ನಾಗ ಚೈತನ್ಯ-ಸಮಂತಾ ವಿಚ್ಛೇದನಕ್ಕೆ ಚಿರಂಜೀವಿ ಕಾರಣವೇ? ಬಯಲಾಯ್ತು ಶಾಕಿಂಗ್ ಸತ್ಯ!
Naga Chaitanya-Samantha divorce: ನಾಯಕ ನಾಗ ಚೈತನ್ಯ ಮತ್ತು ನಾಯಕಿ ಸಮಂತಾ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಕೆಲ ವರ್ಷಗಳ ನಂತರ ವಿಚ್ಛೇದನ ಪಡೆದಿತ್ತು.
Naga Chaitanya-Samantha: ಸಮಂತಾ-ನಾಗಚೈತನ್ಯ ಜೋಡಿ ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಜೋಡಿ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅವರ ನಡುವಿನ ಭಿನ್ನಾಭಿಪ್ರಾಯಗಳಿಂದ ಅವರು ವಿಚ್ಛೇದನ ಪಡೆದು ಪ್ರತ್ಯೇಕ ಜೀವನ ಮುಂದುವರೆಸಿದರು.
ಆದರೆ ವಿಚ್ಛೇದನ ವಿಚಾರದಲ್ಲಿ ಅಭಿಮಾನಿಗಳು ಎರಡು ಬಣಗಳಾಗಿ ಒಡೆದಿದ್ದಾರೆ.. ಸಮಂತಾ ಬೇರೊಬ್ಬ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದರಿಂದ ವಿಚ್ಛೇದನ ನೀಡಿದ್ದಾರೆ ಎಂದು ನಾಗ ಚೈತನ್ಯ ಅಭಿಮಾನಿಗಳು ಆರೋಪಿಸಿದ್ದರೆ, ಸಮಂತಾ ಅಭಿಮಾನಿಗಳು ನಾಗಚೈತನ್ಯ ಅವರಿಂದಲೇ ಸ್ಯಾಮ್ ವಿಚ್ಛೇದನ ನೀಡಿದ್ದು ಎಂದು ಆರೋಪ ಮಾಡುತ್ತಿದ್ದಾರೆ..
ಇದನ್ನೂ ಓದಿ-ಪ್ರಭಾಸ್ ಅಭಿನಯಕ್ಕೆ ಅವಮಾನ ಮಾಡಿದ ಕಲ್ಕಿ ನಟಿ! ಡಿಲೀಟ್ ಮಾಡಿದ ಆ ಪೋಸ್ಟ್ ನ ಸ್ಕ್ರೀನ್ ಶಾಟ್ ನಲ್ಲೇನಿದೆ ಗೊತ್ತಾ?
ವಿಚ್ಛೇದನದ ನಂತರ, ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅವರ ವಿಚ್ಛೇದನಕ್ಕೆ ಸ್ಪಷ್ಟ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಇತ್ತೀಚೆಗೆ ಇವರಿಬ್ಬರ ವಿಚ್ಛೇದನದ ಸುದ್ದಿಯೊಂದು ವೈರಲ್ ಆಗಿದೆ. ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನಕ್ಕೆ ಮೆಗಾಸ್ಟಾರ್ ಚಿರಂಜೀವಿ ಕೂಡ ಕಾರಣ ಎಂಬುದು ಈ ಸುದ್ದಿಯ ಸಾರಾಂಶ.
ಇದನ್ನೂ ಓದಿ-ನಟ ಚಿರಂಜೀವಿ 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..? ಮೆಗಾಸ್ಟಾರ್ SSLC ಮಾರ್ಕ್‌ಶೀಟ್ ವೈರಲ್!
ಮದುವೆಯ ನಂತರ ಸಮಂತಾಗೆ ರಾಮ್ ಚರಣ್ ಎದುರು ನಟಿಸುವ ಅವಕಾಶ ಸಿಕ್ಕಿತು. ರಂಗಸ್ಥಳಂ ಸಿನಿಮಾದಲ್ಲಿ ಆಫರ್ ಬಂದ ನಂತರ ಸಮಂತಾ ನಾಯಕಿಯಾಗಿ ಆಯ್ಕೆಯಾದರು. ಆದರೆ ಸಮಂತಾ ಅವರನ್ನು ನಾಯಕಿಯಾಗಿ ತೆಗೆದುಕೊಳ್ಳಬೇಕೋ ಬೇಡವೋ ಎಂದು ಚಿತ್ರತಂಡ ಸಾಕಷ್ಟು ಯೋಚಿಸಿತ್ತು,, ಸಮಂತಾ ಅಕ್ಕಿನೇನಿ ಮನೆಗೆ ಸೊಸೆಯಾಗಿ ಹೋಗಿದ್ದಾರೆ ಈಗ ಸಿನಿಮಾ ಮಾಡುತ್ತಾರಾ ಎಂದು ಚಿತ್ರತಂಡ ಚಿರು ಜೊತೆ ಮಾತನಾಡಿದಾಗ ಕೇಳಿದ್ದರಂತೆ ಆಗ ಚಿರು ಮದುವೆಯಾದರೆ ಹೀರೋಯಿನ್ ಆಗಬಾರಾದಾ ಎಂದು ಚಿತ್ರತಂಡಕ್ಕೆ ಹೇಳಿದ್ದರಂತೆ.. ಸಮಂತಾ ಕೂಡ ಆ ಪಾತ್ರವನ್ನು ಇಷ್ಟಪಟ್ಟಿದ್ದರಂತೆ..
ಮದುವೆಯ ನಂತರ, ಸಮಂತಾ ಮತ್ತೆ ತಮ್ಮ ನಟನೆಯಿಂದ ಉತ್ತಮ ಖ್ಯಾತಿಯನ್ನು ಗಳಿಸಲು ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಈ ವೆಬ್ ಸೀರಿಸ್ ನಂತರ ಸಮಂತಾ ಮತ್ತು ನಾಗ ಚೈತನ್ಯ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಅದರ ನಂತರ ದಂಪತಿಗಳು ವಿಚ್ಛೇದನ ಪಡೆದರು. ಇದರೊಂದಿಗೆ ಸಮಂತಾ ನಾಗ ಚೈತನ್ಯ ವಿಚ್ಛೇದನಕ್ಕೆ ಪರೋಕ್ಷವಾಗಿ ಚಿರು ಕಾರಣ ಎಂಬ ವಾದ ಮುನ್ನೆಲೆಗೆ ಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.