First Science Documentary in Sanskrit: ಮೊದಲ ಪ್ರಯತ್ನದಲ್ಲಿಯೇ ಮಂಗಳನ ಅಂಗಳಕ್ಕೆ ಯಾನವನ್ನು ತಲುಪಿಸುವ ಮೂಲಕ ತಾವು ಯಾರಿಗಿಂತಲೂ ಕೂಡ ಕಡಿಮೆ ಇಲ್ಲ ಎಂದು ಭಾರತದ ವಿಜ್ಞಾನಿಗಳು ಸಾಬೀತುಪಡಿಸಿರುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಮಾರ್ಸ್ ಆರ್ಬಿಟರ್ ಮಿಷನ್‌ನ ಯಶಸ್ಸು ಇಡೀ ವಿಶ್ವಕ್ಕೆ ಭಾರತದ ಸಾಮರ್ಥ್ಯ ಏನು ಎಂಬುದನ್ನು ತೋರಿಸಿಕೊಟ್ಟಿದೆ. ಆದರೆ, ಭಾರತದ ಈ ಅತ್ಯುತ್ತಮ ಇಂಜಿನಿಯರಿಂಗ್ ಮತ್ತು ಧೈರ್ಯದ ಕಥೆಯನ್ನು 'ಯಾನಂ'  ಎಂಬ ಹೆಸರಿನ ಒಂದು  ಸಂಸ್ಕೃತ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. 44 ನಿಮಿಷಗಳ ಈ ಸಾಕ್ಷ್ಯಚಿತ್ರದಲ್ಲಿ, ಮಂಗಳಯಾನವನ್ನು ಹೇಗೆ ತಯಾರಿಸಲಾಯಿತು ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ಈ ಮಿಷನ್‌ನಲ್ಲಿ ಮಾಡಿದ ಕೆಲಸಗಳೇನು ಎಂಬುದನ್ನು ನೀವು ನೋಡಬಹುದಾಗಿದೆ.


ಆಗಸ್ಟ್‌ 26ಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ಬಿಡುಗಡೆ


COMMERCIAL BREAK
SCROLL TO CONTINUE READING

ಸಂಸ್ಕೃತದಲ್ಲಿ ಮಾಡಿದ ಮೊದಲ ವಿಜ್ಞಾನ ಸಾಕ್ಷ್ಯಚಿತ್ರ
‘ಯಾನಂ’ ಎಂದು ಹೆಸರಿಸಲಾಗಿರುವ ಈ 44 ನಿಮಿಷಗಳ ಸಾಕ್ಷ್ಯಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ವಿನೋದ್ ಮನಕಾರಾ ನಿರ್ದೇಶಿಸಿದ್ದಾರೆ. 'ಯಾನಂ' ಭಾರತದ ಮೊದಲ ವಿಜ್ಞಾನದ ಸಾಕ್ಷ್ಯಚಿತ್ರದ ಸ್ಥಾನಮಾನವನ್ನು ಪಡೆದುಕೊಂಡಿದೆ, ಇದನ್ನು ಸಂಪೂರ್ಣವಾಗಿ ಸಂಸ್ಕೃತ ಭಾಷೆಯಲ್ಲಿ ನಿರ್ಮಿಸಲಾಗಿದೆ. ವಿನೋದ್ ಮಾನ್ಕರ್ ಅವರ ಪ್ರಕಾರ, ಈ ಸಾಕ್ಷ್ಯಚಿತ್ರವು ಡಾ. ಕೆ. ರಾಧಾಕೃಷ್ಣನ್ ಅವರ ಪುಸ್ತಕ 'ಮೈ ಒಡಿಸ್ಸಿ' ಅನ್ನು ಆಧರಿಸಿದೆ ಮತ್ತು ಇಸ್ರೋದ ಮಿಶನ್ ಮಂಗಳಯಾನ ಮತ್ತು ಅದರ ಅಭಿವೃದ್ಧಿ ಕಾರ್ಯಗಳ ಆರ್ಕೈವ್ ವೀಡಿಯೊ ರೂಪದಲ್ಲಿ ಇರಿಸಲಾಗುವುದು ಎನ್ನಲಾಗಿದೆ. ಸಂಸ್ಕೃತವು ಕೇವಲ ಭಕ್ತಿ ಮತ್ತು ಧರ್ಮಗ್ರಂಥಗಳಿಗೆ ಸಂಬಂಧಿಸಿದ ಭಾಷೆ ಎಂಬುದು ತಪ್ಪು ಕಲ್ಪನೆ ಎಂದು ಮನಕಾರಾ ಹೇಳಿದ್ದಾರೆ. ಈ ತಪ್ಪು ಕಲ್ಪನೆಯನ್ನು ಮುರಿಯಲು ನನ್ನ ಮೊದಲ ಸಂಸ್ಕೃತ ಚಿತ್ರ ‘ಪ್ರಿಯಮಾನಸಂ’ ಕೂಡ ಸಿದ್ಧಗೊಂಡಿದೆ ಎಂದು ಅವರು ಹೇಳಿದ್ದಾರೆ. ಸಂಸ್ಕೃತ ಭಾಷೆ ವಿಶಾಲ ವ್ಯಾಪ್ತಿಯನ್ನು ಹೊಂದಿದೆ ಮತ್ತು 'ಯಾನಂ' ನನ್ನ ಎರಡನೇ ಚಲನಚಿತ್ರ ಪ್ರಾಜೆಕ್ಟ್ ಆಗಿದ್ದು, ಇದನ್ನು ಸಂಸ್ಕೃತದಲ್ಲಿ ತಯಾರಿಸಲಾಗಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಜನಸಾಮಾನ್ಯರು ಹಾಗೂ ಕನಿಷ್ಠ ಅನುಭವ ಇರುವವರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಈ ಸಾಕ್ಷ್ಯಚಿತ್ರವನ್ನು ತಯಾರಿಸಲಾಗಿದೆ ಎಂದು ನಿರ್ದೇಶಕ ಮನಕಾರಾ ತಿಳಿಸಿದ್ದಾರೆ.


ವಿಚ್ಛೇದನದ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಪ್ರಿಯಾಮಣಿ..!


ವಿಜ್ಞಾನಿಗಳು ಸಂಸ್ಕೃತದಲ್ಲಿ ಮಾತನಾಡಿದ್ದಾರೆ
ಈ ಚಿತ್ರದಲ್ಲಿ  ಬಳಸಲಾಗಿರುವ ಕ್ಲಿಪ್ ಗಳಲ್ಲಿ ಇಸ್ರೋ ವಿಜ್ಞಾನಿಗಳು ಸಂಸ್ಕೃತದಲ್ಲಿ ಮಾತನಾಡಿ ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದ್ದಾರೆ ಎಂದು ‘ಯಾನಂ’ ತಂಡ ತಿಳಿಸಿದೆ. ಇಸ್ರೋ ಮಾಜಿ ಅಧ್ಯಕ್ಷ ಡಾ. ರಾಧಾಕೃಷ್ಣನ್ ಮತ್ತು ಆಗಿನ ಅಧ್ಯಕ್ಷ ಎಸ್ ಸೋಮನಾಥ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಇಸ್ರೋ ಹಾಗೂ ಅಧ್ಯಕ್ಷ ಎಸ್.ಸೋಮನಾಥ ಅವರಿಗೆ ವಿನೋದ್ ಮನಕಾರಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ.  ಈ ಸಂಸ್ಕೃತ ಭಾಷೆಯ ಸಾಕ್ಷ್ಯಚಿತ್ರದಲ್ಲಿ ಇಂಗ್ಲಿಷ್ ಉಪಶೀರ್ಷಿಕೆಗಳೂ ಇವೆ. ಈ ಸಾಕ್ಷಚಿತ್ರದ ಕುರಿತು ಮಾತನಾಡಿರುವ ಚಿತ್ರದ ನಿರ್ಮಾಪಕ ಡಾ.ಎ.ವಿ.ಅನೂಪ್, 'ಯಾನಂ' ಕೇವಲ ಮೂರೇ ತಿಂಗಳಲ್ಲಿ ತಮ್ಮ ತಂಡ ಪೂರ್ಣಗೊಳಿಸಿರುವ ಪ್ರಾಜೆಕ್ಟ್ ಆಗಿದ್ದು, ಆಗಸ್ಟ್ 21 ರ ಭಾನುವಾರದಂದು ಅದರ ಮೊದಲ ಪ್ರದರ್ಶನ ನಡೆಸಲಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.