ನವದೆಹಲಿ: ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ಹೊಸ ತಲೆಮಾರಿನ ಅಭಿಮಾನಿಗಳಲ್ಲಿ ಇಂದಿಗೂ ಜನಪ್ರಿಯ ಮುಖವಾಗಿ ಮುಂದುವರೆದಿದ್ದಾರೆ.ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು ತಮ್ಮ ಹಳೆಯ ನೆನಪುಗಳಿಗೆ ಜಾರಿ ಆರಂಭದ ದಿನಗಳಲಿ ತಾವು ಗ್ಯಾರೇಜ್ ನಲ್ಲಿ ವಾಸಿಸುತ್ತಿರುವ ಮತ್ತು ಡ್ರಿಲ್ಲಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

'ಇಂಡಿಯನ್ ಐಡಲ್" ಸೀಸನ್ 11 ರ ಸ್ಪರ್ಧಿಗಳು 1976 ರ ಸೂಪರ್ಹಿಟ್ "ಚರಸ್" ನ "ಕಲ್ ಕಿ ಹಸೀನ್ ಮುಲಾಕತ್ ಕೆ ಲಿಯೆ" ಹಾಡನ್ನು ಪ್ರದರ್ಶಿಸಿದ ನಂತರ ಮಾತನಾಡಿದ ಹಿರಿಯ ನಟ ಧರ್ಮೇಂದ್ರ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.'ನನ್ನ ಆರಂಭದ  ದಿನಗಳಲ್ಲಿ, ನಾನು ಮುಂಬಯಿಯಲ್ಲಿ ಸರಿಯಾದ ಮನೆ ಹೊಂದಿಲ್ಲದ ಕಾರಣ ನಾನು ಗ್ಯಾರೇಜ್‌ನಲ್ಲಿ ವಾಸಿಸುತ್ತಿದ್ದೆ. ಮುಂಬೈನಲ್ಲಿ ಬದುಕುಳಿಯಲು, ನಾನು ಡ್ರಿಲ್ಲಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ, ಅಲ್ಲಿ ನನಗೆ 200 ರೂ. ಸಂಬಳ ನೀಡಲಾಗುತ್ತಿತ್ತು ಮತ್ತು ಕೆಲವು ಹೆಚ್ಚುವರಿ ಹಣವನ್ನು ಸಂಪಾದಿಸಲು ನಾನು ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದೆ' ಎಂದು ಅವರು ಹೇಳಿದರು.


ಪಂಜಾಬ್ ಮೂಲದ ಧರ್ಮೇಂದ್ರ ಎಪ್ಪತ್ತರ ಮತ್ತು ಎಂಭತ್ತರ ದಶಕದ ಅಗ್ರ ತಾರೆಯಾಗಿದ್ದರು. ಅವರ ಸ್ಮರಣೀಯ ಚಿತ್ರಗಳಲ್ಲಿ "ಫೂಲ್ ಔರ್ ಪತ್ತರ್, ಅನುಪಮಾ, ಸೀತಾ ಔರ್ ಗೀತಾ ಮತ್ತು ಶೋಲೆ ಸೇರಿವೆ. ಪದ್ಮಭೂಷಣ ಪುರಸ್ಕೃತರಾದ ಧರ್ಮೇಂದ್ರ "ಘಯಾಲ್" ಮತ್ತು "ಯಮಲಾ ಪಗ್ಲಾ ದಿವಾನಾ 2" ಚಿತ್ರಗಳನ್ನೂ ನಿರ್ಮಿಸಿದ್ದಾರೆ.