Aishwarya Rai: ಒಂದಾನೊಂದು ಕಾಲದಲ್ಲಿ ಭಾರತೀಯ ಸಿನಿಮಾ ನಿರ್ದೇಶಕರು ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಗ್ಲಾಮರ್ ಶೋಗೆ ಮಾತ್ರ ನಾಯಕಿಯರನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಈ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಈಗ ಅನೇಕ ನಾಯಕಿಯರಿಗೆ ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಅತ್ಯುತ್ತಮ ನಟನೆಯಿಂದ ನಾಯಕರಿಗೆ ಸರಿಸಮನಾದ ಅಥವಾ ಅದಕ್ಕಿಂತ ಹೆಚ್ಚಿನ ಕ್ರೇಜ್ ಪಡೆಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೊಹ್ಲಿಗೆ ಸೌತ್‌ʼನ ಈ ನಟನೆಂದರೆ ಹುಚ್ಚು ಅಭಿಮಾನ! ಇವರ ಸಿನಿಮಾದ ಹಾಡು ಕೇಳಿದ್ರೆ ಸಾಕು...


ಕೆಲವು ನಾಯಕಿಯರು ಸಂಭಾವನೆ ವಿಚಾರದಲ್ಲಿ ನಾಯಕರನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಅದರಲ್ಲೂ ಪ್ರತಿಷ್ಟಿತ ಸಿನಿಮಾ ಕುಟುಂಬ ಸೊಸೆ ಎನಿಸಿಕೊಂಡ ಜನಪ್ರಿಯ ನಾಯಕಿ ಪತಿಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ಬಾಲಿವುಡ್ ಸ್ಟಾರ್ ಹೀರೋಯಿನ್ ಐಶ್ವರ್ಯಾ ರೈ.


ವಿಶ್ವ ಸುಂದರಿ-1994 ಪ್ರಶಸ್ತಿ ವಿಜೇತ ಐಶ್ವರ್ಯಾ ರೈ ಪ್ರಸ್ತುತ ಭಾರತದ ಶ್ರೀಮಂತ ನಟಿ. ಆಕೆಯ ನಿವ್ವಳ ಮೌಲ್ಯ ರೂ.862 ಕೋಟಿ ಎಂದು ವರದಿಗಳು ಹೇಳುತ್ತವೆ. ಆಸ್ತಿಯ ವಿಷಯದಲ್ಲಿ ಭಾರತದ ಇತರ ಜನಪ್ರಿಯ ನಾಯಕಿಯರಿಗಿಂತ ಬಹಳ ಮುಂದಿದ್ದಾರೆ ಈ ನಟಿ.


ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಕತ್ರಿನಾ ಕೈಫ್, ನಯನತಾರಾ ಕೂಡ ಶ್ರೀಮಂತ ನಟಿಯರ ಪಟ್ಟಿಯಲ್ಲಿದ್ದಾರೆ. ಆದರೆ ಐಶ್ವರ್ಯಾ ರೈ ಅವರೆಲ್ಲರಿಗಿಂತ ಹೆಚ್ಚು ಸಂಪಾದಿಸಿದ್ದಾರೆ.


ಐಶ್ವರ್ಯಾ ರೈ ಬಾಲಿವುಡ್, ಕಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಕೋಟಿ ರೂ. ಆಸ್ತಿ ಮಾಡಿದ್ದಾರೆ. ಇದಲ್ಲದೆ ಅಂತರಾಷ್ಟ್ರೀಯ ಬ್ರಾಂಡ್ ಡೀಲ್ʼಗಳ ಮೂಲಕ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ.


ಇದನ್ನೂ ಓದಿ: ಒಂದೇ ವರ್ಷದಲ್ಲಿ 14 ಹಿಟ್‌ ಸಿನಿಮಾ! ಅಮಿತಾಬ್‌ʼಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ಸ್ಟಾರ್


ಅಂದಹಾಗೆ ಐಶ್ವರ್ಯಾ ತನ್ನ ಪತಿ, ಬಾಲಿವುಡ್ ನಟ ಅಭಿಷೇಕ್ ಬಚ್ಚನ್‌ʼಗಿಂತ ಮೂರು ಪಟ್ಟು ಹೆಚ್ಚು ಆಸ್ತಿ ಹೊಂದಿದ್ದಾರಂತೆ. ಅಭಿಷೇಕ್ ಬಳಿ ರೂ. 280 ಕೋಟಿ ಆಸ್ತಿಇದೆ ಅಂದಾಜಿಸಲಾಗಿದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ