Anushka Shetty New Movie With Prabhas: ಟಾಲಿವುಡ್‌ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ, ಇತ್ತೀಚಿನ ವರ್ಷಗಳಲ್ಲಿ  ಸಿನಿಮಾಗಳಲ್ಲಿ ನಟಿಸೋದೆ ಕಮ್ಮಿ ಆಗಿದ್ದಿ, ಅದಕ್ಕೆ ದೇಹದ ತೂಕ ಹೆಚ್ಚಾಗಿದ್ದೇ ಇದ್ದಕ್ಕೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಲೇ ಇದೆ. ಆದರೆ ಕೆಲ ದಿನಗಳ ಹಿಂದೆ ಇದರ ಬಗ್ಗೆ ಸ್ವೀಟಿ ಪ್ರತಿಕ್ರಿಯಿಸಿದ್ದು, ಬೇಕಂತಲೇ ಚಿತ್ರಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾಗಿ ಹೇಳಿದ್ದರು. ನಟಿ ಅನುಷ್ಕಾ ಪ್ರಭಾಸ್ ಹೋಂ ಬ್ಯಾನರ್‌ ಯುವಿ ಕ್ರಿಯೇಷನ್ಸ್‌ ನಿರ್ಮಾಣದ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು. 


COMMERCIAL BREAK
SCROLL TO CONTINUE READING

ಕರಾವಳಿ ಚೆಲುವೆ ಅನುಷ್ಕಾ ಸದ್ಯ ಇನ್ನು ಹೆಸರಿಡದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದ್ದು, ಈ ಸಿನಿಮಾವನ್ನು ಸಹ ಪ್ರಭಾಸ್ ಅವರ ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ ಎನ್ನಲಾಗ್ತಿದೆ. ಸಮಾರು 6 ವರ್ಷಗಳ ನಂತರ ಡಾರ್ಲಿಂಗ್ ಪ್ರಭಾಸ್ ಮತ್ತು ಸ್ವೀಟಿ ಮತ್ತೆ ತೆರೆಯ ಮೇಲೆ ಜೋಡಿಯಾಗಿ ಬರುತ್ತಿದ್ದು, ಹೊಸ ಸಿನಿಮಾ ಮಾಡುವ ಮೂಲಕ ಸದ್ದು ಮಾಡ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದ್ದು, ಇನ್ನು ಮಲಯಾಳಂನಲ್ಲಿ 'ಕಥನಾರ್' ಎನ್ನುವ ಚಿತ್ರದಲ್ಲಿ ಕೂಡ ಅನುಷ್ಕಾ ನಟಿಸಿದ್ದಾರೆ. ಆ ಚಿತ್ರದ ಶೂಟಿಂಗ್‌ ಮುಗಿದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. 


ಇದನ್ನೂ ಓದಿ: Samantha: ಶೀಘ್ರದಲ್ಲೇ ಸಮಂತಾ ಕಲ್ಯಾಣ... ಎರಡನೇ ಮದುವೆಗೆ ಕೊಟ್ರಾ ಗ್ರೀನ್‌ ಸಿಗ್ನಲ್‌!?


ನಟಿ ಅನುಷ್ಕಾ ಶೆಟ್ಟಿ ಹಾಗೂ ರಮ್ಯಾಕೃಷ್ಣ 10 ದಿನಗಳ ಕಾಲ  ಒಡಿಶಾದಲ್ಲಿ ಕ್ಯಾಮರಾ ಕಾಣಿಸಿಕೊಳ್ಳಲಿದ್ದು, ಆದರೆ ಸಿನಿಮಾ ಬಗ್ಗೆ ಯಾವುದೇ ವಿಚಾರ ಲೀಕ್ ಆಗಬಾರದು ಎನ್ನುವ ಕಾರಣಕ್ಕೆ ಶೂಟಿಂಗ್‌ಗೆ ಭಾರೀ ಭದ್ರತೆ ವಹಿಸಿದ್ದಾರೆ. ಸದ್ಯ ಒಡಿಶಾದ ಜೇಪೋರ್‌ನಲ್ಲಿ ಹೊಸ ಸಿನಿಮಾ ಚಿತ್ರೀಕರಣ ನಡೀತಿದೆ.ಜೇಪೋರ್ ನಗರದ ಮುಖ್ಯ ರಸ್ತೆ, ಸೂರ್ಯ ಮಹಲ್ ಮತ್ತು ಜಯನಗರ ಪ್ರದೇಶದಲ್ಲಿ ಜಗನ್ನಾಥ ಸಾಗರ್ ಬಳಿಯ ಪಾರ್ಕ್‌ನಲ್ಲಿ ಒಂದಷ್ಟು ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ. ಅಲ್ಲೇ ಹೋಟೆಲ್‌ವೊಂದರಲ್ಲಿ ಚಿತ್ರತಂಡ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 


ಟಾಲಿವುಡ್‌ ಸ್ವೀಟಿ ಅನುಷ್ಕಾ ಶೆಟ್ಟಿ'ಬಾಹುಬಲಿ' ಸರಣಿ ಬಳಿಕ  ನಟಿಸಿದ ಯಾವುದೇ ಸಿನಿಮಾ ಅಷ್ಟಾಗಿ ಸದ್ದು ಮಾಡದೆ, ಇದ್ದಿದ್ದರಲ್ಲಿ 'ಭಾಗಮತಿ' ಸಕ್ಸಸ್ ಕಂಡು, ಅದಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆ ಚಿತ್ರಕ್ಕೆ ಸೀಕ್ವೆಲ್ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದು, ಆದರೆ ಅದು ನಿಜವಾಗಲಿಲ್ಲ. ಇನ್ನು 'ಸೈಜ್‌ ಜೀರೊ' ಸ್ವೀಟಿ ಕರಿಯರ್‌ನಲ್ಲಿ ಮರೆಯಲಾಗದ ಸಿನಿಮಾ ಆಗಿ ಉಳಿದುಬಿಡ್ತು. ಇನ್ನೂ'ನಿಶಬ್ಧಂ' ಚಿತ್ರ ಕೂಡ ಸದ್ದು ಮಾಡದೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬಂದು ಹೋಗಿದ್ದು ಗೊತ್ತಾಗಲಿಲ್ಲ. ತೂಕ ಹೆಚ್ಚಿಸಿಕೊಂಡ ಬಳಿಕ ಅವಕಾಶಗಳು ಬರಲಿಲ್ಲ ಎನ್ನಲಾಗುತ್ತದೆ. ನ್ಯಾಚುರಲ್ ಆಗಿ ತೂಕ ಇಳಿಸಲು ಎಷ್ಟೇ ಪ್ರಯತ್ನಿಸಿದರೂ ಸ್ವೀಟಿ ಮೊದಲಿನಿಂದ ಬಳಕುವ ಬಳ್ಳಿಯಂತೆ ಆಗಲು ಸಾಧ್ಯವಾಗಲಿಲ್ಲ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.