ನವದೆಹಲಿ: ಕ್ರಿಕೆಟಿಗರು ಮತ್ತು ನಟಿಯರ ನಡುವಿನ ಸಂಬಂಧದ ವದಂತಿಗಳು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿರುತ್ತವೆ.ಈಗ ಅಂತಹ ಗಾಸಿಫ್ ಹೊಸದಾಗಿ ಸೇರ್ಪಡೆಯಾಗಿರುವುದು ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಮತ್ತು ಊರ್ವಶಿ ರೌತೆಲಾ ನಡುವಿನ ಸಮಾಚಾರ.


COMMERCIAL BREAK
SCROLL TO CONTINUE READING

ಅಷ್ಟಕ್ಕೂ ಈ ಸುದ್ದಿ ಏನಂತೀರಾ ? ಈ ಹಿಂದೆ ರಿಷಬ್ ಮತ್ತು ಊರ್ವಶಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಬಹಿರಂಗಗೊಳ್ಳುವ ಮೊದಲೇ ಈಗ ರಿಷಬ್ ಪಂತ್ ನಟಿಯನ್ನು ವಾಟ್ಸಪ್ ನಲ್ಲಿ ಬ್ಲಾಕ್ ಮಾಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.


ಊರ್ವಶಿ ನಿರಂತರವಾಗಿ ರಿಷಭ್ ಜೊತೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದ್ದರು, ಆದರೆ ಕ್ರಿಕೆಟಿಗ ನಟಿಯೊಂದಿಗಿನ ಸಂಬಂಧವನ್ನು ಮುಂದುವರೆಸಲು ಇಷ್ಟಪಡುತ್ತಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈಗ ಅವರು ವಾಟ್ಸಪ್ ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಕ್ರಿಕೆಟರ್ ಗೆ ಹತ್ತಿರವಿರುವರು ತಿಳಿಸಿದ್ದಾರೆ ಎನ್ನಲಾಗಿದೆ.ಆದಾಗ್ಯೂ, ವರದಿಗಳ ಪ್ರಕಾರ ಬ್ಲಾಕ್ ಮಾಡಿಕೊಂಡಿರುವುದು ಪರಸ್ಪರ ಒಪ್ಪಿತ ಎನ್ನುತ್ತಾರೆ ಊರ್ವಶಿ ಕಡೆಯವರು.


ಯುವ ಆಟಗಾರ ರಿಷಬ್ ಪಂತ್ ನೂತನ ವರ್ಷಕ್ಕೂ ಮುನ್ನ ತನ್ನ ಗೆಳತಿ ಇಷಾ ನೇಗಿ ಜೊತೆಗಿನ ಪೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಬಾಲಿವುಡ್ ನಟಿ ಊರ್ವಶಿ ಅವರ ಹೆಸರನ್ನು ಕ್ರಿಕೆಟಿಗನೊಂದಿಗೆ ತಳುಕು ಹಾಕುತ್ತಿರುವುದು ಇದೇ ಮೊದಲಲ್ಲ.2018 ರಲ್ಲಿ, ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಹೊಸ ಸಂಬಂಧವು ಖಾಸಗಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ವರದಿಯಾಗಿದೆ. ಆದರೆ ಹಾರ್ದಿಕ್  ಪಾಂಡ್ಯ ಊರ್ವಶಿಯಿಂದ ದೂರವನ್ನು ಕಾಯ್ದುಕೊಳ್ಳಲು ಪ್ರಾರಂಭಿಸಿದನೆಂದು ವರದಿಗಳು ಬಂದಿದ್ದರಿಂದ ವದಂತಿಗಳನ್ನು ನಂತರ ನಿಲ್ಲಿಸಲಾಯಿತು.