತನಗೆ ಅಥವಾ ತಮ್ಮ ಫಿಲಂಗೆ ಸಂಬಂಧ ಪಟ್ಟಿರಬೇಕು ಅಂತೇನಿಲ್ಲ. ಮೀಡಿಯಾದವರು ಮೈಕ್ ಹಿಡಿದರೆ ಸಾಕು ಮಾತನಾಡುತ್ತಾರೆ. ಅದು ವಿವಾದ ಆಗುತ್ತದೆ. ವಿವಾದದ ಬಗ್ಗೆ ಕಂಗನಾ ತಲೆಕೆಡಿಸಿಕೊಳ್ಳುವುದಿಲ್ಲ. ಮತ್ತೆ ಮೈಕ್ ಎದುರಾದಾಗ ಮತ್ತೊಂದು ಬಾಂಬ್ ಸಿಡಿಸುತ್ತಾರೆ. ಈಗಲೂ ಹಾಗೆಯೇ ಆಗಿದೆ. ಮದುವೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ಮದುವೆ ವಿಷಯದಲ್ಲಿ 99% ತಪ್ಪು ಮಾಡುವವರು ಪುರುಷರೇ’ ಅಂತಾ ಕಂಗನಾ ರಣಾವತ್ ಹೊಸ ಕಿಡಿ ಹೊತ್ತಿಸಿದ್ದಾರೆ. ಬೆಂಗಳೂರಿನ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡುತ್ತಾ, ‘ನಾನು ಅವರ ವೀಡಿಯೋ ನೋಡಿದೆ. ಅತುಲ್ ಸುಭಾಷ್ ಅವರಿಂದ ಹೆಂಡತಿ ಕೋಟ್ಯಂತರ ರೂಪಾಯಿ ಕೇಳಿದ್ದಾರೆ. ಅವರು ತಮ್ಮ ಆದಾಯಕ್ಕೂ ಮೀರಿ ಕೊಟ್ಟಿದ್ದಾರೆ. ಕಡೆಗೆ ಕಿರುಕುಳ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ವಿಷಯದಲ್ಲಿ 99% ಪುರುಷರು ತಪ್ಪು ಮಾಡುತ್ತಾರೆ. ಈ ಪ್ರಕರಣದ ಬಗ್ಗೆ ತನಿಖೆಯಾಗಬೇಕು. ಅದಕ್ಕಾಗಿ ಪ್ರತ್ಯೇಕ ಸಂಸ್ಥೆಯೊಂದನ್ನು ರಚಿಸಬೇಕು’ ಎಂದಿದ್ದಾರೆ.
ಸಂಸತ್ತಿನ ಹೊರಗೆ ಮಾಧ್ಯಮದವರ ಜೊತೆ ಮಾತನಾಡಿದ ಕಂಗನಾ ರಣಾವತ್, ಅತುಲ್ ಸುಭಾಷ್ ಆತ್ಮಹತ್ಯೆಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದೆ’ ಎಂದರು. ಆಗ ಬೆಚ್ಚಿ ಬೀಳುವ ಸರದಿ ಎದುರುಗಿದ್ದ ಪತ್ರಕರ್ತರದ್ದಾಗಿತ್ತು. ಅತುಲ್ ಸುಭಾಷ್ ಅವರ ವೀಡಿಯೋ ‘ಹೃದಯವಿದ್ರಾವಕವಾಗಿದೆ’ ಅಂತಾ ಹೇಳಿದಾಗ ಅಲ್ಲಿದ್ದ ಕೆಲ ಪತ್ರಕರ್ತರ ಎದೆ ಕೂಡ ಒಡೆದುಹೋಯಿತು. ಏಕೆಂದರೆ ‘ಯಾಕಾದರೂ ಈ ಯಮ್ಮನಿಗೆ ಮೈಕ್ ಹಿಡಿದ್ವಿ?’ ಅಂತಾ…
ಇದನ್ನೂ ಓದಿ- ವೃತ್ತಿಜೀವನದ ಪೀಕ್'ನಲ್ಲಿರುವಾಗಲೇ ವೈಫ್ ಆಗಲು ಶ್ರೀವಲ್ಲಿ ರೆಡಿ! ಎಂಗೇಜ್ಮೆಂಟ್ ತಯಾರಿಯಲ್ಲಿ ರಶ್ಮಿಕಾ ಮಂದಣ್ಣ!!
ಇಷ್ಟಕ್ಕೆ ಬಿಟ್ಟರೆ ಅವರನ್ನು ಕಂಗನಾ ರಣಾವತ್ ಎನ್ನಲು ಸಾಧ್ಯವಿಲ್ಲ. ನಂತರ ಸಂಸ್ಕೃತಿಯ ಬಗ್ಗೆ ಉಪದೇಶ ನೀಡಿದರು. ‘ಭಾರತದ ಭವ್ಯ ಸಂಸ್ಕೃತಿಯ ರೀತಿ ಮದುವೆಯಾದರೆ ಸಮಸ್ಯೆ ಬಾರದು’ ಎಂದು ಹೇಳಿದರು. ಅತುಲ್ ಸುಭಾಷ್ ‘ಯಾವ ಸಂಸ್ಕೃತಿಯ ರೀತಿ ಮದುವೆ ಆಗಿದ್ದಾರೆ ಎನ್ನುವುದು ನಿಮಗೆ ಗೊತ್ತೇ? ಎಂದು ಪ್ರಶ್ನಿಸುವ ಧೈರ್ಯ ಮಾಡಲಿಲ್ಲ ಪತ್ರಕರ್ತರು. ಏಕೆಂದರೆ ಕಂಗನಾ ಮಾತುನಿಲ್ಲಿಸಿದರೆ ಸಾಕು ಎನ್ನುವಂತಿತ್ತು ಅವರ ಪರಿಸ್ಥಿತಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.