Shurpanaki Cast In Ramayana: ಭಾರತದ ಚಿತ್ರರಂಗದಲ್ಲಿ 'ಆದಿಪುರುಷ್' ಸಿನಿಮಾದ ನಂತರ ಬಾಲಿವುಡ್ ಅಂಗಳದಲ್ಲಿ ಮತ್ತೆ ರಾಮಾಯಣ ಕಾವ್ಯ ಆಧರಿಸಿ ಚಿತ್ರ ಮಾಡುವ ಪ್ರಯತ್ನ ನಡೀತಿದ್ದು, ಬಹಳ ದೊಡ್ಡಮಟ್ಟದಲ್ಲಿ ನಿತೇಶ್ ತಿವಾರಿ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತಾದೇವಿಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸುತ್ತಾರೆ ಎನ್ನಲಾಗ್ತಿದ್ದು, ಆದರೆ ಅಧಿಕೃತವಾಗಿ ನಿತೇಶ್ ತಿವಾರಿ 'ರಾಮಾಯಣ' ಚಿತ್ರವನ್ನು ಘೋಷಣೆ ಮಾಡಿಲ್ಲ, ಹಾಗೆಯೇ ಯಾರೊಬ್ಬರು ಈ ಬಗ್ಗೆ ಏನೂ ಮಾತನಾಡುತ್ತಿಲ್ಲ.


COMMERCIAL BREAK
SCROLL TO CONTINUE READING

ರಾಮಾಯಣ ಸಿನಿಮಾದ ಬಗ್ಗೆ ದಿನಕ್ಕೊಂದು ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಾಯಿದ್ದು,ಇನ್ನು ವಿಭಿಷಣ, ಹನುಮಂತ ಹೀಗೆ ಒಂದೊಂದು ಪಾತ್ರಕ್ಕೆ ಒಬ್ಬೊಬ್ಬರ ಹೆಸರುಗಳು ಕೇಳಿಬರ್ತಿದೆ. ಇದೀಗ ರಾಮಾಯಣದಲ್ಲಿ ಇಡೀ ಕಥೆಗೆ ತಿರುವು ನೀಡುವ ರಾವಣನ ಸಹೋದರಿ ಶೂರ್ಪನಖಿಯ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಚರ್ಚೆ ಈಗ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ. ಇಡೀ ಕಥೆಯಲ್ಲಿ ಶೂರ್ಪನಖಿ ಪಾತ್ರ ಚಿಕ್ಕದಾದರೂ, ಆದರೆ ಆ ಪಾತ್ರಕ್ಕೆ ಬಹಳ ಮಹತ್ವ ಇದೆ. ಸದ್ಯ ಈ ಪಾತ್ರಕ್ಕಾಗಿ ರಕುಲ್ ಪ್ರೀತ್‌ಸಿಂಗ್ ಜೊತೆ ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. 


ಇದನ್ನೂ ಓದಿ: 100 ಸಿನಿಮಾಗಳಲ್ಲಿ ನಟಿಸಿದ್ದ ಈ ಸ್ಟಾರ್ ಹೀರೋಯಿನ್.. ಬೆಳ್ಳಿತೆರೆಯಿಂದ ದಿಢೀರ್ ಕಣ್ಮರೆಯಾಗಿದ್ಯಾಕೆ?


ಬಹುಭಾಷಾ ನಟಿ ರಕುಲ್‌ ಪ್ರಿತ್‌ಸಿಂಗ್ ಕನ್ನಡದ 'ಗಿಲ್ಲಿ' ಚಿತ್ರದಲ್ಲಿ ನಟಿಸುವ ಮೂಲಕ ಈ ದೆಹಲಿ ಬೆಡಗಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿ ಬಳಿಕ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ಸು ಪಡೆದರು. ಇತ್ತೀಚೆಗೆ ಆಕೆಯ ಕ್ರೇಜ್ ಕಮ್ಮಿ ಆಗಿದ್ದು, ಆದರೆ ನಟ ಜಾಕಿ ಬಗ್ನಾನಿ ಜೊತೆ ಡೇಟಿಂಗ್ ನಡೆಸುತ್ತಿರುವುದಾಗಿ ರಕುಲ್ ಹೇಳಿಕೊಂಡಿದ್ದಾರೆ.ಕೆಲವು ವರದಿಗಳ ಪ್ರಕಾರ ಶೂರ್ಪನಖಿ ಪಾತ್ರಕ್ಕಾಗಿ ಈಗಾಗಲೇ ರಕುಲ್ ಲುಕ್‌ ಟೆಸ್ಟ್ ಸಹ ನಡೆದಿದೆ ಎನ್ನಲಾಗ್ತಿದೆ. 


ರಾಮಾಯಣ ಚಿತ್ರವನ್ನು ಮೂರು ಭಾಗಗಳಾಗಿ  ತೆರೆಗೆ ಅಪ್ಪಳಿಸಲಿದೆ ಎನ್ನಲಾಗ್ತಿದ್ದು, ಮುಂದಿನ ವರ್ಷ ದೀಪಾವಳಿಗೆ ಪಾರ್ಟ್‌-1 ರಿಲೀಸ್ ಆಗುವ ನಿರೀಕ್ಷೆಯಿದೆ. ಇನ್ನು ಈ ಸಿನಿಮಾದಲ್ಲಿ ಕೈಕೆಯಿ ಪಾತ್ರಕ್ಕೆ ಲಾರಾ ದತ್ತಾ, ವಿಭಿಷಣ ಪಾತ್ರಕ್ಕೆ ವಿಜಯ್ ಸೇತುಪತಿ ಚರ್ಚೆ ನಡೆಸಿರುವುದಾಗಿ ಹೇಳಲಾಗಿತ್ತು. ಕಳೆದ ವರ್ಷ ಬಂದಿದ್ದ 'ಆದಿಪುರುಷ್' ಸಿನಿಮಾ ಭಾರೀ ವಿವಾದ ಸೃಷ್ಟಿಸಿ, ಟೀಕೆಗೆ ಗುರಿಯಾಗಿ ಟ್ರೋಲ್ ಆಗಿತ್ತು. ಇದೇ ಕಾರಣಕ್ಕೆ ಬಹಳ ಲೆಕ್ಕಾಚಾರವಾಗಿ ಈ ಬಾರಿ ನಿತೇಶ್ ತಿವಾರಿ ಚಿತ್ರ ಮಾಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ದೊಡ್ಡಮಟ್ಟದಲ್ಲಿ ಮಹಾಕಾವ್ಯವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. 
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.