ʼಕಬ್ಜʼ ಮತ್ತು `ಪ್ರಜಾಕೀಯ`ಕ್ಕೆ ಲಿಂಕ್..! ಡೌಟ್ ಮೂಡಿಸುತ್ತಿದೆ ಉಪ್ಪಿ ಡೈಲಾಗ್
ಕನ್ನಡದ ಕಬ್ಜ ರಿಲೀಸ್ ಗೂ ಮೊದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌಂಡ್ ಮಾಡ್ತಿದೆ.. ಉಪ್ಪಿ ಕಿಚ್ಚನ ಕಾಂಬೋ ನಿರೀಕ್ಷೆ ಹೆಚ್ಚಿಸಿದೆ.. ಈ ಗ್ಯಾಪ್ ನಲ್ಲಿ ಕಬ್ಜ ರಿಯಲ್ ಸ್ಟಾರ್ ಉಪ್ಪಿಯ ಪ್ರಜಾಕೀಯಕ್ಕೆ ಮುನ್ನುಡಿ ಬರೆಯುತ್ತ ಅನ್ನೋ ಪ್ರಶ್ನೆ ಶುರುವಾಗಿದೆ.. ಅಷ್ಟಕ್ಕೂ ಉಪ್ಪಿಯ ಪ್ರಜಾಕೀಯಕ್ಕೂ ಕಬ್ಜ ಚಿತ್ರಕ್ಕೂ ಎಂತ್ತಣ ಸಂಬಧ ಅಂತೀರಾ ಹಾಗಾದ್ರೆ ಮುಂದೆ ಓದಿ..
Upendra Kabza : ಕನ್ನಡದ ಕಬ್ಜ ರಿಲೀಸ್ ಗೂ ಮೊದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌಂಡ್ ಮಾಡ್ತಿದೆ.. ಉಪ್ಪಿ ಕಿಚ್ಚನ ಕಾಂಬೋ ನಿರೀಕ್ಷೆ ಹೆಚ್ಚಿಸಿದೆ.. ಈ ಗ್ಯಾಪ್ ನಲ್ಲಿ ಕಬ್ಜ ರಿಯಲ್ ಸ್ಟಾರ್ ಉಪ್ಪಿಯ ಪ್ರಜಾಕೀಯಕ್ಕೆ ಮುನ್ನುಡಿ ಬರೆಯುತ್ತ ಅನ್ನೋ ಪ್ರಶ್ನೆ ಶುರುವಾಗಿದೆ.. ಅಷ್ಟಕ್ಕೂ ಉಪ್ಪಿಯ ಪ್ರಜಾಕೀಯಕ್ಕೂ ಕಬ್ಜ ಚಿತ್ರಕ್ಕೂ ಎಂತ್ತಣ ಸಂಬಧ ಅಂತೀರಾ ಹಾಗಾದ್ರೆ ಮುಂದೆ ಓದಿ..
ಬಹು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಕನ್ನಡದ 'ಕಬ್ಬ' ಚಿತ್ರದ ಆಡಿಯೋ ರೇಷ್ಮೆ ನಗರಿ ಶಿಡ್ಲಘಟ್ಟ ನಗರದ ನೆಹರು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ..ಆರ್ ಚಂದ್ರು ನಿರ್ದೇಶನದಿಂದ ಮೂಡಿಬರುತ್ತಿರುವ 'ಕಬ್ಬ' ಚಿತ್ರ ಸಿನಿ ಪ್ರಿಯರಲ್ಲಿ ಸಾಕಷ್ಟು ಕೂತುಹಲ ಕೆರಳಿಸಿದ್ದು, ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಾಕಷ್ಟು ಬೇಡಿಕೆ ಹೆಚ್ಚಿಸಿಕೊಂಡಿದೆ.ಚಿತ್ರದಲ್ಲಿ ನಟ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಸೇರಿದಂತೆ ದಕ್ಷಿಣ ಭಾರತದ ಹಲವು ಫೇಮಸ್ ಕಲಾವಿದರು ಕಾಣಿಸಿರೋದು ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ.
ಇದನ್ನೂ ಓದಿ: ಯಶಸ್ಸಿನ ಹಾದಿಯಲ್ಲಿ "ಸೌತ್ ಇಂಡಿಯನ್ ಹೀರೋ " ಸಿನಿಮಾ...!
ಇನ್ನು ಕಬ್ಜ ಚಿತ್ರದ ಮೂರನೇ ಸ್ಪೆಷಲ್ ಸಾಂಗ್ ಅನ್ನು ಶಿವಣ್ಣ ದಂಪತಿ ಲಾಂಚ್‌ಮಾಡಿ ಚಂದ್ರು ಬಳಗಕ್ಕೆ ಶುಭ ಕೋರಿದ್ದಾರೆ. ಅಲ್ಲದೆ ಕಬ್ಜ ವೇದಿಕೆಯಲ್ಲಿ ಮಾತನಾಡಿದ ಶಿವಣ್ಣ ಓಂ ಚಿತ್ರದ ನೆನಪುಗಳ ಮೆಲುಕು ಹಾಕಿದ್ದು, ಅಂದು ಉಪೇಂದ್ರ ಓಂ ಚಿತ್ರ ಮಾಡದಿದ್ರೆ ಭಾರತೀಯ ಚಿತ್ರರಂಗದಲ್ಲಿ ಅಂಡರ್ ವರ್ಲ್ಡ್ ಸಿನಿಮಾಗಳ ಬರ್ತಿಲ್ಲಿಲ್ಲ.. ಅದೇ ರೀತಿ ಈಗ ಚಂದ್ರು ಕಬ್ಜ ಸಿನಿಮಾ ಮಾಡಿದ್ದಾರೆ. ಕಬ್ಬ ಸಿನಿಮಾ ಅಭಿಮಾನಿಗಳ ಮನಸ್ಸನ್ನು ಗೆಲ್ಲಲಿದೆ. ಜೊತೆಗೆ ಸಾಕಷ್ಟು ಯಶಸ್ವಿ ಕಾಣಲಿದೆ ಎಂದು ಕಬ್ಜ ಚಿತ್ರದ ಬಗ್ಗೆ ಭವಿಷ್ಯ ನುಡಿದ್ರು.
ಇದೇ ವೇದಿಕೆಯಲ್ಲಿ ಉಪ್ಪಿ ಒಂದಷ್ಟು ವಿಚಾರಗಳನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ರು. ಅದರಲ್ಲಿ ತುಂಭಾ ವಿಷೇಶವಾಗಿ ಗಮನ ಸೆಳೆದಿದ್ದು ಕಬ್ಜ ಚಿತ್ರ ಉಪ್ಪಿಯ ಪ್ರಜಾಕೀಯಕ್ಕೆ ಮುನ್ನುಡಿಯಾಗುತ್ತ ಅನ್ನೋ ಪ್ರಶ್ನೆ ಈಗ ಉಪ್ಪಿನ ಪ್ರೀತಿಸೋ ಹೃದಯಗಳನ್ನು ಹೊಕ್ಕಿದೆ.. ಅಷ್ಟಕ್ಕೂ ಈ ಪ್ರಶ್ನೆ ಈಗ ಯಾಕಪ್ಪ ಬಂತು ಅಂದ್ರೆ.. ಕಬ್ಜ ಆಡಿಯೋ ವೇದಿಕೆಯಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಉಪ್ಪಿ ಡೈಲಾಗ್ ಹೊಡೆಯೊಕೆ ಸಜ್ಜಾದ್ರು. ಈಗ ವೇಳೆ ಕಬ್ಜ ಚಿತ್ರದ ಡೈಲಾಗ್ ಬೇಕು ಅನ್ನೋ ಡಿಮ್ಯಾಂಡ್ ಬಂದಾಗ ಉಪ್ಪಿ ಇನ್ನು ಎಲ್ಲೂ ರಿವೀಲ್ ಆಗದ ಕಬ್ಜ ಚಿತ್ರದ ಡೈಲಾಗ್ ಹೇಳಿದ್ರು.
ಇದನ್ನೂ ಓದಿ:ರಾಮಾಚಾರಿ 2.0 ಸಿನಿ ತಂಡಕ್ಕೆ ರಾಘಣ್ಣ ಸಾಥ್..! ಚಿತ್ರದ ಟ್ರೇಲರ್ ರಿಲೀಸ್
ನಾನು ಕತ್ತಿಯಿಂದ ರಾಜ್ಯ ಕಟ್ಟಲ್ಲ. ಕತ್ತಿ ಹಿಡಿಯೋ ಕೈಗಳಿಂದ ಸಾಮ್ರಾಜ್ಯ ಕಟ್ತೀನಿ ಅಂತ ಪಂಚ್ ಡೈಲಾಗ್ ಹೇಳಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡ್ರು... ಇನ್ನು ಉಪ್ಪಿಯ ಬಾಯಲ್ಲಿ ಈ ಡೈಲಾಗ್ ಕೇಳಿದ ಮೇಲೆ ಗಾಂಧಿನಗರದಲ್ಲಿ ಹೊಸ ಚರ್ಚೆ ಶುರುವಾಗಿದೆ.. ಇಷ್ಟು ಕಬ್ಜ ಅಂಡರ್ ವರ್ಲ್ಡ್ ಸಿನಿಮಾ ಅಂತ ಗೆಸ್ ಮಾಡಿದವ್ರು ಈ ಡೈಲಾಗ್ ಕೇಳಿದ ಮೇಲೆ ಕಬ್ಜ ಅಂಡರ್ ವರ್ಲ್ಡ್ ಕತೆಯಷ್ಟೇ ಅಲ್ಲ ರಾಜಕೀಯದ ಎಳೆಯು ಇರ ಬಹುದ ಅಂತ ಚರ್ಚೆ ಮಾಡ್ತಿದ್ದಾರೆ.. ಅಲ್ಲದೆ ಕಬ್ಜ ಮಾರ್ಚ್ 17 ಕ್ಕೆ ಬರ್ತಿದ್ದು ಏಪ್ರಿಲ್ ಮೇ ನಲ್ಲಿ ಚುನಾವಣೆಯು ಬರಲಿದೆ. ಅಲ್ಲದೆ ಉಪ್ಪಿ ಕೂಡ ಪ್ರಜಾಕೀಯದ ಮೂಲಕ ಖಾದಿ ತೊಡೊಗೆ ಸಜ್ಜಾಗಿದ್ದು, ಇದಕ್ಕೆ ಪೂರಕವದ ಅಂಶ ಕಬ್ಜ ಚಿತ್ರದಲ್ಲಿ ಇರಬಹುದ ಅನ್ನೋ ವಿಚಾರ ಪ್ರಚಾರ ಇಲ್ಲದೆ ಚರ್ಚೆಯಾಗ್ತಿದೆ.. ಅದ್ರೆ ಈ ವಿಚಾರ ಪಕ್ಕಾ ಆಗಬೇಕಾದ್ರೆ ಮಾರ್ಚ್ 17 ರ ತನಕ ಕಾಯಲೇ ಬೇಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.