ಸಿನಿಮಾಗಳ ಪ್ರಚಾರಕ್ಕೆ ಮೂಲ ಸೌಕರ್ಯಗಳ ಅಗತ್ಯ ಅನಿವಾರ್ಯ: ಗಿರೀಶ ಕಾಸರವಳ್ಳಿ
ಸಿನಿಮಾಗಳು ತಯಾರಾದಾಗ ಪ್ರತಿಯೊಬ್ಬರಿಗೂ ತಲುವಂತಾಗಬೇಕಾದರೆ ಪ್ರಚಾರಕ್ಕೆ ಬೇಕಾದ ಮೂಲ ಸೌಕರ್ಯಗಳ ಅಗತ್ಯ ಅನಿವಾರ್ಯವಾಗಿದೆ. ಅಂದಾಗ ಮಾತ್ರ ಕನ್ನಡ ಚಿತ್ರದ ಏಳಿಗೆ ಸಾಧ್ಯವಾಗಲಿದೆ ಎಂದು ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು ಅಭಿಪ್ರಾಯ ಪಟ್ಟರು.
ಬಳ್ಳಾರಿ: ಸಿನಿಮಾಗಳು ತಯಾರಾದಾಗ ಪ್ರತಿಯೊಬ್ಬರಿಗೂ ತಲುವಂತಾಗಬೇಕಾದರೆ ಪ್ರಚಾರಕ್ಕೆ ಬೇಕಾದ ಮೂಲ ಸೌಕರ್ಯಗಳ ಅಗತ್ಯ ಅನಿವಾರ್ಯವಾಗಿದೆ. ಅಂದಾಗ ಮಾತ್ರ ಕನ್ನಡ ಚಿತ್ರದ ಏಳಿಗೆ ಸಾಧ್ಯವಾಗಲಿದೆ ಎಂದು ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು ಅಭಿಪ್ರಾಯ ಪಟ್ಟರು.
ವಿಮ್ಸ್‍ನ ಕನ್ನಡ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸನ್ಮಾರ್ಗ ಗೆಳೆಯರ ಬಳಗ ಇವರ ಸಹಯೋಗದಲ್ಲಿ ಭಾನುವಾರದಂದು ನಗರದ ವಿಮ್ಸ್‍ನ ವೈದ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ ರಾಷ್ಟ್ರಪ್ರಶಸ್ತಿ ಚಿತ್ರಗಳ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಮೌಲ್ವಿಕ ಸಿನಿಮಾಗಳು ತಯಾರಾದಾಗ ಸರಿಯಾದ ಪ್ರಚಾರ ಸಿಗುತ್ತಿರಲಿಲ್ಲ. ಆದರೆ ಈಗ ಅಂತಹ ಸಿನಿಮಾಗಳು ತಯಾರಾಗುತ್ತಿಲ್ಲ ಎಂದು ವ್ಯಕ್ತಪಡಿಸಿದರು.ಒಬ್ಬ ಒಳ್ಳೆಯ ಕ್ರೀಯಾಶೀಲಾ ಬರಹಗಾರ, ನಿರ್ದೇಶಕನು ವಿಮರ್ಶೆಗೆ ಒಳಗಾದಾಗ ಮಾತ್ರ ತನ್ನಲ್ಲಿರುವ ತಪ್ಪುಗಳನ್ನು ತಿಳಿದುಕೊಳ್ಳಲು ಸಾಧ್ಯ ಎಂದರು.
ವಿಮ್ಸ್‍ನ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಪರಸಪ್ಪ ಬಂದ್ರಕಳ್ಳಿ ಮಾತನಾಡಿ, ನಮ್ಮ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಬಿಂಬಿಸುವ ಸದುದ್ದೇಶದಿಂದ ಈ ಚಲನಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಭಾಷೆ, ಸಂಸ್ಕøತಿ ಮುಂದಿನ ಪೀಳಿಗೆಗೂ ತಲುಪಬೇಕು ಎಂದರು.ಖ್ಯಾತ ಕಥೆಗಾರರಾದ ಅಮರೇಶ ನುಗಡೋಣಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದ್ವೀಪ, ತಾಯಿಸಾಹೇಬ ಮತ್ತು ಕೂರ್ಮವತಾರ ಚಿತ್ರಗಳು ಪ್ರದರ್ಶನಗೊಂಡವು. ನಂತರದಲ್ಲಿ ಲೇಖಕ ಗಣೇಶ ಅಮೀನಗಡ ಅವರು, ಪ್ರತಿ ಸಿನಿಮಾ ಪ್ರದರ್ಶನ ನಂತರ ಗಿರೀಶ ಕಾಸರವಳ್ಳಿ ಅವರೊಂದಿಗೆ ಸಂವಾದ ನಡೆಸಿಕೊಟ್ಟರು.
ಮಕ್ಕಳ ತಜ್ಞರಾದ ಡಾ.ಯೋಗನಂದ ರೆಡ್ಡಿ, ವೈದ್ಯ ಸಾಹಿತಿ ಡಾ.ಅರವಿಂದ ಪಾಟೀಲ್, ರಂಗತೋರಣದ ಅಧ್ಯಕ್ಷರಾದ ಪ್ರಭುದೇವ ಕಪ್ಪಗಲ್ಲು ವಿಮ್ಸ್‍ನ ಕನ್ನಡ ಸಂಘದ ಕಾರ್ಯದರ್ಶಿ ಡಾ.ದಿವ್ಯ.ಕೆ.ಎನ್, ಖಜಾಂಚಿ ಡಾ.ಸುಮಾ ಗುಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ನಿಷ್ಠಿ ರುದ್ರಪ್ಪ ಹಾಗೂ ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷರಾದ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
------