Naseeruddin Shah On Indian Films - ಭಾರತೀಯ ಚಿತ್ರರಂಗ (Indian Film Industry) ಇಸ್ಲಾಮೋಫೋಬಿಯಾದಿಂದ (Islamophobia) ಬಳಲುತ್ತಿದೆ ಎಂದು ಖ್ಯಾತ ಹಿರಿಯ ಬಾಲಿವುಡ್ ನಟ ನಸೀರುದ್ದೀನ್ ಶಾಹ್ (Naseeruddin Shah) ಹೇಳಿದ್ದಾರೆ. ಇದು ಮಾತ್ರವಲ್ಲ, ಚಲನಚಿತ್ರ ನಿರ್ಮಾಪಕರನ್ನು ಸರ್ಕಾರವು (Government Of India) ಇಂತಹ ಸಿನಿಮಾ ನಿರ್ಮಿಸಲು ಪ್ರೋತ್ಸಾಹಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಇದರೊಂದಿಗೆ, ತಾಲಿಬಾನ್ (Taliban) ವಾಪಸಾತಿ ನಂತರ  ಭಾರತದಲ್ಲಿನ ಕೆಲ ಮುಸ್ಲಿಮರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ ಎಬ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.  ಚಿತ್ರರಂಗದಲ್ಲಿ ಅವರ ಮೇಲೆ  ತಾರತಮ್ಯ ಎಸಗಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಚಿತ್ರರಂಗದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಯಾವುದೇ ತಾರತಮ್ಯವಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನಮ್ಮ ಕೊಡುಗೆ ಮುಖ್ಯ ಎಂದು ನಾನು ನಂಬುತ್ತೇನೆ. ಈ ಉದ್ಯಮದಲ್ಲಿ ಹಣವೇ ದೇವರು' ಎಂದಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ನಸೀರುದ್ದೀನ್ ಶಾಹ್, 'ನೀವು ಇಲ್ಲಿ ಹೆಚ್ಚು ಹಣವನ್ನು ಗಳಿಸುತ್ತೀರಿ, ನೀವು ಹೆಚ್ಚು ಗೌರವವನ್ನು ಪಡೆಯುತ್ತೀರಿ. ಇಂದಿಗೂ, ಉದ್ಯಮದಲ್ಲಿ  ಮೂವರು ಖಾನ್ ಗಳು ಅಗ್ರಸ್ಥಾನದಲ್ಲಿದ್ದಾರೆ. ಅವರಿಗೆ ಸಾಟಿ ಇಲ್ಲ ಮತ್ತು ಅವರು ಇಂದಿಗೂ ಕೂಡ ಫಲಿತಾಂಶಗಳು ನೀಡುತಿದ್ದಾರೆ.  ನಾನು ವೈಯಕ್ತಿಕವಾಗಿ  ಯಾವತ್ತೂ ತಾರತಮ್ಯವನ್ನು ಅನುಭವಿಸಿಲ್ಲ. ನನ್ನ ವೃತ್ತಿಜೀವನದ ಆರಂಭದಲ್ಲಿ ನನಗೆ ಹೆಸರನ್ನು ಸೂಚಿಸಲಾಗಿತ್ತು, ಆದರೆ ನಾನು ನನ್ನ ಹೆಸರನ್ನು ಉಳಿಸಿಕೊಂಡೆ. ಇದು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ಉದ್ಯಮದ ಹೊರಗೆ ತಾರತಮ್ಯವಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.


ಇದನ್ನೂ ಓದಿ-55ನೇ ಚಿತ್ರದಲ್ಲಿ ‘ಕ್ರಾಂತಿ’ ಮಾಡಲು ಸಜ್ಜಾದ ಚಾಲೆಂಜಿಗ್ ಸ್ಟಾರ್ ದರ್ಶನ್..!


'ನನಗೆ ಪಾಕಿಸ್ತಾನದ ಟಿಕೆಟ್ ಕೂಡ ಕಳುಹಿಸಲಾಗಿದೆ'
ಮುಸ್ಲಿಂ ನಾಯಕರು, ಯೂನಿಯನ್ ಸದಸ್ಯರು ಮತ್ತು ವಿದ್ಯಾರ್ಥಿಗಳು ಸಾಮಾನ್ಯ ಹೇಳಿಕೆಯನ್ನು ನೀಡಿದಾಗ, ಆವರನ್ನು ವಿರೋಧಿಸಲಾಗುತ್ತದೆ. ಇನ್ನೊಂದೆಡೆ, ಮುಸ್ಲಿಂ ಸಮುದಾಯದ ವಿರುದ್ಧ ಹಿಂಸಾತ್ಮಕ ಹೇಳಿಕೆಗಳನ್ನು ನೀಡಿದಾಗ, ಅದರ ವಿರುದ್ಧ ಧ್ವನಿ ಕೇಳುವುದಿಲ್ಲ. ಇದಷ್ಟೇ ಅಲ್ಲ, ನನಗೆ ಮುಂಬೈ-ಕೊಲಂಬೊ ಮತ್ತು ಕೊಲಂಬೊ ಟು ಕರಾಚಿ ಟಿಕೆಟ್ ಕೂಡ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.  “ತನ್ನ ಕಲ್ಪನೆಯನ್ನು ಬೆಂಬಲಿಸುವ ಚಲನಚಿತ್ರಗಳನ್ನು ಮಾಡಲು ಸರ್ಕಾರವು ಚಲನಚಿತ್ರೋದ್ಯಮವನ್ನು ಇಂದು ಪ್ರೋತ್ಸಾಹಿಸುತ್ತಿದೆ. ಸರ್ಕಾರದ ಪ್ರಯತ್ನಗಳನ್ನು ಮೆಚ್ಚಿ ಚಲನಚಿತ್ರಗಳನ್ನು ಮಾಡಲಾಗಿದೆ. ಅವರು ಪ್ರಚಾರದ ಚಿತ್ರಗಳನ್ನು (Propaganda Film) ಮಾಡಿದರೆ ಅವರಿಗೆ ಫಂಡಿಂಗ್ ನೀಡಲಾಗುತ್ತದೆ ಮತ್ತು ಕ್ಲೀನ್ ಚಿಟ್ ಭರವಸೆ ಕೂಡ ನೀಡಲಾಗುತ್ತದೆ' ಎಂದು ಶಾಹ್ ಹೇಳಿದ್ದಾರೆ.


ಇದನ್ನೂ ಓದಿ-'ಉದಯ್ ಚೋಪ್ರಾ ಮತ್ತು ನಾನು 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇವೆ'


ಇದಕ್ಕೆ ಯಾವುದೇ ನಿಖರ ಆಧಾರಗಳಿಲ್ಲ ಆದರೆ, ಚಿತ್ರ ವಿಕ್ಷೀಸಿ ಪ್ರೊಪಗಾಂಡಾ ನಡೆಯುತ್ತಿದೆ ಎಂಬುದನ್ನು ತಿಳಿದುಬರುತ್ತಿದೆ
ಇಂತಹ ಕೆಲಸವನ್ನು ನಾಜಿ ಜರ್ಮನಿಗೆ ಹೋಲಿಸಿರುವ ನಾಸಿರುದ್ದೀನ್ ಷಾ ಅಲ್ಲಿಯೂ ಅದೇ ನಡೆಯುತ್ತಿತ್ತು ಎಂದು ಹೇಳಿದ್ದಾರೆ. ನಾಜಿ ಜರ್ಮನಿಯ ಯುಗದಲ್ಲಿ, ಪ್ರಪಂಚವನ್ನು ಅರ್ಥಮಾಡಿಕೊಂಡ ಚಲನಚಿತ್ರ ನಿರ್ಮಾಪಕರು ಸುತ್ತುವರೆಯಲಾಗಿತ್ತು ಮತ್ತು ನಾಜಿ ಸಿದ್ಧಾಂತವನ್ನು ಪ್ರಚಾರ ಮಾಡುವ ಚಲನಚಿತ್ರಗಳನ್ನು ಮಾಡಲು ಹೇಳಲಾಗುತ್ತಿತ್ತು ಎಂದು ನಾಸಿರುದ್ದೀನ್ ಶಾ ಹೇಳಿದ್ದರು. ಇದಕ್ಕೆ ನನ್ನ ಬಳಿ ದೃಢವಾದ  ಪುರಾವೆಗಳಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಮುಂಬರುವ ದೊಡ್ಡ ಬಜೆಟ್ ಚಿತ್ರಗಳಿಂದ ಇದು ಸ್ಪಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Sara Ali Khans Backless Ewimsuit Photo : ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ ಬಾಲಿವುಡ್ ನಟಿ ಸಾರಾ ಅಲಿ ಖಾನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.