ಚಂದನವನದಲ್ಲಿ ಅದ್ಭುತ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಇತ್ತೀಚಿಗೆ ರಿಲೀಸ್ ಆಗಿರುವ ಕೆಲವು ಸಿನಿಮಾಗಳು ಟಾಕ್ ನಲ್ಲಿ ಟಾಪ್ನಲ್ಲಿದೆ. ವಿಭಿನ್ನ ಟೈಟಲ್ ಹೊಂದಿರೋ ಮತ್ತೊಂದು ಸಿನಿಮಾ ಇದೀಗ ರಿಲೀಸ್ ಗೆ ರೆಡಿಯಾಗಿದೆ. ಅದುವೇ  "ಸ್ಪೂಕಿ ಕಾಲೇಜು". ಭಯಾನಕ ಸ್ಟೋರಿ ಹೊಂದಿರೋ ಈ ಚಿತ್ರದ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ.


COMMERCIAL BREAK
SCROLL TO CONTINUE READING

ಹಾರರ್ ಸಿನಿಮಾ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಪ್ರತಿಯೊಬ್ಬರೂ ಕೂಡ ಇಷ್ಟಪಟ್ಟು ಸಿನಿಮಾ ನೋಡುತ್ತಾರೆ. ಕನ್ನಡದಲ್ಲಿ ಈ ಹಿಂದೆ ನಾ ನಿನ್ನ ಬಿಡಲಾರೆ, ಶ್, ದುರ್ಗಾಶಕ್ತಿ, ಆಪ್ತಮಿತ್ರ, ಆಪ್ತರಕ್ಷಕ, ಕಲ್ಪನಾ, ಚಾರುಲತಾ, ಕರ್ವ, ಯು ಟರ್ನ್, ರಂಗಿತರಂಗ ಹೀಗೆ ಸಾಲು ಸಾಲು ಹಾರರ್ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿದ್ದವು. ಇದೀಗ ಅದೇ ಲಿಸ್ಟ್ ಗೆ ಮತ್ತೊಂದು ಚಿತ್ರ ಸೇರ್ಪಡೆಯಾಗುತ್ತಿದೆ. ಅದುವೇ "ಸ್ಪೂಕಿ ಕಾಲೇಜು". ಹೌದು ಈ ಚಿತ್ರ ನಿಮ್ಮನ್ನ ಬೇರೆಯದ್ದೇ ಲೋಕಕ್ಕೆ ಕೊಂಡೋಗೋದು ಪಕ್ಕಾ ಅನ್ನೋ ಮಾತು ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ.


ಇದನ್ನೂ ಓದಿ- ಡಿ ಬಾಸ್‌ ʼಕ್ರಾಂತಿʼಗೆ ಮೂಹೂರ್ತ ಫಿಕ್ಸ್‌ : ಇನ್ಮುಂದೆ ಗಜ ಘರ್ಜನೆ ಪ್ರಾರಂಭ...!


ಪ್ರೀಮಿಯರ್ ಪದ್ಮಿನಿ" ಖ್ಯಾತಿಯ ವಿವೇಕ್ ಸಿಂಹ "ಸ್ಪೂಕಿ ಕಾಲೇಜ್" ನ ನಾಯಕ. "ದಿಯಾ" ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ.  ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಪಿ.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ "ಕಾಮಿಡಿ ಕಿಲಾಡಿಗಳು" ಶೋನ‌ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 


ಇದನ್ನೂ ಓದಿ- B-Town ನ Halloween ಪಾರ್ಟಿಯಲ್ಲಿ ತುಂಡುಡುಗೆ ಧರಿಸಿ ಝಲಕ್ ನೀಡಿದ ಬಾಲಿವುಡ್ ಲಲನೆಯರು... Watch Videos


ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಭರತ್ ಅವರೆ ಬರೆದಿದ್ದಾರೆ.  ಭರತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಹೆಚ್.ಕೆ.ಪ್ರಕಾಶ್ ಅವರು ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ  ನಿರ್ಮಿಸುತ್ತಿರುವ "ಸ್ಪೂಕಿ ಕಾಲೇಜ್" ಚಿತ್ರದ ಯಾರು ಊಹಿಸಲಾಗದ ಕ್ಲೈಮ್ಯಾಕ್ಸ್ ಇರುತ್ತೆ ಎಂದು ಹೇಳಲಾಗುತ್ತಿದೆ. ಧಾರವಾಡದಲ್ಲಿರುವ 103 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಕಾಲೇಜು ಈ ಚಿತ್ರದ ಕೇಂದ್ರ ಬಿಂದು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ