Girija Lokesh: ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇದ್ದಾಗ ಮಾತ್ರ  ಸಂಬಂಧ ಗಟ್ಟಿಯಾಗಿರಲು ಸಾಧ್ಯ. ಒಂದು ವೇಳೆ ದಂಪತಿಗಳ ಭಿನ್ನಾಭಿಪ್ರಾಯದ ನಡುವೆ ಮೂರನೇ ವ್ಯಕ್ತಿ  ತಲೆ ಹಾಕಿದರೆ, ಸಣ್ಣ ಸಮಸ್ಯೆ ಕೂಡ ದೊಡ್ಡದಾಗೋದು ಗ್ಯಾರಂಟಿ. ಇನ್ನು ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲ ದಿನಗಳಿಂದ ಡಿವೋರ್ಸ್‌ ಬಿರುಗಾಳಿ ಬೀಸುತ್ತಿದೆ. ಇತ್ತೀಚೆಗೆಯಷ್ಟೇ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ಪಡೆದು ದೂರವಾಗಿದ್ದರು. ಆದರೆ ಈ ವಿಚ್ಛೇದನದ ಬಳಿಕ ಸೃಜನ್ ಲೋಕೇಶ್ ಹೆಸರು ಕೇಳಿ ಬಂದಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 2ನೇ ಮದ್ವೆಯಾಗಿ ಸುದ್ದಿಯಾಗಿದ್ದ ನಟಿ ಜ್ಯೋತಿ ರೈಗೆ ಇಷ್ಟು ದೊಡ್ಡ ಮಗನಿದ್ದಾನಾ? ಅಮ್ಮನ ಎದೆಯತ್ತರಕ್ಕೆ ಬೆಳೆದ ಮಗ ಎಷ್ಟೊಂದು ಕ್ಯೂಟ್‌ ನೋಡಿ


ಈ ಎಲ್ಲದರ ಮಧ್ಯೆ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್‌ ಬಗ್ಗೆ ಸೃಜನ್ ಲೋಕೇಶ್ ಅವರ ತಾಯಿ ಗಿರಿಜಾ ಲೋಕೇಶ್ ಮಾತನಾಡಿದ್ಧಾರೆ.


'ನಮ್ಮ ಕೆಎಫ್‌ಐ' ಯೂಟ್ಯೂಬ್ ಚಾನೆಲ್‌ʼಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, "ನನಗೆ ಈ ವಿಚಾರದ ಬಗ್ಗೆ ಮೊದಲು ತಿಳಿದಿರಲಿಲ್ಲ. ಫ್ರೆಂಡ್ಸ್‌ ಕಾಲ್‌ ಮಾಡಿ ಹೀಗೆಲ್ಲಾ ಬಂದಿದೆ ಎಂದು ಹೇಳಿದ್ರು. ಆ ಮೇಲೆ ನಾವು ನೋಡಿದ್ವಿ. ನಮ್ಮನೆಯಲ್ಲಿ ಹೀಗೆಲ್ಲ ಬಂದಾಗ ನಗಾಡುತ್ತಿದ್ವಿ. ಏನೋ ಇದು ಸೃಜಾ ನಿನ್ನ ಮೇಲೆ ಈ ತರ ಎಲ್ಲ ಬಂದಿದೆ ಎಂದು ಮಾತನಾಡಿದ್ವಿ" ಎಂದಿದ್ದಾರೆ.


"ಅವರು ಇಬ್ಬರು ನಮ್ಮ ಮನೆಯಲ್ಲಿರುವ ಹುಡುಗರು. ವೀಕೆಂಡ್‌ ಬಂದ್ರೆ ನಾವೆಲ್ಲ ಹೊರಗಡೆ ಹೋಗ್ತಿದ್ವಿ, ನಮ್ಮ ಮನೆ ಪಾರ್ಟಿಗೆ ಫೇಮಸ್. ಇನ್ನು ನಾನು ನನ್ನ ಸೊಸೆ ಕುತ್ಕೊಂಡು, ತಮಾಷೆ ಮಾಡ್ಕೊಂಡು... ಏನೇ ನಿನ್ನ ಗಂಡನ ಬಗ್ಗೆ ಹೀಗೆಲ್ಲ ಬರ್ತಿದೆ ಅಂತ ತಮಾಷೆ ಮಾಡ್ತಿದ್ದೆ" ಅಂದಿದ್ದಾರೆ.


ಇದನ್ನೂ ಓದಿ: ಬ್ರಿಟಿಷರಿಂದಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಆಗಲಿಲ್ಲ : ಬಿಜೆಪಿ ವಿರುದ್ದ ಗುಡುಗಿ ಡಿಸಿಎಂ


"ನಮ್ಮ ಫ್ಯಾಮಿಲಿಯಲ್ಲಿ ಯಾವತ್ತು ಆ ತರಹದ ಘಟನೆಗಳಾಗಿಲ್ಲ. ಆಗೋದು ಬೇಡ. ದೇವರ ದಯೆಯಿಂದ ಆಗಬಾರದು. ಆದ್ರೆ ಅವರು ಇಬ್ಬರು ಡಿವೋರ್ಸ್ ತಗೊಂಡಿದಾರೆ ಅಂದಾಗ ನನಗೆ ಬೇಜಾರಾಯ್ತು"ಎಂದು ಗಿರಿಜಾ ಲೋಕೇಶ್ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ