ನವದೆಹಲಿ: ತಮಿಳು ಮತ್ತು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಜನಪ್ರಿಯ ನಟ ಮತ್ತು ಸಂಗೀತ ಸಂಯೋಜಕರಾಗಿರುವ ವಿನಾಯಕನ್ ಅವರು 'ಕಮ್ಮಟ್ಟಿಪಾದಂ' ಮತ್ತು 'ಈ' ಮಾ.ಯೌ ನಂತಹ ಚಿತ್ರಗಳಲ್ಲಿನ ನಟನೆಗಾಗಿ ಹೆಸರುವಾಸಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಅವರು ಇತ್ತೀಚಿಗೆ ಮಲಯಾಳಂನ 'ಒರುತಿ' ಸಿನಿಮಾ ಪ್ರಚಾರದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ಸುದ್ದಿಯಲ್ಲಿದ್ದಾರೆ.


ಇದನ್ನೂ ಓದಿ: 'ಚಲನಚಿತ್ರಗಳ ಪೋಸ್ಟರ್‌ಗಳನ್ನು ಹಾಕಲು ನೀವು ರಾಜಕೀಯಕ್ಕೆ ಬಂದಿದ್ದೀರಾ?'


ಮೀಟೂ ಚಳುವಳಿ ಕುರಿತಾಗಿ ಹೇಳಿಕೆ ನೀಡಿರುವ ಅವರು ಮೀ ಟೂ ಆಂದೋಲನ ಎಂದರೆ ಏನೆಂಬುದೇ ತನಗೆ ತಿಳಿದಿಲ್ಲ ಎಂದ ಅವರು,‘ಮಹಿಳೆಯರನ್ನು ಸೆಕ್ಸ್ ಗಾಗಿ ಕೇಳುವುದು ಮೀ ಟೂ ಆಗಿದ್ದರೆ, ಅದನ್ನೇ ಈಗ ಮತ್ತೆ ಮುಂದುವರೆಸುತ್ತೇನೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Whatsapp: ವಾಟ್ಸಾಪ್‌ನಲ್ಲಿ ಬರಲಿದೆ ಮನಮೋಹಕ ಫೀಚರ್!


'ಮೀ ಟೂ ಎಂದರೇನು? ನನಗೆ ಗೊತ್ತಿಲ್ಲ, ಇದು ಹುಡುಗಿಗೆ ಸಂಬಂಧಿಸಿದೆಯೇ, ಹಾಗಿದ್ದಲ್ಲಿ ನಾನು ಮಹಿಳೆಯೊಂದಿಗೆ ಸಂಭೋಗಿಸಲು ಬಯಸಿದರೆ ಏನು? ನನ್ನ ಜೀವನದಲ್ಲಿ, ದೈಹಿಕವಾಗಿ 10 ಹೆಂಗಸರ ಜೊತೆ ದೈಹಿಕ ಸಂಬಂಧವನ್ನು ಹೊಂದಿದ್ದೇನೆ" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ವಿಧಾನಸೌಧದ 3 ನೇ ಮಹಡಿಯಲ್ಲಿ ಮಂತ್ರಿಯೊಬ್ಬರು ಏನು ಮಾಡುತ್ತಿದ್ದರು ಎಂಬುದು ನಿಮಗೆ ಗೊತ್ತಿಲ್ಲವೇ?


ಈಗ ವಿನಾಯಕನ್ ಅವರ ಹೇಳಿಕೆಗೆ ಜನಪ್ರಿಯ ನಟ ಹರೀಶ್ ಪೆರಾಡಿ ಸೇರಿದಂತೆ ಮಲಯಾಳಂ ಚಿತ್ರರಂಗದ ಹಲವಾರು ಗಣ್ಯರು ಟೀಕಿಸಿದ್ದಾರೆ.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನವ್ಯಾ ನಾಯರ್ ಅವರು ಮೌನ ವಹಿಸಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು, ಆದರೆ ನಂತರ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು ಎಂದು ಇಂಡಿಯಾಗ್ಲಿಟ್ಜ್ ವರದಿ ಮಾಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.