`ಟೇಕ್ವಾಂಡೋ ಗರ್ಲ್ ` ಚಿತ್ರದ ಟ್ರೇಲರ್ ರಿಲೀಸ್..ಚಿತ್ರತಂಡಕ್ಕೆ ಸಾಥ್ ನೀಡಿದ ಇಂದ್ರಜಿತ್ ಲಂಕೇಶ್
Taekwondo Girl: ಇವತ್ತಿನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ ಇದಕೆಲ್ಲ ಕಡಿವಾಣ ಹಾಕುವುದು ಬಹಳ ಅಗತ್ಯ. ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಬೇಕು. ಕರಾಟೆ , ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳುವಂತಹ ಟೇಕ್ವಾಂಡೋ ಸಮರ ಕಲೆಯನ್ನ ಮಕ್ಕಳು ಕಲಿಯಬೇಕಾಗಿರುವುದು ಅನಿವಾರ್ಯವಾಗಿದೆ.
Taekwondo Girl: ಇವತ್ತಿನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ ಇದಕೆಲ್ಲ ಕಡಿವಾಣ ಹಾಕುವುದು ಬಹಳ ಅಗತ್ಯ. ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಬೇಕು. ಕರಾಟೆ , ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳುವಂತಹ ಟೇಕ್ವಾಂಡೋ ಸಮರ ಕಲೆಯನ್ನ ಮಕ್ಕಳು ಕಲಿಯಬೇಕಾಗಿರುವುದು ಅನಿವಾರ್ಯವಾಗಿದೆ. ಇದರಿಂದ ಹೆಣ್ಣು ಮಕ್ಕಳು ತಮ್ಮನ ತಾವು ರಕ್ಷಿಸಿಕೊಳ್ಳುವುದಕ್ಕೆ ಒಂದು ದಾರಿ ಆಗುತ್ತದೆ. ಅಂತದ್ದೇ ಒಂದು ಸಮರಭ್ಯಾಸ ಕಲೆಯ ಚಿತ್ರವಾದ "ಟೇಕ್ವಾಂಡೋ ಗರ್ಲ್" ಎಂಬ ಚಿತ್ರ ಇದೇ ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ಹಾಡು ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಕಲಾವಿದರ ಭವನದಲ್ಲಿ ಆಯೋಜಿಸಿದ್ದು, ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಟೀಸರ್ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಶ್ರಮ ಪಟ್ಟು ಇದನ್ನು ಮಾಡಿರುವ ಋತುಸ್ಪರ್ಶಗೆ ಉಜ್ವಲ ಭವಿಷ್ಯವಿದೆ. ಸೆಲ್ಫ ಡಿಫೆನ್ಸ್ ಮೂಲಕ ತಮ್ಮನ್ನು ರಕ್ಷಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದುಕಲು ಸಾಧ್ಯ. ಇಂತಹ ಕಥೆಯನ್ನು ಅವಲಂಭಿಸಿದ ಚಿತ್ರಗಳು ಹೆಚ್ಚಾಗಿ ಬರಬೇಕು.
ನಟಿ ರೂಪಿಕಾ ಮಾತನಾಡುತ್ತಾ ಈ ಕಾರ್ಯಕ್ರಮಕ್ಕೆ ಬರಲು ಕಾರಣ ಚಿತ್ರದ ಟೀಸರ್ ಹಾಗೂ ಹಾಡುಗಳು. ಯಾಕಂದರೆ ಬೇಬಿ ಋತುಸ್ಪರ್ಶ ಬಹಳ ಸೊಗಸಾಗಿ ಅಭಿನಯಿಸಿದ್ದಾಳೆ. ನಾನು ಕೂಡ ಚಿತ್ರಂಗಕ್ಕೆ ಬಾಲ ನಟಿಯಾಗಿ ಬಂದಿದ್ದು , ಅದರ ಹಿಂದಿನ ಶ್ರಮ ಎಷ್ಟಿದೆ ಎನ್ನುವುದು ನನಗೆ ತಿಳಿದಿದೆ. ಹೆಣ್ಣು ಮಕ್ಕಳ ಸ್ವಯಂ ರಕ್ಷಣೆ ಬಹಳ ಅಗತ್ಯ. ಈ ಒಂದು ಕಲೆ ಬಗ್ಗೆ ಪಠ್ಯಪುಸ್ತಕ ಆಗುವುದು ಬಹಳ ಮುಖ್ಯ. ಇಡೀ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ನಟ ಗಣೇಶ್ ರಾವ್ ನಡೆಸಿಕೊಟ್ಟಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿರ್ದೇಶಕ ಕೆ . ಪುರುಷೋತ್ತಮ್ , ಚಿತ್ತಾರ ಪತ್ರಿಕೆಯ ಶಿವಕುಮಾರ್ , ಕೆ ಎಂ ಡಬ್ಲ್ಯೂ ಅಧ್ಯಕ್ಷ ಮನೋಜ್ ಕುಮಾರ್ , ಬೇಬಿ ಋತುಸ್ಪರ್ಶ ಶಾಲೆಯ ಪ್ರಿನ್ಸಿಪಲ್ ಮಂಜುಳಾ, ಟೇಕ್ವಾಂಡೋ ತರಬೇತಿದಾರ ವಿ. ರವಿ ಹಾಗೂ ಅನೇಕರು ಆಗಮಿಸಿ ಚಿತ್ರ ತಂಡಕ್ಕೆ ಶುಭವನ್ನು ಹಾರೈಸಿದರು.
ಇನ್ನೂ ನಂತರ ಮಾತನಾಡಿದ ಚಿತ್ರದ ನಿರ್ದೇಶಕ ರವೀಂದ್ರ ವಂಶಿ ಸದ್ಯ ಈ ದಿನ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸವಾಲುಗಳೇನು ಎನ್ನುವುದು ಎಲ್ಲರಿಗೂ ತಿಳಿದಿದೆ. ದೊಡ್ಡ ಸ್ಟಾರ್ ಚಿತ್ರಗಳ ನಡುವೆ ನಮ್ಮ ಸಿನಿಮಾ ಬರುತ್ತಿದ್ದು, ನಮ್ಮ ಸಿನಿಮಾವನ್ನು ಕೂಡ ಜನರು ಪ್ರೋತ್ಸಾಹಿಸಬೇಕು ಎಂದಿದ್ದಾರೆ.
ಇನ್ನು ಈ ಚಿತ್ರದ ನಿರ್ಮಾಪಕಿ ಡಾ. ಸುಮೀತಾ ಪ್ರವೀಣ್ ಮಾತನಾಡಿ ನನ್ನ ಮಗಳು ಬೇಬಿ ಋತು ಸ್ಪರ್ಶ ಸಾಮರ್ಥ್ಯವನ್ನು ಗಮನಿಸಿ ಈ ಚಿತ್ರವನ್ನ ಮಾಡಿದೇನೆ. ಇದು ಮಗಳಿಗಷ್ಟೇ ಸೀಮಿತವಾಗಬಾರದು ಎಂದು ಒಂದು ಸಿನಿಮಾ ಮುಖಾಂತರ ಸಮಾಜಕ್ಕೆ ಈ ಸಮರ ಕಲೆಯ ಜೊತೆಗೆ ಹಣುಮಕ್ಕಳ ರಕ್ಷಣೆ ಬಗ್ಗೆ ಹೇಳಲು “ಟೇಕ್ವಾಂಡೋ ಗರ್ಲ್”
ಸಿನಿಮಾ ಮೂಲಕ ನಿರ್ಮಿಸಿದ್ದೇನೆ. ಈ ಚಿತ್ರಕ್ಕೆ ಪತಿ ಪ್ರವೀಣ್ ಭಾನು ಕೂಡ ಸಾಥ್ ನೀಡಿ ಮಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ. ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದು , ಮಕ್ಕಳಿಗಾಗಿ ಚಿತ್ರವನ್ನ ತೋರಿಸಲು ಎಜುಕೇಶನ್ ಮಿನಿಸ್ಟರ್ ಸೇರಿದಂತೆ ಅಧಿಕಾರಿಗಳ ಜೊತೆ ಮಾತುಕತೆ ಮಾಡಿ ಫೈಲ್ ಅನ್ನ ಕೊಟ್ಟಿದ್ದೇವೆ. ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ , ಇದೇ 30 ರಂದು ನಮ್ಮ ಚಿತ್ರ ಬಿಡುಗಡೆ ಮಾಡುತ್ತಿದ್ದು, ವಿದ್ಯಾರ್ಥಿಗಳಿಗಾಗಿ ಟಿಕೆಟ್ ನಲ್ಲಿ 50 ಪರ್ಸೆಂಟ್ ಕಡಿಮೆ ಮಾಡಿ ಚಿತ್ರ ವೀಕ್ಷಿಸಲು ಅನುಕೂಲ ಮಾಡುತ್ತೇವೆ. ನಾನು ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದೇನೆ. ನನ್ನ ಪತಿಯು ಕೂಡ ಅಭಿನಯಿಸಿದ್ದಾರೆ, ನಿಮ್ಮೆಲ್ಲರ ಸಹಕಾರ , ಪ್ರೀತಿ ಇರಲಿ ಎಂದು ಕೇಳಿಕೊಂಡರು.
ಇನ್ನು ಚಿತ್ರದ ಮುಖ್ಯ ಪಾತ್ರದಲ್ಲಿ ನಡಿಸಿರುವ ಸ್ಪರ್ಶ ಮಾತನಾಡಿ " ನನಗೆ ಬಾಲ್ಯದಿಂದಲೂ ಕ್ರೀಡೆ ಹಾಗೂ ಸಿನಿಮಾ ಕುರಿತು ತುಂಬಾ ಆಸಕ್ತಿ ಇದೆ. ನನಗೆ ನನ್ನ ತಾಯಿ ಹಾಗೂ ನನ್ನ ತಂದೆ ತುಂಬಾ ಸಪೋರ್ಟ್ ನೀಡಿದ್ದಾರೆ. ಹಾಗೆ ನಾನು ಬ್ಲಾಕ್ ಬಿಲ್ಟ್ ಪಡೆಯಲು ನನ್ನ ಗುರುಗಳು ತುಂಬಾ ಟ್ರೈನಿಂಗ್ ನೀಡಿದ್ದಾರೆ. ಹಾಗೆಯೇ ಶಾಲೆಯಲ್ಲಿ ನನ್ನ ಪ್ರಿನ್ಸಿಪಾಲ್ ಕೂಡ ಸಪೋರ್ಟ್ ಮಾಡುತ್ತಿದ್ದು , ಶಾಲೆ ಹಾಗೂ ಸಿನಿಮಾಗೆ ಯಾವುದೇ ತೊಂದರೆ ಮಾಡಿಕೊಳ್ಳದೆ ಎರಡನ್ನು ನಿಭಾಯಿಸುತ್ತಿದ್ದೇನೆ.ಈ ಚಿತ್ರದ ನಂತರ ಐದು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಫ್ರೆಂಡ್ಸ್ ಈ ಟೀಸರ್ ಅನ್ನು ನೋಡಿ ಚೆನ್ನಾಗಿ ಮಾಡಿದ್ದೀಯಾ ಎಂದು ಹೇಳಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆಗೆ ಕರಾಟೆ , ಸೆಲ್ಫ್ ಡಿಫೆನ್ಸ್ ತರಬೇತಿ ಬಹಳ ಮುಖ್ಯ. ಅದನ್ನು ನಾವು ಈ ಚಿತ್ರದಲ್ಲಿ ತೋರಿಸಿದ್ದೇವೆ. ನೀವೆಲ್ಲರೂ ನಮ್ಮ ಚಿತ್ರವನ್ನ ನೋಡಿ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು. ಈ ಚಿತ್ರದಲ್ಲಿ ಸುಮಾರು ಇನ್ನೂರು ಟೇಕ್ವಾಂಡೋ ವಿಧ್ಯಾರ್ಥಿಗಳು ಅಭಿನಯಿಸಿದ್ದಾರೆ. ಚಿತ್ರಕ್ಕೆ ಸುಮಾರು ನೂರೈವತ್ತು ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿರುವ ಸಂಗೀತ ನಿರ್ದೇಶಕ M.S. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರ ಇದೇ ತಿಂಗಳು 30ರಂದು ತೆರೆಗೆ ಬರುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ