ಬೆಂಗಳೂರು: ಕನ್ನಡದ ಚಿತ್ರರಂಗದಲ್ಲಿ ಹೊಸ ಪರ್ವ ಶುರುವಾಗ್ತಿದೆ. ನೀವೆಲ್ಲಾ ನಿರೀಕ್ಷೆ ಮಾಡದೇ ಇರುವಂತಹ ನಟಿಯರು ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಸ್ಟಾರ್ಸ್​ ಕಿಡ್ಸ್​​​​ ಹೀರೋಯಿನ್ಸ್​​ ಆಗಿ ಪದಾರ್ಪಣೆ ಮಾಡುತ್ತಿರೋದು ವಿಶೇಷ. ಆ ಲೀಸ್ಟ್​​ನಲ್ಲಿ ಮತ್ತೊಬ್ರು ಸ್ಟಾರ್​ ಕಿಡ್​​ ಹೆಸ್ರು ರಿಜಿಸ್ಟರ್ ಆಗಿದೆ. ಹೌದು, ಅವ್ರೇ ರಿಯಲ್ ಸ್ಟಾರ್​ ಸುಪುತ್ರಿ  ಐಶ್ವರ್ಯ ಉಪೇಂದ್ರ...


COMMERCIAL BREAK
SCROLL TO CONTINUE READING

ಇದನ್ನೂ ಓದಿ : ನನ್ನ ಜೀವನದಲ್ಲಿ ರೌಡಿಗಳ ಪರಿಚಯವೇ ಇಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಸಚಿವರ ಸ್ಪಷ್ಟನೆ


ಗಾಂಧಿನಗರದಲ್ಲಿ ಈಗ ಬಿಸಿ ಬಿಸಿ ಸುದ್ದಿಯೊಂದು ಓಡಾಡ್ತಿದೆ. ಊಟ. ಕಾಫಿ, ತಿಂಡಿ ತಿನ್ನುತ್ತಿರಲಿ ಗಾಂಧಿನಗರದ ಗಲ್ಲಿಯಲ್ಲಿ ಸ್ಟಾರ್ಸ್​ ಮಕ್ಕಳದ್ದೇ ಮಾತುಕಥೆ. ಯಾಕಂದ್ರೆ ಕನಸಿನರಾಣಿ ಮಾಲಾಶ್ರೀ ಮಗಳು ಹೀರೋಯಿನ್ ಆಗಿ ಆಯ್ತು. ಲವ್ಲಿ ಸ್ಟಾರ್ ಪ್ರೇಮ್ ಮುದ್ದಿನ ಮಗಳು ನಾಯಕಿ ಆದ್ರು. ಈಗ ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳು ಐಶ್ವರ್ಯ ಉಪೇಂದ್ರ ಕೂಡ ನಾಯಕಿ ಆಗೋ ಬಗ್ಗೆ ಸುದ್ದಿಯೊಂದು ಹೊರ ಬಂದಿದೆ. ಅದು ಕೂಡ ದೊಡ್ಮನೆಯ ಮೂರನೇ ತಲೆಮಾರು ಯುವರಾಜ್ ಕುಮಾರ್​ ಸಿನಿಮಾಗೆ ಐಶ್ವರ್ಯ ಉಪೇಂದ್ರ ಹೀರೋಯಿನ್ ಆಗೋ ಬಗ್ಗೆ ಮಾತುಕಥೆ ನಡೆದಿದೆ.


ಇದನ್ನೂ ಓದಿ : ನನ್ನ ಜೀವನದಲ್ಲಿ ರೌಡಿಗಳ ಪರಿಚಯವೇ ಇಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಸಚಿವರ ಸ್ಪಷ್ಟನೆ


ದೊಡ್ಮನೆಯ ಹೆಸರನ್ನ ಹಚ್ಚ ಹಸಿರಾಗಿಡೋ ಟ್ಯಾಲೆಂಟ್​ ಯುವರಾಜ್ ಕುಮಾರ್ ಬಳಿಯಿದೆ. ರಾಘವೇಂದ್ರ ರಾಜ್ ಕುಮಾರ್ ಎರಡನೇ ಪುತ್ರ ಯುವ ರಾಜ್​ ಕುಮಾರ್ ನಾಯಕ ನಟನಾಗಿ 2023ಕ್ಕೆ ಎಂಟ್ರಿ ಕೊಡಲಿದ್ದಾರೆ. ಯುವರಾಜ್ ಕುಮಾರ್​​​​ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳೋದು ಫಿಕ್ಸ್ ಆಗಿದೆ. ಈ ಸಿನಿಮಾ ನಿರ್ಮಾಣ ಮಾಡೋ ಜವಾಬ್ಧಾರಿ ಹೊತ್ತಿರೋದು ಕೆಜಿಎಫ್​,ಕಾಂತಾರ ಸಿನಿಮಾ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ಂ.. ಹೀಗಾಗಿ ಯುವರಾಜ್​ಕುಮಾರ್​​ಗೆ ನಾಯಕಿ ಆಗಿ ನಟಿಸುವಂತೆ ರಿಯಲ್ ಸ್ಟಾರ್ ಉಪ್ಪಿ ಪುತ್ರಿ ಐಶ್ವರ್ಯ ಉಪೇಂದ್ರಗೆ ಆಫರ್​ ಮಾಡಿದೆಯಂತೆ  ಹೊಂಬಾಳೆ ಪ್ರೊಡಕ್ಷನ್​.


ಇದನ್ನೂ ಓದಿ : ಬಿಜೆಪಿಗೆ ಕುಸ್ತಿ ಮಾಡಲು ಜನರು ಬೇಕಾಗಿದ್ದಾರೆ-ಡಿ‌.ಕೆ.‌ಶಿವಕುಮಾರ್ 


ಐಶ್ವರ್ಯ ಉಪೇಂದ್ರಗೆ ಮನೆಯೇ ಮೊದಲ ಪಾಠ ಶಾಲೆ.ತಂದೆ ತಾಯಿ ಮೊದಲ ಗುರುವಾಗಿದ್ದಾರೆ..ಅಪ್ಪ ಅಪ್ಪ ಇಬ್ಬರು ಸ್ಟಾರ್ಸ್​​​..ಅದರಲ್ಲೂ ಮಗಳ ಬಗ್ಗೆ ಹೆಚ್ಚು ಕೇರ್​ ಮಾಡೋದು ಉಪ್ಪಿ ಪತ್ನಿ ಪ್ರಿಯಾಂಕ ಉಪೇಂದ್ರ. ಮನೆ ಮಗಳು ದೊಡ್ಡ ಹೀರೋಯಿನ್ ಆಗ್ಬೇಕು ಅನ್ನೋ ಆಸೆ ಉಪ್ಪಿ ಕುಟುಂಬಕ್ಕಿದೆ. ಹೀಗಾಗೆ ಪ್ರಿಯಾಂಕ ಉಪೇಂದ್ರ ತಮ್ಮ ದೇವಕಿ ಸಿನಿಮಾದಲ್ಲಿ ಮಗಳು ಐಶ್ವರ್ಯರನ್ನ ಬಾಲನಟಿಯಾಗಿ ಚಿತ್ರರಂಗಕ್ಕೆ ಕರೆತಂದಿದ್ರು. ಈಗ ಯುವರಾಜ್ ಕುಮಾರ್ ಗೆ ನಾಯಕಿಯಾಗೋ ಅವಕಾಶ ಐಶ್ವರ್ಯ ಗೆ ಬಂದಿದೆ. ಇದಕ್ಕೆ ಈಗ ಉಪ್ಪಿ ಕುಟುಂಬ ಗ್ರೀನ್ ಸಿಗ್ನಲ್ ಕೊಡುತ್ತಾ ಇಲ್ಲವೋ ಎನ್ನುವುದನ್ನು ನಾವು ಕಾದುನೋಡಬೇಕಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.