Sara Arjun : ಸ್ಟಾರ್‌ ನಟರನ್ನು ಮೀರಿಸುವ ಸಂಭಾವನೆಯನ್ನು ಇಂದು ಬಾಲನಟ- ನಟಿಯರು ಪಡೆಯುತ್ತಿದ್ದಾರೆ. ಎಲ್ಲರಿಗೂ ಭಾರತೀಯ ಸಿನಿರಂಗದ ಶ್ರೀಮಂತ ನಟ ಯಾರು ಅಂತ ಕೇಳಿದ್ರೆ ಶಾರುಖ್‌ ಖಾನ್‌ನತ್ತ ಬೆರಳುಮಾಡಿ ತೋರಿಸುತ್ತಾರೆ. ಹಾಗಿದ್ರೆ ಭಾರತೀಯ ಸಿನಿರಂಗದ ಶ್ರೀಮಂತ ಬಾಲ ಕಲಾವಿದರು ಯಾರಿರಬಹುದು..? ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಹೌದು.. ನಟಿ ಸಾರಾ ಅರ್ಜುನ್ 2011 ರಲ್ಲಿ ʼದೈವತಿರುಮಾಲ್‌ʼ ಎಂಬ ತಮಿಳು ಸಿನಿಮಾದ ಮೂಲಕ ನಟನಾವೃತ್ತಿಗೆ ಪಾದಾರ್ಪಣೆ ಮಾಡಿದರು. ನಂತರ ಅದೇ ನಿರ್ದೇಶಕರ ‘ಸೈವಂ’ ಚಿತ್ರದಲ್ಲಿ ಮಗುವಿನ ಪಾತ್ರವನ್ನೂ ಕಾಣಿಸಿಕೊಂಡು ಸಿನಿರಸಿಕರಿಗೆ ಪರಿಚಯವಾದರು. ಅರೇ ಶ್ರೀಮಂತ ಕಲಾವಿದೆ ಅಂತ ಹೇಳಿ ಇವರ ಬಗ್ಗೆ ಯಾಕೆ ಮಾತಾಡ್ತೀದಿನಿ ಅಂದಿಕೊಂಡ್ರಾ.. ಮುಂದೆ ಓದಿ ಎಲ್ಲಾ ನಿಮ್ಗೆ ಅರ್ಥವಾಗುತ್ತದೆ.


ಇದನ್ನೂ ಓದಿ: ಭಾರತದ ಫೈನಲ್ ಪಂದ್ಯ ನೋಡಬೇಡಿ: ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಸಲಹೆ


ಸಾರಾ ಖ್ಯಾತ ತಮಿಳು ನಟ ರಾಜ್ ಅರ್ಜುನ್ ಅವರ ಪುತ್ರಿ. ಅವರ ತಾಯಿ ಕೂಡ ಭರತನಾಟ್ಯ ಕಲಾವಿದೆ. ತನ್ನ ತಂದೆಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಬಾಲನಟಿ ಇದೀಗ ಹಿರೋಯಿನ್‌ ಆಗಿ ಸಿನಿಮಾದಲ್ಲಿ ಮಿಂಚುತ್ತಿದ್ದಾಳೆ. ಅಲ್ಲದೆ, ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ "ಪೊನ್ನಿಯಿನ್ ಸೆಲ್ವನ್" ಚಿತ್ರದ ಎರಡು ಭಾಗಗಳಲ್ಲಿ ಯುವ ನಂದಿನಿಯಾಗಿ ನಟಿಸುವ ಮೂಲಕ ಭಾರತೀಯ ಸಿನಿರಸಿಕರಿಗೆ ಪರಿಚಯವಾದರು. ಪೊನ್ನಿಯನ್‌ ಸೆಲ್ವನ್‌ ಬಾಕ್ಸ್ ಆಫೀಸ್ನಲ್ಲಿ 800 ಕೋಟಿ ರೂ. ಗಳಿಸಿದೆ. 2005 ರಲ್ಲಿ ಜನಿಸಿದ ಸಾರಾಗೆ ಈಗ 18 ವರ್ಷ ವಯಸ್ಸು.


ಇಷ್ಟೇಲ್ಲಾ ಸಾಧನೆ ಮಾಡಿರುವ ಸಾರಾ ಅರ್ಜುನ್ 2023 ರ ಹೊತ್ತಿಗೆ 10 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ಬಾಲನಟಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಹೀಗಾಗಿ 10 ವರ್ಷಗಳಲ್ಲಿ ಸಾರಾ ಅವರ ಆಸ್ತಿ ಮೌಲ್ಯ ಜೆಟ್ ವೇಗದಲ್ಲಿ ಏರಿಕೆಯಾಗಿದೆ. ಶಾಲೆಯಲ್ಲಿ ಓದುತ್ತಿರುವಾಗಲೇ ಕೋಟಿಗಟ್ಟಲೆ ಸಂಪಾದನೆ ಮಾಡಿರುವ ಸಾರಾ ಸದ್ಯದಲ್ಲೇ ನಾಯಕಿಯಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದ್ದಾರೆ. ಇವಾಗ ನಿಮ್ಗೆ ನಾನು ಏಕೆ ಸಾರಾ ಬಗ್ಗೆ ಹೇಳಿದೆ ಅಂತ ಅರ್ಥವಾಗಿರಬೇಕು ಅಲ್ವಾ..?


ಇದನ್ನೂ ಓದಿ:ಲಿಯೋ OTT ರಿಲೀಸ್ ಡೇಟ್ ಫಿಕ್ಸ್..! ಮುಂದಿನ ವಾರದಿಂದಲೇ ಸ್ಟ್ರೀಮಿಂಗ್


ಯಸ್‌.. ಭಾರತೀಯ ಶ್ರೀಮಂತ ಕಾಲಾವಿದೆ ಸಾರಾ, ಸದ್ಯ ಎಎಲ್ ವಿಜಯ್ ನಿರ್ದೇಶನದ ಸಿನಿಮಾದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಅಲ್ಲದೆ, ನಟ ವಿಜಯ್ ಅವರೊಂದಿಗೆ ಮಹಿಳಾ ನಾಯಕಿಯಾಗಿ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳೂ ಇವೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ. ಅದರ ಹೊರತಾಗಿ 18 ವರ್ಷ ತುಂಬಿರುವ ಸಾರಾ ಅರ್ಜುನ್ ತನಗಿಂದ 16 ವರ್ಷ ಹಿರಿಯ ನಟನ ಎದುರು ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ವರದಿಗಳಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.