ಕರಾವಳಿಯ ಯುವ ಪ್ರತಿಭೆ ಕನಸು ಕಂಗಳಿನ ನಟ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ತಮ್ಮ ನಿರ್ದೇಶನದ ಎರಡನೇ ಚಿತ್ರದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಕತ್ತಲೆ ಕೋಣೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಚಾಪು ಮೂಡಿಸಿದ್ದ ಸಂದೇಶ್ ಶೆಟ್ಟಿ ಈ ಬಾರಿ ವರ್ಣ ದ್ವೇಷದ ಕಥೆ ಇರುವ ಇನಾಮ್ದಾರ್ ಚಿತ್ರವನ್ನು ಶನಿ ರಸಿಕರ ಮುಂದಿಡಲಿದ್ದಾರೆ. ವಿಜಯದಶಮಿಯ ಪರ್ವಕಾಲದಲ್ಲಿ ಒಂದು ಉತ್ತಮ ಸಂದೇಶವಿರುವ ಚಿತ್ರ ಇನಾಮ್ದಾರ್ ಇದರ ವಿಶಿಷ್ಟವಾದ ಪೋಸ್ಟರ್ ನಿಮ್ಮ ಮುಂದಿದೆ.


ಇದನ್ನೂ ಓದಿ : ಶೀಘ್ರದಲ್ಲೇ ಭಾರತದಲ್ಲಿ 200 ರೈಲು ನಿಲ್ದಾಣಗಳಿಗೆ ವಿಶ್ವ ದರ್ಜೆಯ ಸೌಲಭ್ಯ


ಬಹುತೇಕ ಕರಾವಳಿ, ಮಲೆನಾಡಿನ ತಪ್ಪಲು, ಬಯಲು ಸೀಮೆಯಲ್ಲಿ ಚಿತ್ರಿಕರಣವಾಗಿರುವ ಇನಾಮ್ದಾರ್ ಚಿತ್ರ ಈ ಮೂರು ಭಾಗದ ಸೌಂದರ್ಯವನ್ನ ಕಣ್ಣಿಗೆ ಕಟ್ಟಿಕೊಡಲಿದೆ. ಬಯಲು ಸೀಮೆಯ ಗಟ್ಟಿತನದ ಕುಟುಂಬಕ್ಕೂ ಮಲೆನಾಡಿನ ತಪ್ಪಲಿನಲ್ಲಿರುವ ದಟ್ಟಡವಿಯ ಜನಾಂಗದ ನಡುವಿನ ಕಥಾ ವಸ್ತುವೇ ಈ ಚಿತ್ರದ ಜೀವಾಳ. ಕೆಟ್ಟದರ ನಡುವೆ ಒಳ್ಳೆಯತನ ಗೆಲುವು ಹೇಗೆ ಸಾಧಿಸುತ್ತದೆ ಎನ್ನುವ ಈ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ರಸಿಕರ ಮುಂದೆ ಬರಲಿದೆ.


ಇದನ್ನೂ ಓದಿ : ದುರ್ಗಾಪೂಜೆಯ ವೇಳೆ ರಾಕ್ಷಸನ ಸ್ಥಾನದಲ್ಲಿ ಕಂಡಿತು ಮಹಾತ್ಮಾ ಗಾಂಧಿ ಪ್ರತಿಕೃತಿ…!


ಬಹುತೇಕ ಬಯಲು ಸೀಮೆ, ಕರಾವಳಿ, ಪಶ್ಚಿಮ ಘಟ್ಟದ ತಪ್ಪಲಿನ ಸಂಸ್ಕೃತಿಯ ಪರಿಚಯ ಈ ಸಿನೆಮಾದ ಮೂಲಕ ಮಾಡುವ ಪ್ರಯತ್ನ ನಿರ್ದೇಶಕ ಸಂದೇಶ್ ಶೆಟ್ಟಿ ಮಾಡಿದ್ದಾರೆ.ಹಿರಿಯ ಮತ್ತು ಕಿರಿಯ ಕಲಾವಿದ ಸಮಾಗಮದಲ್ಲಿ ಸಿನೆಮಾ ಸಿದ್ಧವಾಗಿದ್ದು ಜನರ ಆರ್ಶೀವಾದ ಪಡೆಯಲು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಬರಲಿದೆ.


ಇಂದು ವಿಜಯ ದಶಮಿ...


ದುರ್ಗೆಯು ದುಷ್ಟ ದಾನವನ ಮಹಿಷಾಸುರನನ್ನು ವಧಿಸಿ ಲೋಕ ಕಲ್ಯಾಣ ಮಾಡಿದ ಪುಣ್ಯ ದಿನ.ಇಂದು ನಿಮ್ಮ ಮುಂದೆ ಇನಾಮ್ದಾರ್ ಚಿತ್ರದ ಮಹಿಷಾಸುರನ ಪರಿಚಯ ಈ ಪೋಸ್ಟರ್ ಮೂಲಕ ನಿಮ್ಮ ಮುಂದೆ...


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.