Jabardasth Anchor Sowmya Rao about Kannada film industry: ಕರ್ನಾಟಕದ ಅನೇಕ ನಟ-ನಟಿಯರು ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿ ಶೈನ್‌ ಆಗುತ್ತಿರುವುದು ಗೊತ್ತೇ ಇದೆ. ಅಂತೆಯೇ ಅನೇಕ ಬೇರೆ ಭಾಷೆಯಲ್ಲಿ ಮಿಂಚಿರುವ ಸೆಲೆಬ್ರಿಟಿಗಳು ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಅರಸಿ ಬರುತ್ತಿರುವುದು ನಮಗೆಲ್ಲಾ ತಿಳಿದೇ ಇದೆ. ಆದರೆ ಕನ್ನಡದಲ್ಲೇ ಬೆಳೆದ ನಟಿಯೊಬ್ಬರು, ಧಾರಾವಾಹಿ ಶೂಟಿಂಗ್‌ ಸಮಯದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರು ತಮಗೆ ನೀಡಿದ ಸಂಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಎಷ್ಟೊಂದು ಮುದ್ದಾಗಿದೆ ರಿಷಬ್‌ ಶೆಟ್ಟಿ ಮಕ್ಕಳ ರಕ್ಷಾ ಬಂಧನ: ಅಣ್ಣನಿಗೆ ರಾಖಿ ಕಟ್ಟಿ ಸಂಭ್ರಮಿಸಿದ ರಾಧ್ಯ- ಫೋಟೋಸ್‌ ನೋಡಿ


ತೆಲುಗಿನ ಖ್ಯಾತ ನಿರೂಪಕಿ ಮತ್ತು ನಟಿ ಸೌಮ್ಯ ಎಂಬವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ತನಗಾದ ಕೆಟ್ಟ ಅನುಭವಗಳ ಬಗ್ಗೆ ಬಹಿರಂಗಪಡಿಸಿದ್ದಾರೆ.


"ಒಬ್ಬ ನಿರ್ಮಾಪಕ ಹೀರೋಯಿನ್‌ʼಗೋಸ್ಕರ ಅವರ ಮನೆಯಿಂದ ಊಟ ತರುತ್ತಿದ್ದರು. ಅವರ ಬಳಿ ಹೋಗಿ, ನಿನಗೋಸ್ಕರ ಬಾಕ್ಸ್‌ ತಂದಿದ್ದೇನೆ, ಅಲ್ಲಿ ಇಟ್ಟಿದ್ದೇನೆ, ನೀನು ತಿನ್ನಲೇಬೇಕು ಎಂದೆಲ್ಲಾ ಹೇಳುತ್ತಿದ್ದರು. ಆದ್ರೆ ಆ ಬಾಕ್ಸ್‌ ಅನ್ನು ಪ್ರೊಡಕ್ಷನ್‌ ನೀಡುವ ಫುಡ್‌ ಪಕ್ಕದಲ್ಲಿಯೇ ಇಟ್ಟಿದ್ರು. ನಾನು ಊಟ ಮಾಡುವಾಗ ತಪ್ಪಾಗಿ ಅದರಲ್ಲಿದ್ದ ಸಿಹಿತಿಂಡಿಯನ್ನು ಒಂದು ಸ್ಪೂನ್ ನನ್ನ ಪ್ಲೇಟ್‌ʼಗೆ ಬಡಿಸಿಕೊಂಡೆ. ಆದ್ರೆ ಅದನ್ನು ನೋಡಿದ ಅವರು, ಅದು ಹೀರೋಯಿನ್‌ʼಗೆ ತಂದಿರೋದು, ದರಿದ್ರದವಳೇ ನೀನೇಕೆ ತಿಂದೆ ಎಂದು ಕೆಟ್ಟದಾಗಿ ಬೈದಿದ್ದರು" ಅಂತಾ ನಟಿ ಸೌಮ್ಯ ಹೇಳಿದ್ದಾರೆ.


ಮತ್ತಷ್ಟು ಹೇಳಿಕೆ ನೀಡಿದ ಅವರು, "ಇಂತಹ ಕೆಟ್ಟ ಕೆಟ್ಟ ಅನುಭವಗಳು ಅಲ್ಲಿ ತುಂಬಾ ನಡೆದಿವೆ. ತುಂಬಾ ಪಕ್ಷಪಾತ ಮಾಡುತ್ತಿದ್ದರು. ನಿರ್ದೇಶಕ ಕೂಡ ನಾವೇನಾದ್ರೂ ತಪ್ಪು ಮಾಡಿದ್ರೆ ತುಂಬಾ ಕೆಟ್ಟದಾಗಿ ಬೈಯುತ್ತಿದ್ದರು. ಆದ್ರೆ ಹೀರೋಯಿನ್‌ ತಪ್ಪು ಮಾಡಿದಾಗ ಹಲ್ಲು ಕಿಸಿಯುತ್ತಾ ಮತ್ತೊಂದು ಸರಿ ಟೇಕ್‌ ತಗೊಳ್ಳೋಣ, ಎಂದೆಲ್ಲಾ ಹೇಳುತ್ತಿದ್ದರು. ನಮ್ಮನ್ನು ಅಲ್ಲಿ ಕರೆಯುವ ವಿಧಾನವೇ ತುಂಬಾ ಬೇರೆಯದ್ದೇ... ಶಾಟ್‌ ರೆಡಿ ಎಂದು ಹೀರೋಯಿನ್‌ ಅನ್ನು ಕರೆಯುವ ವಿಧಾನವೇ ಬೇರೆ" ಎಂದು ಹೇಳುತ್ತಾ ನಟಿ ಅಸಮಾಧಾನ ಹೊರಹಾಕಿದ್ದಾರೆ.


ಇದನ್ನೂ ಓದಿ: ಈ ಎಲೆಯನ್ನು ಮೂಸಿದ್ರೆ ಸಾಕು: ವಾರವಾದ್ರೂ ಕಡಿಮೆಯಾಗದ ಶೀತ, ಕೆಮ್ಮು, ನೆಗಡಿ ಚಿಟಿಕೆಯಲ್ಲಿ ಗುಣವಾಗುತ್ತೆ!


ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದೇ ತಡ, ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಈ ನಟಿ ವಿರುದ್ಧ ಅನೇಕರು ಉರಿದುಬಿದ್ದಿದ್ದಾರೆ. ಇನ್ನೂ ಕೆಲವರು ಆಕೆಯ ಮಾತಲ್ಲಿ ಸತ್ಯ ಇದೆ ಎಂದು ವಾದಿಸುತ್ತಿದ್ದಾರೆ.


ವಿಡಿಯೋ ಲಿಂಕ್‌ ಇಲ್ಲಿದೆ:


https://www.facebook.com/share/r/uUaBFzGNsNNE6Bfa/?mibextid=D5vuiz


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ