Hanste Aansoo: ಇಂದಿನ ಕಾಲಘಟ್ಟದಲ್ಲಿ ಅನಿಮಲ್‌ನಂತಹ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೇಟ್ ನೀಡುವುದು ಸಿಬಿಎಫ್‌ಸಿ ಪ್ರಮಾಣೀಕರಣ ಸಾಮಾನ್ಯ ಸಂಗತಿಯಾಗಿದೆ. 1950 ರ ದಶಕದಲ್ಲಿ, ಎ ಪ್ರಮಾಣಪತ್ರವನ್ನು ಪಡೆದ ಚಲನಚಿತ್ರಗಳನ್ನು ವಿಭಿನ್ನವಾಗಿ ವೀಕ್ಷಿಸಲಾಯಿತು. ಹಾಗಾದ್ರೆ ಇದೀಗ ಭಾರತದ ಮೊದಲ ವಯಸ್ಕ ಚಿತ್ರ ಯಾವುದು ಎಂದು ತಿಳಿಯೋಣ.. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಅನ್ಯಧರ್ಮಿಯ ಆಗಿದ್ದರೂ ತಾಯಿಗಾಗಿ ಸಾಯಿ ಬಾಬಾ ಮಂದಿರ ಕಟ್ಟಿದ ನಟ ವಿಜಯ್‌..! 


ಆ ಸಮಯದಲ್ಲಿ ವಯಸ್ಕ ಪದಕ್ಕೆ ಸೆನ್ಸಾರ್ ಮಂಡಳಿಯಿಂದ ಪ್ರತ್ಯೇಕ ಮಾನದಂಡದ ಕಾರ್ಯವಿಧಾನವಿತ್ತು. CBFC ನಿಂದ A ಪ್ರಮಾಣಪತ್ರವನ್ನು ಪಡೆದ ಭಾರತದ ಮೊದಲ ವಯಸ್ಕ ಚಲನಚಿತ್ರದ ಬಗ್ಗೆ ಮಾತನಾಡುವುದಾದರೇ.. ಆ ಚಿತ್ರ Hanste Aansoo... ಇದು ಕೆಬಿ ಲಾಲ್ ನಿರ್ದೇಶನದಲ್ಲಿ 1950 ರಲ್ಲಿ ಬಿಡುಗಡೆಯಾಯಿತು. ಮಧುಬಾಲಾ, ಮೋತಿಲಾಲ್, ಗೋಪ್ ಮತ್ತು ಮನೋರಮಾ ಮುಂತಾದ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆ ಮತ್ತು ಶೀರ್ಷಿಕೆಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ವಾಸ್ತವವಾಗಿ, Hanste Aansoo ಚಿತ್ರವು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಶೀರ್ಷಿಕೆ ಮತ್ತು ವಿಷಯದ ಡಬಲ್ ಮೀನಿಂಗ್ ಅನ್ನು ಉಲ್ಲೇಖಿಸಿ ಸೆನ್ಸಾರ್ ಮಂಡಳಿಯು ಎ ಪ್ರಮಾಣಪತ್ರವನ್ನು ನೀಡಿದೆ.


ಇದನ್ನೂ ಓದಿ-Lakshmi Nivasa Serial: ಲಕ್ಷ್ಮೀ ನಿವಾಸ "ಸಿದ್ದೇಗೌಡ್ರು" ತಾಯಿ ಕೂಡ ಖ್ಯಾತ ನಟಿ.. ಮಗನೊಂದಿಗೆ ಒಂದೇ ಸಿರೀಯಲ್‌ನಲ್ಲಿ ನಟಿಸುತ್ತಿರುವ ಕಲಾವಿದೆ ಯಾರು ಗೊತ್ತಾ?


ಎ ಪ್ರಮಾಣಪತ್ರ ನೀಡಿದ್ದಕ್ಕಾಗಿ ಸಿಬಿಎಫ್‌ಸಿ ತೀವ್ರ ಟೀಕೆಗೆ ಗುರಿಯಾಗಿತ್ತು. ಇದರಿಂದಾಗಿ 'Hanste Aansoo' ಬಾಲಿವುಡ್‌ನ ಮೊದಲ ವಯಸ್ಕ ಚಿತ್ರವಾಯಿತು. ಚಿತ್ರವು ಮಹಿಳಾ ಕೇಂದ್ರಿತ ಕಥೆಯನ್ನು ಆಧರಿಸಿದೆ. ಆ ಕಾಲದ ಸಮಾಜದಲ್ಲಿ ಪುರುಷ ಪ್ರಾಬಲ್ಯ ಮತ್ತು ಮಹಿಳೆಯರ ಹಕ್ಕುಗಳ ಹೋರಾಟವನ್ನು ಚಿತ್ರ ಬಿಂಬಿಸಿತ್ತು. ಮಧುಬಾಲಾ ಅವರು ಕೇವಲ 17 ವರ್ಷದವರಾಗಿದ್ದಾಗ ಚಿತ್ರದಲ್ಲಿ ಉಷಾ ಪಾತ್ರವನ್ನು ನಿರ್ವಹಿಸಿದ್ದಾರೆ. 
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.